ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಕೊರೊನಾ 3ನೇ ಅಲೆ ಬಂದರೂ ಕ್ಷೇತ್ರದ ಜನತೆಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಯಲ್ಲಿ ಸಕಲ ಸೌಲಭ್ಯಗಳನ್ನು ಒದಗಿಸಿದ್ದು ಜನತೆ ಭಯ ಪಡುವ ಅಗತ್ಯ ದೂರವಾದಂತಾಗಿದೆ.
ಹೌದು, ಕೇವಲ ಜಿಲ್ಲಾ ಮಟ್ಟದ ಆಸ್ಪತ್ರೆಯಲ್ಲಿ ಮಾತ್ರ ಕೊವಿಡ್ ರೋಗಿಗಳಿಗೆ ಆಮ್ಲಜನಿಕ ಸಹಿತ ಚಿಕಿತ್ಸೆ ನೀಡುವಂತಿದೆ. ಆದರೆ ಇಂತಹ ಸೌಲಭ್ಯವನ್ನು ತಾಲೂಕಾ ಆಸ್ಪತ್ರೆಗೆ ಒದಗಿಸಿದ ಹಿರಿಮೆ ಶಾಸಕ ನಡಹಳ್ಳಿ ಅವರಿಗೆ ಸಲ್ಲುತ್ತದೆ. ಇದರ ಜೊತೆಗೆ ಮುದ್ದೇಬಿಹಾಳ ತಾಲೂಕಾ ಮಟ್ಟದ ಆರೋಗ್ಯಾಧಿಕಾರಿಗಳು ಶಾಸಕರೊಂದಿಗೆ ಕೈಜೋಡಿಸಿದ್ದ ಕ್ಷೇತ್ರದ ಜನರು ಯಾವುದಕ್ಕೂ ಭಯ ಪಡಬೇಕಾದ ಅಗತ್ಯವಿಲ್ಲದಂತಾಗಿದೆ.
ತಾಲೂಕಿನಲ್ಲಿ ಅಂದಾಜು 700 ಐಸೀಲೇಷನ್ ಬೇಡ್ ವ್ಯವಸ್ಥೆಯ ಗುರಿ:
ಮುದ್ದೇಬಿಹಾಳ ಪಟ್ಟಣದಲ್ಲಿ ಈಗಾಗಲೇ 30 ಬೇಡಗಳನ್ನು ಕೋವಿಡ್ ರೋಗಿಗಳಿಗಾಗಿ ಮೀಸಲಿಟ್ಟು ಚಿಕಿತ್ಸೆಕೊಡಲಾಗುತ್ತಿದ್ದು ಕೊರೊನಾ 3ನೇ ಅಲೆ ಬಂದರೆ ಕ್ಷೇತ್ರ ಜನತೆಗೆ ಚಿಕಿತ್ಸೆ ಒದಗಿಸುವಲ್ಲಿ ಯಾವುದೇ ತೊಂದರೆಯಾಗಬಾರದು ಎಂಬ ಮುನ್ನೆಚ್ಚರಿಕೆ ಕ್ರಮವಹಿಸಿರುವ ಶಾಸಕ ನಡಹಳ್ಳಿ ಅವರು ಮುದ್ದೇಬಿಹಾಳ ತಾಲೂಕಿನ ಜಮ್ಮಲದಿನ್ನಿ ಗ್ರಾಮದ ಕಿತ್ತೂರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ೨೦೦ ಬೇಡ್‌ಗಳು, ನಾಲತವಾಡ ಪಟ್ಟಣದ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ೨೦೦ ಬೇಡ್‌ಗಳು ಹಾಗೂ ತಾಳಿಕೋಟಿ ತಾಲೂಕಿನ ವಿವಿಧ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ೨೦೦ ಬೇಡ್‌ಗಳನ್ನು ಐಸೋಲೇಷನ್ ಬೇಡ್‌ಗಳನ್ನಾಗಿ ಪರಿವರ್ತಿಸಿ ಮುದ್ದೇಬಿಹಾಳ ಕ್ಷೇತ್ರದಲ್ಲಿ ಒಟ್ಟು ೭೦೦ ಐಸೋಲೇಷನ್ ಬೇಡ್‌ಗಳನ್ನು ಮುಂದಿನ ದಿನಗಳಲ್ಲಿ ಕೊರೊನಾ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.
