ರಾಜ್ಯದ ಪ್ರಥಮ ರಾಷ್ಟ್ರೀಯ ನೀರಾವರಿ ಯೋಜನೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ವರದಿ ಆಕಾಶ್ ಚಲವಾದಿ ಬೆಂಗಳೂರು ಹೆಡ್

ರಾಜ್ಯ ಸುದ್ದಿಗಳು 

 

ಚಿತ್ರದುರ್ಗ

CHETAN KENDULI

 

ಭದ್ರಾ ಮೇಲ್ದಂಡೆ ಯೋಜನೆ ರಾಜ್ಯದಲ್ಲಿಯೇ ಪ್ರಥಮ ರಾಷ್ಟ್ರೀಯ ನೀರಾವರಿ ಯೋಜನೆ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ಹೊಸದುರ್ಗ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ಮಾಡಿದರು.ಭದ್ರಾ ಮೇಲ್ದಂಡೆ ಯೋಜನೆಗೆ ಪಿಐಬಿ ಯಲ್ಲಿ ಅನುಮೋದನೆ ದೊರೆತಿದ್ದು, ಕೇಂದ್ರ ಸಚಿವ ಸಂಪುಟದ ಅನುಮೋದನೆ ಪಡೆಯಲು ಕೇಂದ್ರ ಜಲಶಕ್ತಿ ಸಚಿವರನ್ನು ಕೋರಲಾಗಿದೆ. ಯೋಜನೆಗೆ ಅನುಮೋದನೆ ದೊರೆತ ಕೂಡಲೇ ಕಾಮಗಾರಿಗೆ ಪ್ರಾರಂಭಿಸಲು ಹಣಕಾಸಿನ ನೆರವು ದೊರೆಯಲಿದೆ. ಈ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ. ಇಡೀ ರಾಜ್ಯದಲ್ಲಿಯೇ ಪ್ರಥಮ ರಾಷ್ಟ್ರೀಯ ನೀರಾವರಿ ಯೋಜನೆ ಆಗಲಿದೆ ಎಂದರು.*ಚಿತ್ರದುರ್ಗ ಮೂಲಕ ತುಮಕೂರು ದಾವಣಗೆರೆ ರೈಲ್ವೆ ಸಂಪರ್ಕ ಯೋಜನೆ ಪ್ರಾರಂಭಿಸಲು ಕ್ರಮ:*ತುಮಕೂರು ದಾವಣಗೆರೆ ರೈಲ್ವೆ ಲೈನ್ ಬಗ್ಗೆ ಪರಾಮರ್ಶೆ ಮಾಡಲಾಗಿದೆ. ಈ ಯೋಜನೆಗೆ ಭೂ ಸ್ವಾದೀನ ಪ್ರಕ್ರಿಯೆಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಚಿತ್ರದುರ್ಗ ಮೂಲಕ ತುಮಕೂರು ದಾವಣಗೆರೆ ರೈಲ್ವೆ ಸಂಪರ್ಕ ಯೋಜನೆ ಪ್ರಾರಂಭಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೆ ಬೇಕಾದ ಹಣವನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ನ್ಯಾಯಾಂಗದ ಪ್ರಮುಖ ಕಾರ್ಯಕ್ರಮ ಮತ್ತು ಈ ಭಾಗದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೊಸದುರ್ಗಕ್ಕೆ ಬಂದಿದ್ದೇನೆ. ಭದ್ರಾ ಮೇಲ್ದಂಡೆ ಯೋಜನೆಗೆ 1.7 ಕಿ.ಮೀ.ಭೂಸ್ವಾಧೀನ ಕಾರ್ಯ ಎರಡು ವರ್ಷದಿಂದ ನೆನೆಗುದಿಗೆ ಬಿದ್ದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕೆಲವು ರೈತರ ಸಮಸ್ಯೆಯಿದ್ದು, ಅದನ್ನು ನಿವಾರಿಸಲಾಗುವುದು ಎಂದರು.*ಸಚಿವಸಂಪುಟ ವಿಸ್ತರಣೆ :*ಸಚಿವಸಂಪುಟ ವಿಸ್ತರಣೆ ಹಾಗೂ ಚಿತ್ರದುರ್ಗಕ್ಕೆ ಪ್ರಾತಿನಿಧ್ಯ ದೊರೆಯುವ ಸಾಧ್ಯತೆಯ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಚರ್ಚಿಸಲು ನವದೆಹಲಿಗೆ ಸಧ್ಯದಲ್ಲಿಯೇ ಭೇಟಿ ನೀಡಲಿದ್ದೇನೆ. ಚಿತ್ರದುರ್ಗಕ್ಕೆ ಯಾವುದೇ ಮಲತಾಯಿ ಧೋರಣೆ ತೋರಲಾಗುತ್ತಿಲ್ಲ. ರಾಜಕೀಯ ಸನ್ನಿವೇಶದಿಂದ ಚಿತ್ರದುರ್ಗಕ್ಕೆ ಪ್ರಾತಿನಿಧ್ಯ ಕೊಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ಪ್ರಾತಿನಿಧ್ಯತೆ ನೀಡಲು ಪ್ರಯತ್ನಿಸಲಾಗುವುದು ಎಂದರು.

Be the first to comment

Leave a Reply

Your email address will not be published.


*