ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ತಾಲೂಕಿನ ಅಗಸಬಾಳ ಗ್ರಾಮದ ಬಸನಗೌಡ ಪಾಟೀಲ ಅವರ ಕುಟುಂಬದ ನೇತೃತ್ವದಲ್ಲಿ ಪ್ರತಿ ವರ್ಷ ನಡೆಯುವ ನಡಗೇರಿ ಲಿಂಗೇಶ್ವರ ಪಲ್ಲಕ್ಕಿ ಉತ್ಸವ ಹಾಗೂ ಪವಾಡ ಪುರುಷ ಬಸಪ್ಪ ಪೂಜಾರಿ ಅವರ ಪುಣ್ಯಸ್ಥತಿ ಕಾರ್ಯಕ್ರಮವು ಅದ್ದೂರಿಯಿಂದ ನಡೆಯಿತು.
ಬೆಳಿಗ್ಗೆ 8 ಗಂಟೆಗೆ ನಡಗೇರಿ ಲಿಂಗೇಶ್ವರರ ಮೂರ್ತಿಯ್ನು ಗಂಗಸ್ಥಳಕ್ಕೆ ಕರೆಯ್ದೊಯಲಾಯಿತು. ನಂತರ ವಿವಿಧ ತಾಲೂಕಿನಿಂದ ವಿಶೇಷ ಡೊಳ್ಳು ಕುಣಿತದ ಮೂಲಕ ಪಲ್ಲಕ್ಕಿ ಉತ್ಸವವನ್ನು ನೆರವೇರಿಸಲಾಯಿತು.
ಗಮನ ಸೇಳೆದ ಕೊಕೊಟನೂರ ಡೊಳ್ಳು ಸಂಘ:
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕೊಕೊಟನೂರ ಗ್ರಾಮದ ಗುರುಸಿದ್ದ ಪೂಜಾರಿ ಅವರ ಜಟ್ಟಡಂಗರಾಯ ವಾಳದ ಸಂಘದವರು ನಡಗೇರಿ ಲಿಂಗೇಶ್ವರ ಜಾತ್ರೆಯಲ್ಲಿ ಡೊಳ್ಳು ಕುಣಿತದೊಂದಿಗೆ ಹಗ್ಗದಿಂದ ಎತ್ತಿಗೆ ಬೇಕಾಗುವ ಲಡ್ಡನ್ನು ಮಾಡುವ ಮೂಲಕ ಗ್ರಾಮಸ್ಥರ ಗಮನ ಸೇಳೆದರು.
ಈ ಸಂದರ್ಭದಲ್ಲಿ ರವಿ ಪಾಟೀಲ, ಲಕ್ಷö್ಮಣಗೌಡ ಬಿರಾದಾರ, ಅಯ್ಯಪ್ಪ ಪೂಜಾರಿ, ಶಂಕರಗೌಡ ಪಾಟೀಲ, ಬೀರಪ್ಪ ಪೂಜಾರಿ, ಶಿವಶಂಕರಾಯ ಉಪ್ಪಲದಿನ್ನಿ, ಶಿವಣ್ಣ ಪೂಜಾರಿ, ಗುರಣ್ಣ ಪೂಜಾರಿ, ಮಲ್ಲನಗೌಡ ಪಾಟೀಲ, ಬಸಪ್ಪ ಪೂಜಾರಿ, ನಾಗಪ್ಪ ಪೂಜಾರಿ ಸೇರಿದಂತೆ ಗ್ರಾಮದ ಪ್ರಮುಖರು ಇದ್ದರು.
Be the first to comment