ಕೇಂದ್ರ ಸರ್ಕಾರ ಸೆ.14 ರಂದು ಹಿಂದಿ ದಿವಸ್ ಆಚರಿಸಲು ಕದಂಬ ಸೈನ್ಯ (ಕನ್ನಡ ಸಂಘಟನೆ)ಯಿಂದ ವಿರೋಧ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಪಟ್ಟಣದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಕದಂಬ ಸೈನ್ಯ ಕನ್ನಡ ಸಂಘಟನೆಯ ವತಿಯಿಂದ ಕೇಂದ್ರ ಸರ್ಕಾರ ಒತ್ತಡ ಹೇರಿತ್ತಿರುವ ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿ ಪತ್ರಿಕಾಗೋಷ್ಠಿ ನಡೆಸಿದರು.ಕದಂಬ ಸೇನೆಯ ರಾಜ್ಯ ಉಪಾಧ್ಯಕ್ಷ ಡಾ. ದೇವನಹಳ್ಳಿ ದೇವರಾಜ್ ಮಾತನಾಡಿ, ಇತಿಹಾಸದ ಪುಟದಲ್ಲಿ ಅಚ್ಚಳಿಯದೆ ಉಳಿದಿರುವ ಕನ್ನಡ ಸಾಮ್ರಾಟ್ ರ ಶೂರ ಕನ್ನಡಿಗರ ಪರಾಕ್ರಮಗಳ ವೀರ ಶೌರ್ಯದ ಹೋರಾಟಗಳೇ ಕನ್ನಡಿಗರಿಗೆ ಆದರ್ಶವಾಗಲಿ ಕುತಂತ್ರದಿಂದ ಹಿಂದಿ ಹೇರಿಕೆ ಮಾಡಿ ಕನ್ನಡದ ಅಸ್ತಿತ್ವಕ್ಕೆ ಧಕ್ಕೆ ತರುತ್ತಿರುವ ಕನ್ನಡ ವಿರೋಧಿ ಗಳಿಗೆ ತಕ್ಕ ಉತ್ತರ ನೀಡಬೇಕಾಗಿದೆ. ಕೇಂದ್ರ ಸರಕಾರ ಪ್ರತಿ ವರ್ಷ ಸೆ. 14 ರಂದು ಹಿಂದಿ ದಿವಸ್ ಆಚರಣೆ ಗಾಗಿ ಕೋಟಿಗಟ್ಟಲೆ ತೆರಿಗೆ ಹಣವನ್ನು ಪೋಲು ಮಾಡುತ್ತಾ ಬಂದಿದೆ. ಕೇಂದ್ರ ಸರ್ಕಾರದ ಕಛೇರಿಗಳು, ಬ್ಯಾಂಕುಗಳು, ರೈಲ್ವೆ, ಅಂಚೆ, ಇತರೆ ಇಲಾಖೆ ಹಾಗೂ ಪ್ರಮುಖ ಕೇಂದ್ರ ಗಳಿಂದ ಹಿಂದಿ ಪ್ರಚಾರಕ್ಕೆ ಹೆಚ್ಚು ಒತ್ತು ನೀಡುತ್ತಾ ಬಂದಿದೆ. ಕನಾ೯ಟಕದಲ್ಲಿ ಕನ್ನಡ ಭಾಷೆಗೆ ತನ್ನದೇ ಆದಂತಹ ವೈಶಿಷ್ಟ್ಯ ಇದೆ. ಹಿಂದೆ ಭಾಷಿಕರ ಹಾವಳಿಂದ ಯಿಂದ ಕನ್ನಡಿಗರು ತತ್ತರಿಸಿ ಹೋಗುತ್ತಿದ್ದಾರೆ. ಎಲ್ಲೋ ಒಂದುಕಡೆ ಕನ್ನಡ ಭಾಷೆಗೆ ಧಕ್ಕೆ ತರುವ ಕೆಲಸ ಆಗುತ್ತಿದೆ. ಭಾರತದ ಸಂವಿಧಾನ 22 ಭಾಷೆಗಳನ್ನು ಅಧಿಕೃತ ಎಂದು ಘೋಷಿಸಿದ್ದರೂ, ಆಯಾ ಭಾಷೆಗಳು ತಮ್ಮ ರಾಜ್ಯಗಳಲ್ಲಿ ಮಾತ್ರ ಅಧಿಕೃತ ಭಾಷೆಗಳಾಗಿವೆ. ಆದರೆ ಹಿಂದಿ ಮಾತ್ರ ಕೇಂದ್ರ ಸರಕಾರದ ಆಡಳಿತದಲ್ಲಿ ಅಧಿಕೃತ ಭಾಷೆಯಾಗಿದೆ. ಈ ಮೊದಲು ಸಂವಿಧಾನದಲ್ಲಿರುವ ಭಾಷಾ ವಿಧಿಗಳು ಕಲಂ 342 ರಿಂದ 351 ರವರಿಗೆ ತಿದ್ದುಪಡಿಯಾಗಲೇಬೇಕು. ಅದೇ ಭಾಷೆ ಅಸಮಾನತೆಗೆ ಮದ್ದು ಕನಾ೯ಟಕದಲ್ಲಿ ಹಿಂದಿ ಹೇರಿಕೆ ಯಿಂದ ಕನ್ನಡ ಎರಡನೇ ದಜೆ೯ ಭಾಷೆಯಾಗುತ್ತಿದೆ ಕನಾ೯ಟಕ ಸರಕಾರವು, ಕನಾ೯ಟಕ ೨೭ ಲೋಕಸಭಾ ಸದಸ್ಯರು ಬೆಂಬಲವಾಗಿ ನಿಂತಿದ್ದಾರೆ. ಎಲ್ಲಾ ಭಾಷೆಗಳನ್ನು ಸಮಾನವಾಗಿ ನೋಡಬೇಕು, ಹಿಂದಿ ದಿವಸ್ ಮಾಡುವ ಬದಲಿಗೆ ಸರ್ವ ಭಾಷಾ ದಿವಸ್ ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕು. ಈ ವಿಚಾರವಾಗಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರ ಕ್ಕೆ ಒತ್ತಡ ಹೇರಲಾಗಿದೆ. ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಕದಂಬ ಸೈನ್ಯ ಕನ್ನಡ ಸಂಘಟನೆ ಶಾಂತಿಯುತ ಪ್ರತಿಭಟನೆ ಮೂಲಕ ಮಾನ್ಯ ಜಿಲ್ಲಾಧಿಕಾರಿಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುತ್ತಿದೆ ಎಂದರು.ಈ ವೇಳೆ ಕದಂಬ ಸೈನ್ಯ ಕನ್ನಡ ಸಂಘಟನೆಯ ಜಿಲ್ಲಾಧ್ಯಕ್ಷ ಭರತ್ ಕುಮಾರ್ ಎಂ, ತೇಜಸ್ ಎ.ಎನ್, ಸಂಘದ ಪದಾಧಿಕಾರಿಗಳು ಇದ್ದರು.

CHETAN KENDULI

Be the first to comment

Leave a Reply

Your email address will not be published.


*