ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಸಮಾಜದಲ್ಲಿ ಮಹಿಳೆಯ ಸೇವೆ ಸಾಕಷ್ಟಿದೆ. ಆದರೆ ಅದಕ್ಕೆ ಬೆಳಕು ಚೆಲ್ಲುವ ಕಾರ್ಯವಾಗುತ್ತಿಲ್ಲ. ಇಂತಹ ಕಾರ್ಯಕ್ಕೆ ಮುದ್ದೇಬಿಹಾಳ ತಾಲೂಕಿನ ಶ್ರೀ ಘನಮಠೇಶ್ವರ ಪಬ್ಲಿಕ್ ಸ್ಕೂಲ್ ಆಡಳಿತ ಮಂಡಳಿ ಮಾಡಿದ್ದು ಶ್ಲಾಘನಿಯವಾದದ್ದು.
ಅಂತರಾಷ್ಟ್ರವೇ ಕೊರೊನಾ ಸಂದಿಗ್ಧ ಪರಿಸ್ಥಿತಿಗೆ ಸಾಕಷ್ಟು ತೊಂದರೆಗೊಳಗಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಮ್ಮ ಜೀವವನ್ನೂ ಲೆಕ್ಕಿಸದೇ ಆರೋಗ್ಯ ಇಲಾಖೆ, ಪೋಲಿಸ ಇಲಾಖೆ ಹಾಗೂ ಆಶಾ ಕಾರ್ಯಕರ್ತೆಯರು ಸಾರ್ವಜನಿಕರ ಸೇವೆಗೆ ತೊಡಗಿದ್ದರು. ಆದರೆ ಎಲ್ಲ ಇಲಾಖೆಯ ಪುರುಷ ಸಿಬ್ಬಂದಿಗಳಿಗೆ ಅವರ ಧರ್ಮಪತ್ನಿಯರು ಸಾಕಷ್ಟು ಬೆಂಬಲವನ್ನು ಸೂಚಿಸಿದ್ದರು. ಇಂತಹ ಸ್ಥಿತಿಯಲ್ಲಿ ರಾಜ್ಯ ಸರಕಾರವಾಗಲಿ, ಕೇಂದ್ರ ಸರಕಾರವಾಗಲಿ ಅಥವಾ ವಿವಿಧ ಸಂಘ ಸಂಸ್ಥೆಗಳಾಗಳಿ ಕೇವಲ ಕೋರೊನಾ ವಾರಿಯರ್ಸ್ ಗೆ ಸನ್ಮಾನಗಳನ್ನು ಮಾಡಿದ್ದಾರೆ. ಆದರೆ ಅವರಿಗೆ ವ್ಯಯಕ್ತಿಕವಾಗಿ ಬೆಂಬಲ ಸೂಚಿಸಿದ ಅವರ ಧರ್ಮಪತ್ನಿಯರನ್ನೆ ಮರೆತ ಉದಾಹರಣೆಗಳಿಗೆ. ಆದರೆ ರವಿವಾರ ಮುದ್ದೇಬಿಹಾಳ ತಾಲೂಕಿನ ಶ್ರೀ ಘನಮಠೇಶ್ವರ ಪಬ್ಲಿಕ್ ಸ್ಕೂಲ್ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ನಿಮಿತ್ಯ ಕೊರೊನಾ ವಾರಿಯರ್ಸ ಆಗಿರುವ ಸಿಬ್ಬಂದಿಗಳ ಧರ್ಮಪತ್ನಿಯರಿಗೂ ಸನ್ಮಾನಿಸುವ ಮೂಲಕ ಅವರನ್ನು ಗುರುತಿಸುವ ಕಾರ್ಯ ಮಾಡಿದೆ.
ಸಮಜದಲ್ಲಿ ಮಹಿಳೆಯರು ಅಭಲೆಯರಲ್ಲ ಎನ್ನುವುದು ಮೊದಲು ತಿಳಿದುಕೊಳ್ಳುವ ಅಗತ್ಯವಾಗಿದೆ. 1909ರ ಹಿಂದೆ ಮಹಿಳೆಯರಿಗೆ ಮತದಾನದ ಹಕ್ಕನ್ನೂ ನೀಡದಿರುವುದನ್ನು ನಾವು ಅರಿತುಕೊಳ್ಳಬೇಕಿದೆ. ನಂತರ ಮಹಿಳೆಯರ ಪ್ರಾಭಲ್ಯದ ಬಗ್ಗೆ ಅರಿತು 1909 ಫೆ.28 ರಂದು ಮಹಿಳಾ ದಿನಾಚರಣೆ ಜಾರಿಗೆ ಬಂದಿತು ಎಂದು ಪ್ರೋ.ಕಲ್ಪನಾ ಹಿರೇಮಠ ಹೇಳಿದರು.
