ರಾಜ್ಯ ಪಶುವೈದ್ಯಕೀಯ ಸಚಿವ ಪ್ರಭು ಚವ್ಹಾಣಗೆ ಬಹಿರಂಗ ಕ್ಷಮೆಗೆ ಆಗ್ರಹ…!!!

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ಬಸವ ಕಲ್ಯಾಣದಲ್ಲಿ ನಡೆಯುತ್ತಿರುವ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಪರ ಪ್ರಚಾರ ಭಾಷಣ ಮಾಡುತ್ತಿದ್ದ ರಾಜ್ಯ ಪಶುವೈದ್ಯಕೀಯ ಸೇವೆ ಖಾತೆ ಸಚಿವ ಪ್ರಭು ಚವ್ಹಾಣ ಅವರು ಹಡಪದ ಸಮಾಜದ ಬಗ್ಗೆ ಅಪಮಾನಕರವಾಗಿ ಮಾತನಾಡಿದ್ದು ಕೂಡಲೇ ಮಾಧ್ಯಮಗಳ ಮುಂದೆ ಬಹಿರಂಗ ಕ್ಷಮೆ ಕೇಳಬೇಕೆಂದು ರಾಜ್ಯ ಹಡಪದ ಸಮಾಜದ ಖಜಾಂಚಿ ಚಂದು ಹಡಪದ(ತಂಗಡಗಿ) ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಚಾರದ ಭರಾಟೆಯಲ್ಲಿ ಸಚಿವರು, ರಾಜ್ಯದಲ್ಲಿಯೂ ನಮ್ಮದೇ ಸರ್ಕಾರ, ಕೇಂದ್ರದಲ್ಲಿಯೂ ನಮ್ಮದೇ ಸರ್ಕಾರ ಇರುವಾಗ ಬಿಜೆಪಿ ಬಿಟ್ಟು ಬೇರೆ ಪಕ್ಷದವರು ಆಯ್ಕೆಯಾದರೆ ಅವರು ದಾಡಿ ಮಾಡ್ತಾರಾ, ಶೇವಿಂಗ್ ಮಾಡ್ತಾರಾ ಎಂದು ವ್ಯಂಗ್ಯವಾಗಿ ಮಾತನಾಡಿದ್ದು ಸರಿಯಲ್ಲ ಎಂದಿರುವ ಅವರು ಒಂದು ಕುಲದ ವೃತ್ತಿಯ ಬಗ್ಗೆ ಅವಹೇಳನಕರವಾಗಿ, ಅಪಮಾನಕರವಾಗಿ ಮಾತನಾಡುವುದು ಸರಿಯಲ್ಲ. ಈ ಬಗ್ಗೆ ದೂರವಾಣಿ ಮೂಲಕ ಮಾತನಾಡಿಸಿದಾಗ ಸಹ ಅವರು ಸರಿಯಾಗಿ ಸ್ಪಂದಿಸದೇ ತಮ್ಮದೇ ಮಾತನ್ನು ಸಮರ್ಥಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದಿದ್ದಾರೆ.
ಈ ಕೂಡಲೇ ಹಡಪದ ಸಮಾಜದ ವೃತ್ತಿಯ ಬಗ್ಗೆ ಅಪಮಾನಕರವಾಗಿ ಮಾತನಾಡಿದ್ದಕ್ಕೆ ಕ್ಷಮೆ ಕೇಳಬೇಕು ಇಲ್ಲದಿದ್ದರೆ ರಾಜ್ಯದಾದ್ಯಂತ ಹಡಪದ ಸಮಾಜ ಬಾಂಧವರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Be the first to comment

Leave a Reply

Your email address will not be published.


*