ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ದಶಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಣ್ಯಾಪುರ ಗ್ರಾಮದಲ್ಲಿ. ಚಪ್ಪರದಳ್ಳಿ ಭಾಗದಲ್ಲಿ ಬುಹುತೇಕ ಚರಂಡಿಗಳು ಕಸ ತ್ಯಜ್ಯ ನೀರು ನಿಂತು ಕೊಳೆತು ನಾರುತ್ತಿವೆ,ಕೆಲವೆಡೆಗಳಲ್ಲಿ ವರ್ಷವಾದರೂ ಚರಂಡಿಗಳು ಸ್ವಚ್ಚತೆ ಕಂಡಿಲ್ಲ,ಹಲವೆಡೆಗಳಲ್ಲಿ ಹಲವು ತಿಂಗಳಾದರೂ ಸ್ವಚ್ಚತೆ ಕಂಡಿಲ್ಲ ಎಂದು ಇಲ್ಲಿಯ ವಾಸಿಗಳು ದೂರಿದ್ದಾರೆ. ಸಂಬಂಧಿಸಿದಂತೆ ಸಾಕಷ್ಟು ಭಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದಿದೆ,ಪ್ರಯೋಜನವಾಗಿಲ್ಲ ಕೆಲವು ಭಾರಿ ಸದಸ್ಯರು ಸ್ವಚ್ಚ ಮಾಡಿಸುವುದಾಗಿ ತಿಳಿಸಿದ್ದಾರೆ ಮಾಡಿಸಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯರು ತುಂಬಾ ಪ್ರಾಮಾಣಿಕರು ಹಾಗೂ ಜನಪರ ಕಾಳಜಿಯವರಾಗಿದ್ದಾರೆ, ಆದರೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಬೇಜವಾಬ್ಧಾರಿ ತೋರುತ್ತಿದ್ದಾರೆ ಎಂದು ಗ್ರಾಮದ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚರಂಡಿ ಸಂಪೂರ್ಣ ತುಂಬಿ ಹೋಗಿದ್ದು ಸೊಳ್ಳೆಗಳು ಕ್ರಿಮಿ ಕೀಟಗಳ ತಾಣವಾಗಿದ್ದು,ದುರ್ನಾಥ ಬೀರುತ್ತಿವೆ ಇದರಿಂದಾಗಿ ರೋಗ ಋಜನೆಗಳು ತಾಂಡವಾಡುತ್ತಿವೆ. ಹತ್ತಿರದಲ್ಲಿಯೇ ಅಂಗನವಾಡಿ ಕೇಂದ್ರ ಇದ್ದು ಚರಂಡಿಯಲ್ಲಿಯ ಸೊಳ್ಳೆಗಳು ಮಕ್ಕಳನ್ನು ಭಾದಿಸುತ್ತಿವೆ ಇದರಿಂದಾಗಿ ಆಸ್ಪತ್ರೆಗಳಿಗೆ ಅಲೆಯುವಂತಾಗಿದೆ, ಚರಂಡಿಗೆ ಅಂಗನವಾಡಿ ಶಾಲೆ ಹೊಂದಿಕೊಂಡಿದ್ದು ಶಾಲೆಗೆ ಬರುವ ಮಕ್ಕಳು ಕೂಡ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವಂತಾಗಿದೆ ಎಂದು ಕೆಲ ಪ್ರಜ್ಞಾವಂತರು ದೂರಿದ್ದಾರೆ. ಗ್ರಾಪಂ ಅಧಿಕಾರಿಗಳು ಶೀಘ್ರವೇ ಚಪ್ರದಳ್ಳಿಯಲ್ಲಿ ತುಂಬಿರುವ ಚರಂಡಿಗಳನ್ನು ಸ್ವಚ್ಚಗೊಳಿಸದಿದ್ದರೆ,ಸಂಬಂಧಿಸಿದಂತೆ ವೀಡಿಯೋ ಫೋಟೋ ಹಾಗೂ ಗ್ರಾಮಸ್ಥರ ಹೇಳಿಕೆಯನ್ವಯ, ಗ್ರಾಮದ ಮುಖಂಡರು ಹಾಗೂ ಮಹಿಳೆಯರ ನೈತೃದಲ್ಲಿ.ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದೆಂದು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಪ್ರಭಾವಿಗಳ ಗೊಂಬೆಯಂತೆ ವರ್ತಿಸುತ್ತಿದ್ದು, ಸರ್ಕಾರದ ಸಂಬಳ ಪಡೆಯುವ ಅವರು ಜನರ ಅಹವಾಲಿಗೆ ಸ್ಪಂಧಿಸಬೇಕಿದೆ. ಗ್ರಾಮಸ್ಥರ ನೋವು ಆಲಿಸದೇ ಕೇವಲ ಸದಸ್ಯರ ಸೇವಕರಂತೆ ವರ್ತಿಸಿದರೆ, ನಿರ್ಲಕ್ಷ್ಯ ತೋರಿದರೆ ಕಾನೂನು ರೀತ್ಯಾ ಪಶ್ಚಾತ್ತಾಪ ಪಡಬೇಕಾಗುತ್ತದೆ. ಅವರಿಗೆ ಜನರ ಸೇವೆ ಮಾಡಲೆಂದು ಸರ್ಕಾರ ಸಂಬಳ ಕೊಟ್ಟು ನೇಮಿಸಿದ್ದು, ಅದನ್ನು ಮರಿಯ ಬಾರದು ಎಂದು ವಂದೇ ಮಾತರಂ ಜಾಗೃತಿ ವೇದಿಕೆ ಮುಖಂಡರು ಹೇಳಿಕೆ ನೀಡಿ ಗ್ರಾಪ ಪಿಡಿಓಗೆ ಎಚ್ಚರಿಸಿದ್ದಾರೆ. ಶೀಘ್ರವೇ ಚರಂಡಿಗಳು ಸ್ವಚ್ಚಗೊಳ್ಳಬೇಕು ಹಾಗೂ ಮೂಲ ಭೂತ ಸೌಕರ್ಯಗಳ ಕೊರೆತೆ ಇದ್ದು, ಅವುಗಳನ್ನು ಕೂಡಲೇ ವದಗಿಸಬೇಕಿದೆ. ನಿರ್ಲಕ್ಷ್ಯ ತೋರಿದ್ದಲ್ಲಿ ಕಾನೂನು ರೀತ್ಯ ಹೋರಾಟ ಅನಿವಾರ್ಯ ಎಂದು, ವಂದೇ ಮಾತರಂ ಜಾಗೃತಿ ವೇದಿಕೆ ಮುಖಂಡರು ಈ ಮೂಲಕ ಎಚ್ಚರಿಸಿದ್ದಾರೆ.
Be the first to comment