ಶೀಘ್ರದಲ್ಲಿಯೇ ಪ್ರಾರಂಭವಾಗಲಿರುವ ಆಕ್ಸಿಜನ್ ಉತ್ಪಾದನಾ ಘಟಕ:
ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಯಲ್ಲಿ ಪ್ರತಿ ನಿಮಿಷಕ್ಕೆ ಸುಮಾರು ೫೦೦ ಲೀಟರ್ ಆಮ್ಲಜನಕ ಉತ್ಪಾದಿಸುವ ಅಂದಾಜು ೧೩೭.೮೫ ಲಕ್ಷ ವೆಚ್ಚದಲ್ಲಿ ಘಟಕ ಮಂಜೂರಾಗಿದ್ದು ಈಗಾಗಲೇ ಕಟ್ಟಡ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು ಶೀಘ್ರದಲ್ಲಿಯೇ ಘಟಕದ ಕಾರ್ಯ ಪ್ರಾರಂಭಗೊಳ್ಳಲಿದೆ. ಇದರಿಂದ ಮುದ್ದೇಬಿಹಾಳ ತಾಲೂಕು ಮಾತ್ರವಲ್ಲದೇ ಸುತ್ತಮುತ್ತಲಿನ ತಾಲೂಕುಗಳಿಲಗೆ ಹಾಗೂ ವಿಜಯಪುರಕ್ಕೂ ಹೆಚ್ಚಿನ ಆಮ್ಲಜನಕ ಸರಬರಾಜಿಗೂ ತೊಂದರೆಯಾಗುವುದಿಲ್ಲ.
ಶಾಸಕರ ಮನವಿ:
ಕೊರೊನಾ ವೈರಾನು ಸಾಮಾನ್ಯ ಜನರು ಅಂದುಕೊಂಡಂತೆ ಇಲ್ಲಾ. ಇದು ನನಗೆ ಸ್ವಯಂ ಪ್ರೇರಿತವಾಗಿ ತಿಳಿದುಬಂದಿದೆ. ಆದ್ದರಿಂದ ಕ್ಷೇತ್ರ ಜನರಲ್ಲಿ ಕೊರೊನಾ ಸೋಂಕಿತ ದೃಡವಾದ ಕ್ಷಣದಲ್ಲಿಯೇ ಚಿಕಿತ್ಸೆಗೆ ಒಳಗಾಗಿ. ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡಬೇಕು. ಅಲ್ಲದೇ ಈಗಾಗಲೇ ಪಟ್ಟಣದಲ್ಲಿನ ವ್ಯಾಪಾರಸ್ಥರೂ ಸಾಕಷ್ಟು ದುಡಿಮೆ ಮಾಡಿದ್ದಾರೆ. ಇಂತಹ ಸ್ಥಿತಿಯಲ್ಲಿಯೂ ಬೆಳಿಗ್ಗೆ ಆಗುತ್ತಿದ್ದಂತೆ ತಮ್ಮ ವ್ಯಾಪಾರವನ್ನು ಪ್ರಾರಂಭಿಸಿದರೆ ಕೊರೊನಾ ನಿಯಂತ್ರಣಕ್ಕೆ ಅಡ್ಡಿಯಾದಂತಾಗುತ್ತದೆ. ಆದ್ದರಿಂದ ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ತಮ್ಮ ವ್ಯಾಪಾರವನ್ನು ಸ್ಥಗಿತಗೊಳಿಸಿ ತಮ್ಮ ಜೀವವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಜೀವ ಇದ್ದರೆ ಮುಂದಿನ ಜೀವನ ಎನ್ನವುದು ಎಲ್ಲರೂ ತಿಳಿದುಕೊಳ್ಳಬೇಕಿದೆ.
Be the first to comment