ರಾಜ್ಯ ಸುದ್ದಿಗಳು
ದೇವನಹಳ್ಳಿ
ಸಾರ್ವಜನಿಕರು ದೇವರಿಗೆ ಬೇಡುವಂತೆ ಆ ಕಾವೇರಿ ತಾಯಿ ವರುಣನ ಕೃಪೆಯಿಂದ ಕೆರೆ ತುಂಬಿ ಸುಮಾರು ೮ ವರ್ಷಗಳ ನಂತರ ಕಾರಹಳ್ಳಿ ಕೆರೆ ಕೋಡಿ ಹರಿಯುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮದ ಸಮೀಪದ ಕೆರೆಯಲ್ಲಿ ಕೆರೆ ಕೋಡಿ ಹರಿಯುತ್ತಿರುವುದರಿಂದ ಕೆರೆಗೆ ಪೂಜೆ ಮತ್ತು ಬಾಗಿನ ಅರ್ಪಿಸಿ ಅವರು ಮಾತನಾಡಿದರು.ರೈತರಿಗೆ ಬೋರ್‌ವೆಲ್‌ಗಳಲ್ಲಿ ನೀರು ಸಿಗುವಂತೆ ಆಗಿದೆ. ಸುಮಾರು ೨೫ ವರ್ಷಗಳಿಂದ ಬತ್ತಿಹೋಗಿದ್ದ ಕೆರೆಗಳು ಮಳೆಯಿಂದಾಗಿ ತುಂಬಿತುಳುಕುತ್ತಿದೆ. ತಾಲೂಕಿನಲ್ಲಿ ಬಹುಶಃ ಎಲ್ಲಾ ಕೆರೆಗಳು ತುಂಬಿರುವುದು ಸಂತೋಶದ ವಿಷಯವಾಗಿದೆ. ಈ ಕೆರೆಯ ಸಮಗ್ರ ಅಭಿವೃದ್ಧಿಗಾಗಿ ಸಣ್ಣನೀರಾವರಿ ಇಲಾಖೆಯಿಂದ ೪೮ ಲಕ್ಷ ರೂ.ಗಳು ಅಪ್ರೋವಲ್ ಆಗಿದೆ. ಮುಂದಿನ ದಿನಗಳಲ್ಲಿ ಗುಣಮಟ್ಟದ ಕೆಲಸ ಕಾಮಗಾರಿಗಳು ನಡೆಯಲಿದೆ. ವಿಶೇಷವಾಗಿ ಆಕಾಶ್ ಆಸ್ಪತ್ರೆ, ಗ್ರಾಪಂ ವತಿಯಿಂದ ಮೇಘಾ ಆರೋಗ್ಯ ಕ್ಯಾಂಪ್ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.
ಸುಳ್ಳೇಳುವ ಸಂಸ್ಕೃತಿ ನಮ್ಮದಲ್ಲ: ವೀರಪ್ಪಮೊಯ್ಲಿ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿ ಆಳ್ವಿಕೆ ಮಾಡಿದಂತಹವರು, ನನ್ನ ಆಯಸ್ಸು ಎಷ್ಟಾಗಿದೆ, ಅಷ್ಟು ವರ್ಷ ಆಳ್ವಿಕೆ ಮಾಡಿದಂತಹವರು. ನನ್ನ ತಾಲೂಕು ಜನತೆಗೆ ಸುಳ್ಳು ಹೇಳುವ ಅವಶ್ಯಕತೆ ನನಗಿಲ್ಲ. ಆ ಸುಳ್ಳು ಹೇಳೋ ಸಂಸ್ಕೃತಿ ಏನಿದ್ರು, ಅವರಿಗೇ ಸೇರಬೇಕಾಗಿರುವುದು, ನಮಗೆ ಸೇರುವಂತಹದ್ದಲ್ಲ. ಆದ್ರೆ, ಸದನದಲ್ಲಿ ಸಣ್ಣ ನೀರಾವರಿ ಸಚಿವರು ಏನು ಉತ್ತರ ಕೊಟ್ಟಿದ್ದರೋ ಅದನ್ನು