ಜಿಲ್ಲಾ ಸುದ್ದಿಗಳು
ಬಾಗಲಕೋಟ :ಆಂಧ್ರಪ್ರದೇಶದ ಸುಕ್ಷೇತ್ರ ಶ್ರೀಶೈಲಕ್ಕೆ ಪಾದಯಾತ್ರೆ ಹೋಗಿದ್ದ ವೇಳೆ ಅಲ್ಲಿ ನಡೆದ ಘರ್ಷಣೆಯಲ್ಲಿ ತೀವ್ರವಾಗಿ ಗಾಯಗೊಂಡು, ಸಧ್ಯ ಬೆಂಗಳೂರಿನ ನಿಮಾನ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಶೈಲ ವಾರಿಮಠ ಆರೋಗ್ಯವನ್ನು ಬಿಜೆಪಿ ಧುರೀಣ ಮಲ್ಲಿಕಾರ್ಜುನ ಚರಂತಿಮಠ ವಿಚಾರಿಸಿದರು.ಸೋಮವಾರ ಬೆಂಗಳೂರಿನ ಹೊಸೂರು ರಸ್ತೆಯ ನಿಮಾನ್ಸ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಶ್ರೀಶೈಲನ ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು.
ಗಾಯಾಳು ಶ್ರೀಶೈಲನ ಸಹೋದರ ಶಿವು ವಾರಿಮಠ ಅವರಿಗೆ ಧೈರ್ಯ ಹೇಳಿದ್ದು, ಚಿಕಿತ್ಸೆಯ ಸಂಪೂರ್ಣ ವೆಚ್ಚ ಸರ್ಕಾರ ಭರಿಸಲಿದೆ ಎಂದು ಹೇಳಿ ವ್ಯವಸ್ಥಿತವಾಗಿ ಚಿಕಿತ್ಸೆ ದೊರೆಯುವಂತೆ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಮನವಿ ಮಾಡಿದರು.
ಮಲ್ಲಿಕಾರ್ಜುನ ಚರಂತಿಮಠ ಅವರು ಇದೇ ವೇಳೆ ಶಿವು ವಾರಿಮಠ ಅವರ ಕುಟುಂಬಕ್ಕೆ ತಮ್ಮ ವೈಯಕ್ತಿಕವಾಗಿ 25 ಸಾವಿರ ರೂ.ಗಳ ಆರ್ಥಿಕ ನೆರವು ನೀಡಿದರು.
Be the first to comment