ಪಟ್ಟಣದ ಕುಂಟೋಜಿ ರಸ್ತೆಯಲ್ಲಿರುವ ಶ್ರೀ ಘನಮಠೇಶ್ವರ ಪಬ್ಲಿಕ್ ಸ್ಕೂಲ್ ಶಾಲೆಯಲ್ಲಿ ರವಿವಾರ ಹಮ್ಮಿಕೊಳ್ಳಲಾದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಹಿಳಾ ವಾರಿರ‍್ಸ್ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿವಿಧ ದೇಶಗಳಲ್ಲಿ ಮಹಿಳಾ ದಿನಾಚಣೆಯ ದಿನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಏಕ ದಿನದಲ್ಲಿ ಆಚರಣೆಯಾಗುವಂತೆ ಮಾಡುವಲ್ಲಿ ಕಾರ್ಮಿಕ ಮಹಿಳೆ ಕ್ಲಾರಾ ಜೆಟ್ಕಿನ್ ಅವರು ಜಾರಿಗೆ ಬರುವಂತೆ ಮಾಡಿದ್ದಾರೆ. ಇಂತಹ ಮಹಿಳೆಯ ಕಾರ್ಯಗಳನ್ನು ನೆನೆದು ಮಹಿಳೆಯರು ಸಭಲರಾಗಬೇಕು ಎಂದು ಅವರು ಹೇಳಿದರು.
ಪ್ರಚಾರ್ಯರಾದ ದೀಪಾ ದೇಸಾಯಿ ಮಾತನಾಡಿ, ಹಲವಾರು ಸಂದರ್ಭದಲ್ಲಿ ಮಹಿಳೆಯರು ಮಾಡಿದ ಸಾದನೆ ಮತ್ತು ಕಾರ್ಯಗಳು ಬೆಳಕಿಗೆ ಬರದೇ ಅವರು ಬೆಂಬಲಿಸಿ ಸಂಕಷ್ಟು ಸಂದರ್ಭದಲ್ಲಿ ನಡೆದ ಪುರುಷರ ಕಾರ್ಯಗಳು ಬಂದಿವೆ. ಆದ್ದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ದುಸ್ಥಿತಿ ತಂದಂತಹ ಕೊರೊನಾ ಸಂದರ್ಭದಲ್ಲಿ ವಾರಿರ‍್ಸ್ ಆಗಿ ಕಾರ್ಯ ನಿರ್ವಹಿಸಿದ ಆರೋಗ್ಯ, ಪೋಲಿಸ ಹಾಗೂ ಪತ್ರಕರ್ತರಿಗೆ ಮನೆಯಲ್ಲಿದೇ ಬೆಂಬಲಿಸಿದ ಅವರ ಪತ್ನಿಯರಿಗೂ ಗುರುತಿಸುವ ಕಾರ್ಯವಾಗಬೇಕು ಎನ್ನುವ ಸಂದೇಶವಿಟ್ಟು ಈ ಸಮಾರಂಭದಲ್ಲಿ ವಾರಿರ‍್ಸ್ ಪತ್ನಿಯರಿಗೆ ಮಾಡಲಾಗಿದೆ ಎಂದು ಅವರು ಹೇಳಿದರು.
ಮುಖ್ಯತಿಥಿಗಳಾಗಿ ಡಾ.ಬೋರಮ್ಮ ಪೋಲಿಸ್‌ಪಾಟೀಲ, ಪುರಸಭೆ ಸದಸ್ಯೆ ಪ್ರೀತಿ ದೇಗಿನಾಳ ಮಾತನಾಡಿದರು. ಶಯಿದಾ ಮೋಮಿನ, ಚಿತ್ರಲೇಖಾ ಕರಡ್ಡಿ ಹಾಗೂ ಪಲ್ಲವಿ ಗುರುಮಾತೆಯರು ದಿನಾಚರಣೆಯ ಅನಿಸಿಕೆಗಳನ್ನು ಹಂಚಿಕೊಂಡರು.
ಇದೇ ವೇಳೆಯಲ್ಲಿ ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಸೇವಗೈದ ಮುದ್ದೇಬಿಹಾಳ ಪಟ್ಟಣದ ಆಶಾ ಕಾರ್ಯಕರ್ತೆಯರಿಗೆ ಪೋಲಿಸ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಪತ್ರಕರ್ತರ ಪತ್ನಿಯರಿಗೆ ವಿಶೇಷವಾಗಿ ಸನ್ಮಾನಿಸಿದ್ದು ಗಮನ ಸೇಳೆಯಿತು. ಶಾಲಾ ಮುಖ್ಯಸ್ಥೆ ರೇಖಾ ಬಾರಕೇರ ವಂದಿಸಿದರು.
Be the first to comment