ಉಡುಪಿಯ ಜಿಲ್ಲೆಯಾದ್ಯಂತ ಬೀದಿ ಬೀದಿಗಳಲ್ಲಿ ಅಕ್ರಮ ಮಟ್ಕಾ ದಂದೆ ನಡೆಯುತ್ತಿದೆ – ಡಿ.ಎಸ್.ಎಸ್ ರಾಜ್ಯ ಮುಖಂಡ ಶೇಖರ ಹವಂಜೆ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

ಉಡುಪಿ

ಉಡುಪಿ ಜಿಲ್ಲಾದ್ಯಂತ ಬೀದಿ ಬೀದಿಗಳಲ್ಲಿ ನಡೆಯುತ್ತಿರುವ ಅಕ್ರಮ ಮಟ್ಟಾ ದಂಧೆಯ ಸಂಪೂರ್ಣ ಕಡಿವಾಣ ಹಾಕಿ ಬಂದ್ ಮಾಡಿಸುವಂತೆ ಡಿ.ಎಸ್.ಎಸ್ ಸಂಘಟನೆಯ ದೂರು ನೀಡಿದೆ.ಉಡುಪಿಯ ಬೀದಿ ಬೀದಿಗಳಲ್ಲಿ ನಗರ, ಪಟ್ಟಣ ಹಳ್ಳಿಗಳನ್ನು ಬಿಟ್ಟಿಲ್ಲ. ಈ ಮಟ್ಟಾ ದಂಧೆ, ಕೂಲಿ ನಾಲಿಯಿಂದ ಬಂದ ನಾಲ್ಕು ಕಾಸು ಮಟ್ಟ ಪಾಲು, ಬಹಿರಂಗವಾಗಿ ಆಕ್ರಮ ಚಟುವಟಿಕೆ ನಡೆಯುತ್ತಿದ್ದರೂ ಕಣ್ಣು ಮುಚ್ಚಿ ಕುಳಿತ ಸಂಬಂಧಪಟ್ಟ ಇಲಾಖೆಗಳು ಶ್ರೀ ಕೃಷ್ಣನ ಊರಿನಲ್ಲಿ ನಡೆಯುತ್ತಿರುವ ಈ ಒಂದು ಬೃಹತ್ ದಂಧೆಯ ಬಗ್ಗೆ ಕೇಳಿದರೆ ನಿಜಕ್ಕೂ ಶಾಕ್ ಆಗುವಂತದ್ದು. ಬುದ್ಧಿವಂತರ ಜಿಲ್ಲೆಯಲ್ಲಿ ಮಟ್ಕಾ ಜಾಲ ಎಗ್ಗಿಲ್ಲದೆ ನಡೆಯುತ್ತಿದೆ. ಕೇವಲ ನಗರ ಪ್ರದೇಶ ಮಾತ್ರವಲ್ಲದೆ ಪಟ್ಟಣ ಗ್ರಾಮಾಂತರ ಪ್ರದೇಶ ಸೇರಿದಂತ ಮಟ್ಟ ಪುಟ್ಟ ಹಳ್ಳಿಗಳಲ್ಲೂ ವ್ಯಾಪಕವಾಗಿ ಹರಡಿಬಿಟ್ಟಿದೆ ಈ ಒಂದು ದಂಧೆ. ಪುಟ್ಟ ಪುಟ್ಟ ಅಂಗಡಿಗಳು, ಖಾಲಿ ಅಂಗಡಿಗಳನ್ನೇ ತಮ್ಮ ಆಡ್ಡೆ ಮಾಡಿಕೊಂಡಿರುವ ದಂಧೆಕೋರರು ಯಾರ ಭಯವಿಲ್ಲದೆ ರಾಜಾರೋಷವಾಗಿ ಮಟ್ಕಾ ದಂಧೆ ನಡೆಸಿಕೊಂಡು ಬರುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಉತ್ತರ ಕರ್ನಾಟಕದಿಂದ ಕೂಲಿ ನಾಲಿಗೆ ಬಂದಿರುವ ವಲಸೆ ಕಾರ್ಮಿಕರು, ಮಲ್ಪೆ ಬಂದರಿನಲ್ಲಿ ಕೆಲಸ ಮಾಡುವ ಬೋಟ್‌ ಕಾರ್ಮಿಕರು ಹಾಗೂ ಪರಿಶಿಷ್ಟ ವರ್ಗದ ಜನರು ಹೆಚ್ಚಾಗಿರುವ ಪ್ರದೇಶಗಳೇ ಈ ದಂಧೆ ಕೋರರ ಟಾರ್ಗೆಟ್ ಆಗಿದೆ. ಉಡುಪಿಯ ಸಿಟಿ ಬಸ್ ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣ, ಆದಿ ಉಡುಪಿ, ಮಲ್ಪೆ ಬಂದರು, ಕರಾವಳಿ ಬೈಪಾಸ್, ಹೆಬ್ರಿ, ಕಾರ್ಕಳ, ಕೊಕ್ಕರ್ಣೆ,ಕುಂದಾಪುರ, ಬೈಂದೂರು, ಕಾಮ, ಕಟಪಾಡಿ, ಉದ್ಯಾವರ ಹಾಗೂ ಜಿಲ್ಲೆಯ ಎಲ್ಲಾ ಭಾಗಗಳಲ್ಲಿಯೂ ಕೂಡಾ ನಡೆಯುವಂತಹ ಈ ದಂಧೆಯ ದಿನಕ್ಕೆ ಬರೋಬ್ಬರಿ 2,00,00,000/- (ಎರಡು ಕೋಟಿ) ರೂಪಾಯಿಗೂ ಮಿಕ್ಕಿ ಅಕ್ರಮ ವ್ಯವಹಾರ ನಡೆಸಲಾಗುತ್ತಿದೆ ಎನ್ನುವುದು ನಿಜಕ್ಕೂ ಅಚ್ಚರಿ ತರುತ್ತದೆ.

