ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ವಿಶ್ವದಲ್ಲಿಯೇ ಕೊರೊನಾ ಎಂಬ ಮಹಾಮಾರಿ ಜನಸಾಮಾನ್ಯರಿಗೆ ಭೀಕರ ಪರಿಸ್ಥಿತಿಯನ್ನು ಒದಗಿಸಿದೆ. ಇದಕ್ಕಾಗಿ ನಾವು ಕೆಲ ಅನುಶಾಸನಗಳನ್ನು ಪಾಲಿಸಲೇ ಬೇಕಾದ ಅನಿವಾರ್ಯತೆ ಬಂದೊದಗಿದೆ. ಆದ್ದರಿಂದ ಆರೋಗ್ಯ ಇಲಾಖೆಯಿಂದ ಹೊರಡಿಸಿದ ಎಲ್ಲ ನಿಯಮಗಳೊಂದಿಗೆ ನಾವು ಹೆಚ್ಚಿನ ಜಾಗೃತರಾಗಬೇಕಿದೆ ಎಂದು ತಾಲೂಕಾ ಬಿಜೆಪಿ ಮಂಡಲ ಅಧ್ಯಕ್ಷ ಪರಶುರಾಮ ಪವಾರ ಹೇಳಿದರು.
ಮುದ್ದೇಬಿಹಾಳ ಪಟ್ಟಣದ ಮಾರುತಿ ನಗರ ನಿವಾಸಿಗರಿಗೆ ಕನ್ಹೇರಿ ಮಠದಿಂದ ಒದಗಿಸಲಾದ ರೋಗನಿರೋಧಕ ಶಕ್ತಿ ಹೆಚ್ಚಿಸುವ ದ್ರವವನ್ನು ಬಡಾವಣೆ ಜನರಿಗೆ ಹಂಚಿಕೆ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಮಠದ ಶ್ರೀಗಳು ಕಳಿಸಿರುವ ಶಕ್ತಿ ದ್ರವವನ್ನು ಗರ್ಭಿಣಿ ಮಹಿಳೆಯರಿಗೆ ಹಾಗೂ ಪುಟ್ಟ ಮಕ್ಕಳಿಗೆ ನೀಡಬಾರದು ಎಂದು ತಿಳಿಸಿದ್ದು ಜನರು ದ್ರವವನ್ನು ನಿಯಮಾನುಸಾರವಾಗಿಯೇ ಸ್ವೀಕರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸ್ತ್ರಿ ಶ್ರೀಗಳು ಮಾತನಾಡಿ, ದೇಶಕ್ಕೆ ಮಹಾಮಾರಿಯಾಗಿ ಕಾಡುತ್ತಿರುವ ಕೊರೊನಾ ಸೋಂಕಿನಿಂದ ಪ್ರತಿಯೊಬ್ಬರನ್ನು ಉಳಿಸಬೇಕು ಎನ್ನುವ ಉದ್ದೇಶದಿಂದ ಆಯುರ್ವೇಧ ಆಚಾರ್ಯಗಳನ್ನು ಹುಟ್ಟುಹಾಕುವಂತ ಮಠದಲ್ಲಿ ಕನ್ಹೇರಿ ಮಠ ಮೊದಲನೇದಾಗಿದೆ. ಆದ್ದರಿಂದ ಕಳೆದ ವರ್ಷದಿಂದ ಹಲವು ವೈದ್ಯರು ಕೂಡಿಕೊಂಡು ಒಂದು ಶಕ್ತಿದಾಯಕ ದ್ರವವನ್ನು ಕಂಡು ಹಿಡಿದಿದ್ದು ಅದನ್ನು ರಾಜ್ಯಾದ್ಯಂತ ಉಚಿತವಾಗಿ ನೀಡಲಾಗುತ್ತಿದ್ದು ಮಠದ ಕಾರ್ಯ ಶ್ಲಾಘನೀಯವಾದದು ಎಂದು ಹೇಳಿದರು.
ಇದೇ ವೇಳೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಪರಶುರಾಮ ಪವಾರ ಅವರು ಶ್ರೀಮಠದಿಂದ ನೀಡಲಾದ ದ್ರವ ಉಪಯೋಗಿಸುವ ಬಗ್ಗೆ ವಿಸ್ತಾರವಾಗಿ ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯೆ ಪ್ರತಿಭಾ ಪಾಟೀಲ, ಸಮಾಜ ಸೇವಕ ಹುಲಗೇಶ ಇಳಗೇರ, ಸದು ಮಠ, ಬಸಯ್ಯ ನಂದಿಕೇಶ್ವರಮಠ ಸೇರಿದಂತೆ ಬಡಾವಣೆ ನಿವಾಸಿಗಳಿದ್ದರು.
Be the first to comment