ಜಿಲ್ಲಾ ಸುದ್ದಿಗಳು
ಬಾಗಲಕೋಟೆ:(ಗುಡೂರ)
ಇಳಕಲ್ಲ ತಾಲೂಕಿನ ಗುಡೂರ ಗ್ರಾಮದಲ್ಲಿಂದು ಕೊರೋನಾ ಎರಡನೇ ಅಲೆ ತೀವ್ರವಾಗಿ ಹರಡುತ್ತಿರುವುದರ ಬಗ್ಗೆ ಸಾರ್ವಜನಿಕರಿಗೆ ಗ್ರಾಮ ಪಂಚಾಯತ್ ಕಾರ್ಯಾಲಯದ ವತಿಯಿಂದ ಧ್ವನಿ ವರ್ಧಕದ ಮೂಲಕ ಜನ ಜಾಗೃತಿ ಮೂಡಿಸಲಾಯಿತು.
ಕೊರೋನಾ ನಿಯಮಗಳನ್ನು ಪಾಲನೆ ಮಾಡಬೇಕು ಹಾಗೂ ಅನಾವಶ್ಯಕವಾಗಿ ಹೊರಗಡೆ ಬಾರದಂತೆ ತಿಳಿಸಿ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವಂತೆ ಗ್ರಾಮದ ಪ್ರಮುಖ ಬೀದಿಯಲ್ಲಿ ಧ್ವನಿ ವರ್ಧಕದ ಮೂಲಕ ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಅಬ್ದುಲ್ ರಜಾಕ್, ಗ್ರಾಮ ಪಂಚಾಯತಿ ಲೆಕ್ಕಾಧಿಕಾರಿ ಕೋರಿಶೆಟ್ಟರ,ಗ್ರಾಮದ ಪ್ರಮುಖ ರಫೀಕ್ ಇಟಗಿ ಹಾಗೂ ಪಂಚಾಯತಿ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.
ಬೇಕಾಬಿಟ್ಟಿ ಓಡಾಡುವ ವಾಹನಗಳ ಪರಿಶೀಲನೆ ಮಾಡುತ್ತಿರುವ ಗುಡೂರ ಪೋಲಿಸ್ ಸಿಬ್ಬಂದಿ
Be the first to comment