ಕೋವಿಡ್-19 ಎರಡನೆ ಅಲೆ ಹಿನ್ನೆಲೆಯಲ್ಲಿ ಸರ್ಕಾರದಿಂದ ಅಲೆಮಾರಿ/ಅರೆ ಅಲೆಮಾರಿ ಜನಾಂಗದವರಿಗೆ ವಿಶೇಷ ಪ್ಯಾಕೇಜ್ ಗಾಗಿ ಬೇಡಿಕೆ

ವರದಿ: ಅಂಬಿಗ ನ್ಯೂಸ್ ತಂಡ

ರಾಜ್ಯ ಸುದ್ದಿಗಳು

CHETAN KENDULI

ಕೋವಿಡ್-19 ಎರಡನೆ ಅಲೆ ದಿನೆ ದಿನೆ ಹೆಚ್ಚಳವಾಗುತ್ತಿದ್ದು ಈ ಅಲೆ ತಡೆಗಟ್ಟಲು ಸರ್ಕಾರ ಲಾಕ್ ಡೌನ್ ಜಾರಿ ಮಾಡಿರುತ್ತದೆ.ಈ ಲಾಕ್ ಡೌನ್ ಅಂದು ಮತ್ತು ಇಂದು ತುತ್ತು ಊಟಕ್ಕೂ ಪರದಾಡುವಂತೆ ಮಾಡಿರುವ ಸಮುದಾಯ ಯಾವುದಾದರೂ ಇದ್ದರೆ ಅದು ಅಲೆಮಾರಿ ಸಮುದಾಯ.

ದುರದೃಷ್ಟಕರ ಏನೆಂದರೆ ಅವತ್ತು ಸರ್ಕಾರ ಅಲೆಮಾರಿ ಸಮುದಾಯಕ್ಕೆ ಯಾವುದೇ ಘೋಷಣೆ ಮಾಡಲಿಲ್ಲ ಇವತ್ತು ಕೂಡಾ ಇನ್ನು ಘೋಷಣೆ ಮಾಡಿಲ್ಲ.ಇಂದು ನಾವು ಪರಿಶಿಷ್ಟ ಜಾತಿ/ಪಂಗಡದವರಿಗಿಂತಲೂ ಹಿನಾಯವಾದ ಬದುಕು ಸಾಗಿಸುತ್ತ ಊರೂರು ಅಲೆದಾಡುತ್ತ ಜೀವನ ಸಾಗಿಸುತ್ತಿರುವವರು ಯಾರಾದರೂ ಇದ್ದರೆ ಅದು ಅಲೆಮಾರಿ ಸಮುದಾಯದವರು.ಒಂದು ಸಣ್ಣ ಸೂಜಿಯಿಂದ ಹಿಡಿದು ದೊಡ್ಡ ದೊಡ್ಡ ಆಯುಧಗಳನ್ನು ತಯಾರಿಸಿ,ಊರಿಗೆ ಬಂದ ಮಾರಿಯನ್ನು ತನ್ನ ಬೆನ್ನ ಹಿಂದೆ ಕಟ್ಟಿಕೊಂಡು ಎಲ್ಲರ ಯೋಗ ಕ್ಷೇಮ ಬಯಸುವವರೆ ಈ ಅಲೆಮಾರಿಗಳು.

ಪ್ರತಿಯೊಂದು ಸರ್ಕಾರ ಮೀಸಲಾತಿ ಇರುವವರಿಗೆ,ಮುಂದುವರೆದ ಸಮುದಾಯಕ್ಕೆ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಾ ಬಂದಿದೆ ಇವತ್ತಿಗೂ ಟೆಂಟ್ ನಲ್ಲಿ ವಾಸ ಮಾಡುವ ಈ ಅಲೆಮಾರಿ ಸಮುದಾಯದವರಿಗೆ ಶಾಶ್ವತವಾದ ಯಾವುದೇ ಪರಿಹಾರ ಘೋಷಣೆ ಮಾಡಿರುವುದಿಲ್ಲ.ಈ ಅಲೆಮಾರಿಗಳು ಇಂದಿಗೂ ಕೂಡಾ ಮೌಡ್ಯ ಭಾವನೆಗಳಲ್ಲಿ ಬದುಕುತ್ತಿದ್ದು ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ಕೊಂಚಿತ್ತು ಚಿಂತನೆ ಮಾಡುತ್ತಿಲ್ಲ ಕಾರಣ ಇಷ್ಟೆ ಸರ್ಕಾರ ಇವರಿಗೆ ಇವತ್ತಿಗೂ ಶೈಕ್ಷಣಿಕ ಪ್ರಗತಿಗಾಗಿ ಯಾವುದೇ ಯೋಜನೆಗಳನ್ನು ರೂಪಿಸಿರುವುದಿಲ್ಲ.

