ಜಿಲ್ಲಾ ಸುದ್ದಿಗಳು
ಭಟ್ಕಳ:
ಭಟ್ಕಳ ನಗರ ಭಾಗದ ಹಳೇ ಬಸ್ ಸ್ಟ್ಯಾಂಡ್ ನಲ್ಲಿರುವ ಪ್ರಾಚೀನ ಕಾಲದಿಂದಲೂ ಮೀನು ಮಾರಾಟ ಮಾಡುತ್ತಾ ಬಂದಿರುವ ಮೀನು ಮಾರುಕಟ್ಟೆಯಿಂದ ತಮ್ಮನ್ನು ಬೆರೆಕಡೆ ಕಳುಹಿಸುವ ಸಲುವಾಗಿ ಕಳೆದ ಒಂದು ವಾರದಿಂದ ಯಾವುದೇ ಸ್ವಚ್ಚತೆ ಮಾಡದೇ ಮೀನು ಮಾರುವ ಮಹಿಳೆಯರು ಅಲ್ಲಿ ಕುಳಿತುಕೊಳ್ಳದಂತೆ ಮಾಡಿದ್ದಾರೆ ಎಂದು ರೊಚ್ಚಿಗೆದ್ದ ಮೀನು ಮಾರಾಟ ಮಹಿಳೆಯರು ಪುರಸಭೆ ಗೆ ಮುತ್ತಿಗೆ ಹಾಕಿ , ತಾವು ತಂದ ಮೀನುಗಳನ್ನು ಪುರಸಭೆ ಮುಖ್ಯ ದ್ವಾರದಬಳಿ ಎಸೆದು ಪ್ರತಿಭಟನೆ ನಡೆಸಿದರು.
ಕಳೆದ 6 ದಿನಗಳಿಂದ ಮೀನು ಮಾರುವ ಮಹಿಳೆಯರು ಸ್ವತಃ ತಾವೇ ಹಣಕೊಟ್ಟು ಮೀನು ಮಾರುಕಟ್ಟೆ ಸ್ವಚ್ಚ ಮಾಡುತ್ತ ಬಂದಿದ್ದು, ಇಂದು ಅವರು ಸ್ವಚ್ಛ ಮಾಡಿರುವ ಸ್ಥಳವನ್ನು ಯಾರೋ ಮೀನಿನ ಹಾಗೂ ಕೋಳಿ ತ್ಯಾಜ್ಯವನ್ನು ತಂದು ಹಾಕಿ ಮಲಿನಗೊಳಿಸಿದ ಪರಿಣಾಮವಾಗಿ ರೊಚ್ಚಿಗೆದ್ದ ಮಹಿಳೆಯರು ಪುರಸಭೆ ಕಾರ್ಯಾಲಯದ ಎದುರು ಪ್ರತಿಭಟಿಸುವ ಮೂಲಕ ಪುರಸಭೆಯ ಅಧಿಕಾರಿಗಳಿಗೆ ಮೀನು ಮಾರುಕಟ್ಟೆ ಸ್ವಚ್ಚ ಮಾಡುವಂತೆ ಖಡಕ್ ಎಚ್ಚರಿಕೆ ನೀಡಿ , ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ತಾವು ಮಾರಾಟಕ್ಕೆ ತಂದ ಮೀನುಗಳನ್ನು ಪುರಸಭೆ ಮುಖ್ಯದ್ವಾರದ ಬಳಿ ಎಸೆದು ಪ್ರತಿಭಟನೆ ನಡೆಸಿದರು.
ಮೀನು ಮಾರಾಟ ಮಹಿಳೆಯರ ಪ್ರತಿಭಟನೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಪುರಸಭೆ ಅಧ್ಯಕ್ಧ ಪರ್ವೇಜ್ ಕಾಶಿಮ್ ಅವರು ಹಳೆ ಮೀನು ಮಾರುಕಟ್ಟೆಯನ್ನು
ಹೊಸ ಮೀನು ಮಾರುಕಟ್ಟೆ ಗೆ ಸ್ಥಳಾಂತರ ಮಾಡುವುದು ಸರಕಾರದ ಆದೇಶ ಆಗಿದ್ದು , ತಾವು ಅದ್ರಂತೆ ಕ್ರಮ ಕೈ ಗೊಳ್ಳುವುದ್ದಾಗಿ ತಿಳಿಸಿದರು. ಹಳೆ ಮೀನು ಮಾರುಕಟ್ಟೆಯಲ್ಲಿ ಮೀನು ಮಾರುವುದು ಕಾನೂನು ಬಾಹಿರ ಎಂದು ತಿಳಿಸಿದರು. ತಾವು ಈ ರೀತಿಯ ರಾಜಕೀಯ ಪ್ರೇರಿತ ಬಹಳಷ್ಟು ಪ್ರತಿಭಟನೆ ನೋಡಿದ್ದೇನೆ , ತಾವು ಯಾವುದೇ ಪ್ರತಿಭಟನೆಗೆ ಬಗ್ಗುವುದಿಲ್ಲ , ತಾವು ಹಳೆ ಮೀನು ಮಾರುಕಟ್ಟೆಯನ್ನು ಹೊಸ ಮೀನು ಮಾರುಕಟ್ಟೆಗೆ ಸ್ಥಳಾಂತರ ಮಾಡಿಯೇ ಸಿದ್ದ ಎಂದು ತಿಳಿಸಿದರು.
Be the first to comment