ಜಿಲ್ಲಾ ಸುದ್ದಿಗಳು
ವಿಜಯನಗರ:
ಜಿಲ್ಲೆಯ ಕೂಡ್ಲಿಗಿ ತಾಲೂಕು ಬೊಪ್ಪಲಾಪುರ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಹಳೇ ಕಟ್ಟಡ,ನಿರುಪಯುಕ್ತವಾಗಿದ್ದು ಪೂರ್ತಿ ಪಾಳು ಬಿದ್ದಿದ್ದು ಇದೀಗ ಅನೈತಿಕ ಚಟುವಟಿಕೆಗಳ ತಾಣವಾಗಿದೆ.ಈ ಪಾಳು ಕಟ್ಟಡವುನ್ನು ದುರಸ್ಥಿಗೊಳಿಸಿ ಇತರೆ ರೀತಿಯಲ್ಲಿ ಬಳಕೆ ಮಾಡಬಹುದಾಗಿದೆ, ಹಾಲಿನ ಕೇಂದ್ರಕ್ಕೆ ಹಾಗೂ ಅನಿವಾರ್ಯ ಕಾರಣಕ್ಕೆ ವಿನಿಯೋಗಿಸಲು ಅನುಮತಿ ಕೊರಿದ್ದು ಪ್ರಯೋಜನವಾಗಿಲ್ಲ ಎಂದು ಗ್ರಾಮದ ಮುಖಂಡರು ತಿಳಿಸಿದ್ದಾರೆ.
ಗ್ರಾಮದ ದ್ವಾರಭಾಗಿಲಲ್ಲೇ ಇರುವ ಇದು ವ್ಯಸನಿಗಾರರ ಕಿಡಿಗೇಡಿಗಳ ಅಡ್ಡೆಯಾಗಿದೆ, ಮದ್ಯ ತಂಬಾಕು ಬೀಡಿ ಸಿಗರೇಟ್ ಸೇವನೆಗೆ ಕೇಂದಸ್ಥಾನವಾಗಿದೆ.
ಆನೈತಿಕ ಅಕ್ರಮಗಳು ಜರುಗಲು ವೇದಿಕೆಯಾಗಿದೆ ಕಟ್ಟಡ ಸಾಮೂಹಿಕ ಶೌಚದಂತೆ ಬಳಸಲಾಗುತ್ತಿದೆ. ಮೂತ್ರಾದಿ ವಿಸರ್ಜನೆ ನಡೆಯುತ್ತಿರುವುದರಿಂದಾಗಿ ಸುತ್ತಲೂ ದುರ್ನಾಥ ಹಬ್ಬಿದೆ, ಗ್ರಾಮಸ್ಥರು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜೀವನ ಕಳೆಯೋ ದುಸ್ಥಿತಿ ನಿರ್ಮಾಣವಾಗಿದೆ.ಕಸ ಕೊಳೆತ ರಾಶಿಯಿಂದ ಬರುವ ಕ್ರಿಮಿ ಕೀಟಗಳು ಹತ್ತಿರದ ಮನೆಗಳನ್ನು ಪ್ರವೇಶಿಸುತ್ತಿವೆ,ಇದರಿಂದಾಗಿ ಗ್ರಾಮಸ್ಥರು ನಿತ್ಯ ಆತಂಕದಿಂದ ಜೀವನ ನಡೆಸುವಂತಾಗಿದೆ. ಸಂಬಂಧಿಸಿದಂತೆ ಗ್ರಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ತಂದಿದೆಯಾದರೂ ಪ್ರಯೋಜನವಾಗಿಲ್ಲ, ಜನ ಪ್ರತಿನಿಧಿಗಳು ತೋರಿದ್ದಾರೆಂದು ರೈತ ಸಂಘದ ಮುಖಂಡ ಬಣಕಾರ ಚನ್ನಬಸಪ್ಪ ದೂರಿದ್ದಾರೆ. ಸೊಳ್ಳೆ ಕ್ರಿಮಿ ಕೀಟಗಳ ಹಾವಳಿಯಿಂದಾಗಿ ರೋಗಗಳು ಹೆಚ್ಚಾಗಿ ಆಸ್ಪತ್ರೆಗೆ ಅಲೆದಾಡುವಂತಾಗಿದ್ದು, ಕೊರೋನಾ ಭಿತಿಯೊಂದಿಗೆ ಇಂತಹ ಅನೈರ್ಮಲ್ಯ ವಾತವರಣದಿಂದಾಗಿ ಇನ್ನಷ್ಟು ರೋಗಗಳು ಹೆಚ್ಚಾಗುವ ಭೀತಿ ನಿರ್ಮಾಣವಾಗಿದೆ. ಗ್ರಾಮದಲ್ಲಿ ನೈರ್ಮಲ್ಯತೆ ಕೊರತೆ ಇದ್ದು ಗಂಭೀರ ವಾತಾವರಣ ನಿರ್ಮಾಣ ವಾಗುವ ಸಾಧ್ಯತೆ ಹೆಚ್ಚಿದ್ದು, ಶೀಘ್ರದಲ್ಲಿಯೇ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಗ್ರಾಮಕ್ಕೆ ಭೆಟ್ಟಿ ನೀಡಬೇಕಿದೆ. ಪಿಡಿಓ ಅವರು ಅನುಪಯುಕ್ತವಾಗಿದ್ದು ಗ್ರಾಮಸ್ಥರ ಅಹವಾಲುಗಳಿಗೆ ಸ್ಪಂಧಿಸುತ್ತಿಲ್ಲ, ಕಾರಣ ಶೀಘ್ರವೇ ಬದಲಿಸಬೇಕೆಂದು ಗ್ರಾಮದ ರೈತರು ಒತ್ತಾಯಿಸಿದ್ದಾರೆ. ರೈತ ಸಂಘದ ಜಿಲ್ಲಾಧ್ಯಕ್ಷ ದೇವರ ಮನೆ ಮಹೇಶ ನೇತೃತ್ವದಲ್ಲಿ, ಮುಖಂಡರಾದ ನಾಗರಾಜ, ಬಸವರಾಜ, ಭಿಮಪ್ಪ, ಚಂದ್ರಪ್ಪ, ಪರಶುರಾಮಪ್ಪ, ಮಂಜುನಾಥ ಹಾಗೂ ಬೊಪ್ಪಲಾಪುರ ಗ್ರಾಮ ಘಟಕ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಇದ್ದುರು.
Be the first to comment