ಆರ್ಥಿಕ ಅಭಿವೃದ್ಧಿಗಾಗಿ ನೀಡುವ ಸಾಲ ಸೌಲಭ್ಯದ ವೈಪಲ್ಯಗಳು

ಸರ್ಕಾರ ಅಲೆಮಾರಿ ಸಮುದಾಯಗಳಿಗೆ ಆರ್ಥಿಕವಾಗಿ ಸದೃಢರಾಗಲೂ ಅಲೆಮಾರಿ ಅಭಿವೃದ್ಧಿ ನಿಗಮ ಮಂಡಳಿಯಿಂದ ಸಾಲ ಸೌಲಭ್ಯ ನೀಡುತ್ತದೆ ಅದು ಜಿಲ್ಲೆಯಲ್ಲಿರುವ ಹಿಂದುಳಿದ ವರ್ಗಗಳ 46 ಜಾತಿಗಳ ಅಲೆಮಾರಿ ಸಮುದಾಯದವರಿಗಾಗಿ ಕೇವಲ 20 ರಿಂದ 25 ಭೌತಿಕ ಗುರು ನಿಗದಿ ಪಡಿಸುತ್ತಾರೆ.ಇದು ಯಾರಿಗೆ ಸಿಗುತ್ತೋ ಯಾರಿಗೆ ಸಿಗುವುದಿಲ್ಲವೋ ಗೊತ್ತಿಲ್ಲ.

ರಾಜ್ಯದಲ್ಲಿ ಅತಿ ಹಿಂದುಳಿದ ಕಟ್ಟಕಡೆಯ ಜನಾಂಗವಾಗಿರುವ ಅಲೆಮಾರಿ ಅರೆ ಅಲೆಮಾರಿ ಜನಾಂಗ ಇವರು ತಮ್ಮ ದಿನನಿತ್ಯದ ಜೀವನೋಪಾಯಕ್ಕಾಗಿ ಹಲವು ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡು ಜೀವನ ಸಾಗಿಸುತಿದ್ದು, ಕೊವಿಡ-19 ಲಾಕಡೌನ ಹಿನ್ನೆಲೆಯಲ್ಲಿ ಕೆಲಸ ಕಾರ್ಯಗಳನ್ನು ಕಳೆದುಕೊಂಡು ದಿನನಿತ್ಯದ ಊಟಕ್ಕೂ ಪರದಾಡುವ ಪರಿಸ್ಥಿತಿಗೆ ಒಳಗಾಗಿದ್ದಾರೆ. ಈ ಜನಾಂಗಗಳಲ್ಲಿ ಪ್ರಮುಖವಾಗಿ

ಹೆಳವರು

ಒಕ್ಕಲೂ ಮನೆತನದ ಪುರಾತನ ವಂಶಪರಂಪರೆಯ ವಂಶಾವಳಿ ಹೇಳುತ್ತ ಬೀದಿ ಬೀದಿಗಳಲ್ಲಿ ಟೆಂಟ್ ಹಾಕಿಕೊಂಡು ದನಕರುಗಳನ್ನು ಸಾಕುತ್ತಾ ಬದುಕುತ್ತಿದ್ದಾರೆ.