CHETAN KENDULI

ದಲಿತ ಕುಟುಂಬಗಳು ಈ ಮಟ್ಕಾ ದಂದೆಗೆ ಬಲಿಯಾಗುತ್ತಿರುವ ಕಾರಣಕ್ಕೆ ನಮ್ಮ ಸಂಘಟನೆ ಮಟ್ಟಾ ಜುಗಾರಿ ವಿರುದ್ಧ ಹೋರಾಟಕ್ಕೆ ಮುಂದಾಗಿದೆ. ಈಗಾಗಲೇ ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಸಂಘಟನೆಯ ಕಾರ್ಯ ಕರ್ತರು ಅಕ್ರಮ ಮಟ್ಟಾ ದಂಧೆಯ ವೀಡಿಯೋಗಳನ್ನು ಸಂಗ್ರಹಿಸಿ ಪೋಲಿಸರಿಗೆ ನೀಡಿದ್ದಾರೆ. ಆದರೆ ಪೋಲಿಸ್ ಇಲಾಕೆ ಈ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದು ನಮ್ಮ ಸಂಘಟನೆಗೆ ತುಂಬಾನೇ ನೋವಾಗಿರುವ ವಿಷಯವಾಗಿದೆ. ಹೀಗಾಗಿ ನಮ್ಮ ಸಂಘಟನೆಯು ಮಟ್ಟಾ ಜುಗಾರಿಯನ್ನು ಮಟ್ಟ ಹಾಕಲು ಭೀಮ ಸೈನ್ಯವನ್ನು ಕಟ್ಟಿಕೊಂಡು ಹೋರಾಟ ಮಾಡಲು ಸಿದ್ಧವಾಗಿದೆ. ಪೋಲಿಸ್ ಇಲಾಖೆಗಳಿಂದ ಆಗದಿದ್ದುದನ್ನು ನಾವು ಮಾಡಿ ತೋರಿಸುತ್ತೇವೆ. ಅದಕ್ಕೆ ಮಾನ್ಯ ದಕ್ಷ ಹಾಗೂ ಪ್ರಮಾಣಿಕ ಜಿಲ್ಲಾಧಿಕಾರಿಗಳಾದ ತಾವು ಅವಕಾಶ ಕೊಡದೇ ಜಿಲ್ಲಾದ್ಯಂತ ನಡೆಯುತ್ತಿರುವ ಈ ಒಂದು ಬೃಹತ್ ಅಕ್ರಮ ಮಟ್ಕಾ ದಂಧೆಯನ್ನು ಸಂಪೂರ್ಣ ಬಂದು ಮಾಡಿಸಿ ಸಂಬಂಧಪಟ್ಟವರ ವಿರುದ್ಧ ಗೂಂಡಾ ಕಾಯಿದೆಯಡಿ ಪ್ರಕರಣ ದಾಖಲಿಸಬೇಕಾಗಿ ಸಂಘಟನೆಯು ಮಾನ್ಯರಲ್ಲಿ ಈ ಮೂಲಕ ಶೇಖರ್ ಹವಂಜೆ ರಾಜ್ಯ ಸಂಘಟನಾ ಸಂಚಾಲಕರು ಉಡುಪಿ ಜಿಲ್ಲೆ,ರಮೇಶ್ ಮಾಬಿಯಾನ್ ಜಿಲ್ಲಾ ಸಂಘಟನಾ ಸಂಚಾಲಕರುರಮೇಶ್ ಹರಿಖಂಡಿಗೆಜಿಲ್ಲಾ ಸಂಘಟನಾ ಸಂಚಾಲಕರು ಉಡುಪಿ ಜಿಲ್ಲೆಗೋಪಾಲ್ ಇಸರ್‌ಮಾರ್ ಜಿಲ್ಲಾ ಅಧ್ಯಕ್ಷರು ಆರ್.ಪಿ.ಐ.ಕ ಉಡುಪಿ ,ಕೃಷ್ಣ ಮಾವಿನಕಟ್ಟೆ ಜಿಲ್ಲಾ ಸಂಘಟನಾ ಸಂಚಾಲಕರು ಮುಂತಾದವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*