ನಾನು ಮಾಧ್ಯಮದವರ ಮುಂದೆ ಇಟ್ಟಿದ್ದೇನೆ. ಈ ತಾಲೂಕಿಗೆ ಎಚ್‌ಎನ್‌ವ್ಯಾಲಿ, ಎತ್ತಿನಹೊಳೆ ನೀರು ಇರಬಹುದು ತಾಲೂಕಿಗೆ ಬಂದರೆ ಮೊದಲು ಖುಷಿ ಪಡುವವರಲ್ಲಿ ಮೊದಲಿಗನಾಗಿರುತ್ತನೆ. ಎತ್ತಿನಹೊಳೆ ಯೋಜನೆ ಎಲ್ಲಿದ್ದೇಯೋ ಅಲ್ಲಿ ಗುದ್ದಲಿಪೂಜೆ ಮಾಡಬೇಕಿತ್ತು. ಚಿಕ್ಕಬಳ್ಳಾಪುರದಲ್ಲಿ ಮಾಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದೇನೆ. ಮಳೆಯಿಂದಾಗಿ ತಾಲೂಕಿನಲ್ಲಿನ ರೈತರ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದ್ರು.ಇದೇ ಸಂದರ್ಭದಲ್ಲಿ ಶಾಸಕ ಎಲ್.ಎನ್.ನಾರಾಯಣಸ್ವಾಮಿ, ಮುಖಂಡರು ಹಾಗೂ ಅಧಿಕಾರಿಗಳು ಕೆರೆಗಿಳಿದು ಒಟ್ಟಿಗೆ ಬಾಗಿನ ಅರ್ಪಿಸಿದ ದೃಶ್ಯ ಗಮನಸೆಳೆಯಿತು.
ಈ ವೇಳೆ ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಮುನೇಗೌಡ, ಕಾರಹಳ್ಳಿ ಗ್ರಾಪಂ ಅಧ್ಯಕ್ಷೆ ಚಂದ್ರಿಕಾ.ಎನ್.ರವಿ, ಉಪಾಧ್ಯಕ್ಷೆ ಶಾಂತಮ್ಮ ಮುನಿಕೃಷ್ಣಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಮುನಿಕೃಷ್ಣಪ್ಪ, ಸದಸ್ಯರಾದ ನಾಗರಾತ್ನಮ್ಮ ಜಯರಾಮ್, ಎನ್.ರಮೇಶ್, ಮುನಿರಾಜು, ಯಂಬ್ರಹಳ್ಳಿ ಎಂಪಿಸಿಎಸ್ ಅಧ್ಯಕ್ಷ ಮಾರೇಗೌಡ, ಗ್ರಾಪಂ ಮಾಜಿ ಅಧ್ಯಕ್ಷರುಗಳಾದ ಎ.ದೇವರಾಜ್, ಸಿ.ರಾಜೇಂದ್ರ, ತಾಪಂ ಮಾಜಿ ಸದಸ್ಯ ಕಾರಹಳ್ಳಿ ಶ್ರೀನಿವಾಸ್, ಮುಖಂಡರಾದ ಯಂಬ್ರಹಳ್ಳಿ ಎನ್.ರವಿ, ಕೆ.ವಿ.ಮಂಜುನಾಥ್, ಹುರಳಗುರ್ಕಿ ಶ್ರೀನಿವಾಸ್, ಮುನಿರಾಜು, ವೆಂಕಟೇಶ್, ಹನುಮಂತರಾಜು, ಉಪತಹಶೀಲ್ದಾರ್ ಚೈತ್ರಾ, ಸಣ್ಣ ನೀರಾವರಿ ಎಇಇ, ಪಿಡಿಒ ಕವಿತಾ, ಗ್ರಾಪಂ ಮುಖಂಡರು, ಗ್ರಾಮಸ್ಥರು ಇದ್ದರು.
Be the first to comment