ಬೈಲ್ ಪತ್ತಾರ್

ಜನಾಂಗದವರು ತಮ್ಮ ಕೈಗಡೆಯಿಂದ ತಯಾರಿಸಿದ ಹಿತ್ತಾಳೆ ತಾಮ್ರದ ಉಂಗರ ಕೈಗಡಗ ವಸ್ತುಗಳು ಬೇರೆ ಬೇರೆ ಜಿಲ್ಲೆಯ ಜಾತ್ರೆಗಳಲ್ಲಿ ಮತ್ತು ಮಾರ್ಕೆಟ್ ಗಳಲ್ಲಿ ವ್ಯಾಪಾರ ಮಾಡುತ್ತ ಬದುಕುತ್ತಿದ್ದಾರೆ.

ಡವರಿ

ಜನಾಂಗದವರು ಮನೆಯಲ್ಲೇ ತಯಾರಿಸಿದ ಊದಿನಕಡ್ಡಿ ಊದುಬತ್ತಿ ಮೇಣಬತ್ತಿಗಳನ್ನು ಮಾರ್ಕೆಟ್ ಗಳಲ್ಲಿ ಜಾತ್ರೆಗಳಲ್ಲಿ ಮಾರಾಟ ಮಾಡುತ್ತ ಬದುಕುತ್ತಿದ್ದಾರೆ.

ಜೋಗಿ

ಜನಾಂಗದವರು ಛತ್ರಿಗಳ ರಿಪೇರಿ, ಕೀಲಿ ಕೈಗಳು ಹಾಗೂ ಸ್ಟೇಷನರಿ ವಸ್ತುಗಳ ವ್ಯಾಪಾರ ಮಾಡುತ್ತಾ ತಮ್ಮ ದಿನನಿತ್ಯದ ಜೀವನವನ್ನು ಸಾಗಿಸುತ್ತಿದ್ದಾರೆ.

ಘಿಸಾಡಿ

ಜನಾಂಗದವರು ಕಬ್ಬಿಣದ ವಸ್ತುಗಳನ್ನು ತಯಾರು ಮಾಡುವ ಗುದ್ದಲಿ, ಆರಿ ಇತ್ಯಾದಿ ಸಾಮಾನುಗಳನ್ನು ತಯಾರು ಮಾಡಿ ಮಾರಾಟ ಮಾಡುತ್ತ ಬದುಕುತ್ತಿದ್ದಾರೆ.

ಗೊಲ್ಲ

ಜನಾಂಗದವರು ಆಯುರ್ವೇದಿಕ್ ಔಷಧಿ ವ್ಯಾಪಾರ ಮತ್ತು ಹಣ್ಣು ತರಕಾರಿ ವ್ಯಾಪಾರ ಮಾಡುತ್ತ, ಕುರಿ ಸಾಕಾಣಿಕೆ ,ಹಸುಗಳ ಸಾಕಾಣಿಕೆ ಮಾಡುತಿದಾರೆ.

ಸಿಕ್ಕಲಿಗಾರ್

ಜನಾಂಗ ಚಿ೦ದಿ ಹಾಳಿ ಆರಿಸೋದು, ಮೊಡ್ಕಾ ವ್ಯಾಪಾರ,ಹಣ್ಣು ತರಕಾರಿಯ ವ್ಯಾಪಾರ, ಭಂಗಿ ಕೆಲಸ ಮಾಡುತ್ತ ಬದುಕುತ್ತಿದ್ದಾರೆ.

ನಾಥಪಂಥಿ

ಪತ್ತಾರಿಕೆ ಕೆಲಸ , ಸ್ಟೇಷನರಿ ವ್ಯಾಪಾರ,ನೇಕಾರಿಕೆ ಕೆಲಸ ಮಾಡುತ್ತ ಬದುಕುತ್ತಿದ್ದಾರೆ.

ದುರುಗಮುರುಗಿ

ಭಿಕ್ಷೆ ಬೇಡುವುದು, ಕೂದಲು ಆರಿಸುವುದು, ಬಾರುಕೋಲಿನಿಂದ ಮೈಗೆ ಬಾರಿಸಿಕೊಳ್ಳುತ್ತ ಭಿಕ್ಷಾಟನೆ ಮಾಡುತ್ತ ಊರಿಗೆ ಮಾರಿಯನ್ನು ತನ್ನ ಹಿಂದೆ ತೆಗೆದುಕೊಂಡು ಹೋಗುತ್ತ ಜೀವನ ಸಾಗಿಸುತ್ತಿದ್ದಾರೆ.

