ಉಪ್ಪಿಟ್ಟಿಗೆ ಬಿದ್ದ ಹಾವಿನ ಮರಿ : 50 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

ಯಾದಗಿರಿ

ಉಪಹಾರದಲ್ಲಿ ಹಾವು ಪತ್ತೆಯಾಗಿದ್ದು ಇದೇ ಉಪಹಾರ ಸೇವಿಸಿ 52 ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆ ಸೇರಿರುವ ಘಟನೆ ಯಾದಗಿರಿ ತಾಲೂಕಿನ ಅಬ್ಬೆತುಮಕೂರನ ವಿಶ್ವರಾಧ್ಯ ವಿದ್ಯಾವರ್ಧಕ ವಸತಿ ಶಾಲೆಯಲ್ಲಿ ನಡೆದಿದೆ.ಇಂದು ಬೆಳಿಗ್ಗೆ ಉಪಹಾರವಾಗಿ ವಿದ್ಯಾರ್ಥಿಗಳು ಉಪ್ಪಿಟ್ಟು ಸೇವಿಸಿ ಅಸ್ವಸ್ಥಗೊಂಡಿದ್ದಾರೆ. ಇನ್ನು ಉಪಹಾರದಲ್ಲಿ ಸತ್ತ ಹಾವಿನ ಮರಿ ಪತ್ತೆಯಾಗಿದೆ. ಇತ್ತ ಹಾವಿನ ಮರಿ ಪತ್ತೆಯಾದ ನಂತರ ವಿದ್ಯಾರ್ಥಿಗಳು ಇನ್ನು ಹೆಚ್ಚು ಆತಂಕಗೊಂಡಿದ್ದಾರೆ.

CHETAN KENDULI

ಸದ್ಯ ಅಸ್ವಸ್ಥಗೊಂಡ 52 ವಿದ್ಯಾರ್ಥಿಗಳಿಗೆ ಮುದ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಹೆಚ್ಚಿನ ಚಿಕಿತ್ಸೆ ಪಡೆಯಲು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.ಆಸ್ಪತ್ರೆಗೆ ಟಿಹೆಚ್ಓ ಹಣಮಂತರೆಡ್ಡಿ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿ ವಿದ್ಯಾರ್ಥಿಗಳಿಗೆ ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹಣಮಂತರೆಡ್ಡಿ ಮಾಹಿತಿ ನೀಡಿದ್ದಾರೆ.

Be the first to comment

Leave a Reply

Your email address will not be published.


*