ಡಿ.೨೮ಕ್ಕೆ ದಸಂಸ ವತಿಯಿಂದ ವಿಧಾನಸೌಧ ಚಲೋ ಕಾರ್ಯಕ್ರಮ

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಡಿ.೨೮ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಸಬಲೀಕರಣಕ್ಕಾಗಿ ಸಂಘರ್ಷ ರ್‍ಯಾಲಿಯನ್ನು ಮಧ್ಯಾಹ್ನ ೧೨ಕ್ಕೆ ಚಿಕ್ಕಲಾಲ್‌ಬಾಗ್‌ನಿಂದ ವಿಧಾನಸೌಧ ಚಲೋಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕೆಂದು ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಹೇಳಿದರು. 

CHETAN KENDULI

ಪರಿಶಿಷ್ಟ ಜಾತಿ ವರ್ಗ ದೌರ್ಜನ್ಯ ನಿಯಂತ್ರಣ ಕಾಯ್ದೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು, ಕೇಂದ್ರ ಸರಕಾರ ಕರ್ನಾಟಕದ ಮಾದರಿಯಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆ ಜಾರಿಗೊಳಿಸಬೇಕು. ವಿದ್ಯಾರ್ಥಿ ವೇತನ, ಬಡ್ತಿ ಮೀಸಲಾತಿ, ಬ್ಯಾಕ್‌ಲಾಗ್ ನೇಮಕಾತಿ, ಗುತ್ತಿಗೆ ಮತ್ತು ಸಂಗ್ರಹಣೆ ಒಂದು ಕೋಟಿ ಅನುಷ್ಠಾನಗೊಳಿಸಲು, ರಾಜ್ಯದ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯ ಅನುಸಾರ ೨೦೧೪ರ ಹಂಚಿಕೆಯಾಗಿರುವ ಹಣದ ಬಗ್ಗೆ, ಸಾರ್ವಜನಿಕ ಲೆಕ್ಕ ಪರಿಶೋದನೆ, ಕಾಯ್ದೆಯ ಕಾಲಂ ೭ಡಿ ರದ್ದಾಗಬೇಕು. ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರುವುದು, ಸುಪ್ರಿಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದು ಹೀಗೆ ಹಲವು ಹಕ್ಕೋತ್ತಾಯಗಳ ಜಾರಿಗೆ ಆಗ್ರಹಿಸಿ ಬೃಹತ್ ರ್‍ಯಾಲಿಯ ಮೂಲಕ ರಾಜ್ಯ ಸರಕಾರದ ಗಮನಸೆಳೆಯಲಿದ್ದು, ಕೂಡಲೇ ರಾಜ್ಯ ಸರಕಾರ ಡಿಎಸ್‌ಎಸ್‌ನ ಸುಮಾರು ೨೦ಕ್ಕೂ ಹೆಚ್ಚು ಬೇಡಿಕೆಗಳನ್ನು ಈಡೇರಿಸುವಂತಾಗಬೇಕು. ಈ ಬೃಹತ್ ಮಟ್ಟದ ರ್‍ಯಾಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಯ ಕಾರ್ಯಕರ್ತರು, ಪದಾಧಿಕಾರಿಗಳು ಪಾಲ್ಗೊಂಡು ಯಶಸ್ವಿಗೊಳಿಸಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*