ಗೋಂಧಳಿ

ಜನಾಂಗ ಕೌದಿ ಹೊಲಿಯುವುದು ಹಾಗೂ ಪಾತ್ರೆ ವ್ಯಾಪಾರ ಮಾಡುತ್ತ ಬದುಕುತ್ತಿದ್ದಾರೆ.

ಬುಡಬುಡಿಕೆ

ಜೋತಿಷ್ಯ ಹೇಳುವುದು, ಗೊಂದಲಿಗರ ಪದಗಳ ಹಾಡುವುದು ಹಾಗೂ ಕೌದಿ ಹೊಲಿಯುವುದು ಮಾಡುತ್ತ ಬದುಕುತ್ತಿದ್ದಾರೆ.

ದರ್ವೇಶಿ

ಮಸೀದಿಗಳಲ್ಲಿ ಮತ್ತು ಗಲ್ಲಿಗಳಲ್ಲಿ ಪಕಿರ ಗಳಾಗಿ ಭಿಕ್ಷಾಟನೆ ಮಾಡುವುದು,ಕರಡಿ ಆಡಿಸುವುದು ಇವರ ಮೂಲ ಕಸುಬುಗಳಾಗಿವೆ.

ಅದರಂತೆ ಇನ್ನುಳಿದ ಜನಾಂಗಗಳು ತಮ್ಮ ಕುಲ ಕಸುಬುಗಳಿಂದ ಜೀವನ ಸಾಗಿಸುತಿದರು.ಆದರೆ ಕೋವಿಡ 19 ಲಾಕ್‌ಡೌನ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಕೆಲಸ ಕಾರ್ಯಗಳು ನಿಂತು ಹೋಗಿದ್ದು ಅವರ ದಿನನಿತ್ಯದ ಜೀವನಕ್ಕಾಗಿ ಪರದಾಡಿ ಉಪವಾಸದಿಂದ ನರಳಾಡುತ್ತಿದ್ದಾರೆ. ಆದ್ದರಿಂದ ಇಂತಹ ಕಟ್ಟಕಡೆಯ ಜನಾಂಗವಾಗಿರುವ ಅಲೆಮಾರಿ ಅರೆ ಅಲೆಮಾರಿ ಜನಾಂಗದ ಕುಟುಂಬಗಳಿಗೆ ವಿಶೇಷವಾಗಿ ಪ್ರತಿ ಕುಟುಂಬಕ್ಕೆ ತಲಾ 5000 ರಂತೆ ಮತ್ತು ಉಚಿತವಾಗಿ 2 ತಿಂಗಳ ರೇಷನ್ ನೀಡುವಂತೆ ಜನಪ್ರಿಯ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕೆ.ರವೀಂದ್ರ ಶೆಟ್ಟಿ ಕರ್ನಾಟಕ ಅಲೆಮಾರಿ ಅರೆಅಲೆಮಾರಿ ನಿಗಮದ ಅಧ್ಯಕ್ಷರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಾವು ಕೊಡಲೆ ಪರಿಹಾರ ಘೋಷಣೆ ಮಾಡುತ್ತಿರಿ ಎಂದು ಸಮಸ್ತ ಅಲೆಮಾರಿ ಅರೆ ಅಲೆಮಾರಿ ಜನಾಂಗ ಕಾದು ನೋಡುತ್ತಿದೆ.

ಈ ಹಿನ್ನೆಲೆಯಲ್ಲಿ ಕೂಡಲೇ ಈ ಜನಾಂಗದವರಿಗೆ ವಿಶೇಷ ಪರಿಹಾರ ಘೋಷಣೆ ಮಾಡುವಂತೆ ಅಖಿಲ ಕರ್ನಾಟಕ ಹೆಳವ ಸಮಾಜದ ರಾಜ್ಯಾದ್ಯಕ್ಷರಾದ ಎಮ್.ನಾಗರಾಜು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಬಿ.ಹೆಳವರ ಅಂಬಿಗ್ ನ್ಯೂಸ್ ಮೂಲಕ ಒತ್ತಾಯಿಸಿದ್ದಾರೆ.

Be the first to comment

Leave a Reply

Your email address will not be published.


*