ಜಿಲ್ಲಾ ಸುದ್ದಿಗಳು
ಮಸ್ಕಿ
ಇಂದು ಬಳಗಾನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೊಳಪಡುವ ಲಕ್ಷ್ಮಿ ಕ್ಯಾಂಪ್ ಗ್ರಾಮದಲ್ಲಿ ರಾಷ್ಟ್ರೀಯ ಪ್ಲೋರೋಸಿಸ್ ತಡೆ ಹಾಗೂ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಗ್ರಾಮಸ್ಥರಿಗೆ ಉಚಿತ ಫ್ಲೋರೋಸಿಸ್ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಸದರಿ ಆರೋಗ್ಯ ಶಿಬಿರಕ್ಕೆ ಜಿಲ್ಲಾ ಮಟ್ಟದಿಂದ ಜಿಲ್ಲಾ ಪ್ಲೋರೋಸಿಸ್ ಸಲಹೆಗಾರರಾದ ಗುರುಪ್ರಸಾದ್ ಹಿರೇಮಠರವರು ತಪಾಸಣಾ ಶಿಬಿರಕ್ಕೆ ಆಗಮಿಸಿ ಗ್ರಾಮಸ್ಥರಿಗೆ ಪ್ಲೋರೋಸಿಸ್ ಎಂದರೇನು ನೀರಿನಿಂದ ಕಾಯಿಲೆ ಹೇಗೆ ಉಂಟಾಗುತ್ತದೆ ಹಾಗೂ ಈ ಫ್ಲೋರೋಸಿಸ್ ಕಾಯಿಲೆಯನ್ನು ಹೇಗೆ ತಡೆಗಟ್ಟ ಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಅಂತರ್ಜಲದ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿರುವುದರಿಂದ ಅಂತಹ ನೀರನ್ನು ಸೇವಿಸಿದರೆ ಜನರಿಗೆ ಕಾಯಿಲೆಗಳು ಉಂಟಾಗುತ್ತವೆ ಎಂದು ಮಾಹಿತಿ ನೀಡಿದರು ಕಾಯಿಲೆಯಲ್ಲಿ ಮುಖ್ಯವಾಗಿ ಮಕ್ಕಳಲ್ಲಿ ಕಂದು ಹಲ್ಲು ಹಾಗೂ ವಯಸ್ಕರಲ್ಲಿ ಮೊಣಕಾಲು ನೋವು ಕೀಲುನೋವು ಹಾಗೂ ಕೀಲಿನ ಸವಕಳಿ ಹಾಗೂ ರಕ್ತಹೀನತೆ ಉಂಟಾಗಬಹುದು ಎಂದು ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಬಳಗನೂರ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗಳಾದ ಡಾ. ದೌಲಾಸಾಬ್ ರವರು ಮಾತನಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್ಲಾ ಗ್ರಾಮಗಳ ಕುಡಿಯುವ ನೀರನ್ನು ಈ ವರ್ಷ ಫ್ಲೋರೈಡ್ ಪರೀಕ್ಷೆಗೆ ಒಳಪಡಿಸಿದ್ದು ಅದರಲ್ಲಿ ಲಕ್ಷ್ಮಿ ಗ್ರಾಮದಲ್ಲಿ ಕುಡಿಯುವ ನೀರಿನಲ್ಲಿ ಅಗತ್ಯಕ್ಕಿಂತ ನಾಲ್ಕುಪಟ್ಟು ಹೆಚ್ಚಿರುವುದರಿಂದ ಇಂದು ಗ್ರಾಮದಲ್ಲಿ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು ಮತ್ತು ಅವರು ಮಾತನಾಡಿ ಲಕ್ಷ್ಮಿ ಕ್ಯಾಂಪ್ ಗ್ರಾಮದಲ್ಲಿ ಹಲವಾರು ಜನರಿಗೆ ಪ್ರೋಸಿಸ್ ಕಾಯಿಲೆಗಳು ಇರುವುದು ಕಂಡುಬಂದಿದ್ದು ಹಾಗಾಗಿ ಈ ಗ್ರಾಮದಲ್ಲಿ ನೀರಿನ ಶುದ್ಧೀಕರಣದ ಘಟಕದ ಅವಶ್ಯಕತೆ ತುಂಬಾ ಇದೆ ಎಂದರುಹಾಗೂ ಅವರು ಶಿಬಿರಕ್ಕೆ ಬಂದಿದ್ದ ಸಾರ್ವಜನಿಕರ ಆರೋಗ್ಯ ಪರೀಕ್ಷಿಸಿ ಅದರಲ್ಲಿ ಶಂಕಿತ ಫ್ಲೋರೋಸಿಸ್ ಕೈಯಿಂದ ಬಳಲುತ್ತಿರುವವರನ್ನು ಪರೀಕ್ಷಿಸಿದರು ಹಾಗೂ ಮುತ್ರ ಪರೀಕ್ಷೆ ಮಾಡಲಾಯಿತು . ಫ್ಲೋರೋಸಿಸ್ ಕಾಯಿಲೆಯಿಂದ ಬಳಲುತ್ತಿರುವವರಿಗೆ ಆರೋಗ್ಯ ಶಿಬಿರದಲ್ಲಿ ಉಚಿತವಾಗಿ ಸೂಕ್ತ ಔಷಧಿಗಳನ್ನು ಹಾಗೂ Mobility Aids ಗಳನ್ನು ವಿತರಿಸಲಾಯಿತು. ಈ ಆರೋಗ್ಯ ಶಿಬಿರದಲ್ಲಿ ಲಕ್ಷ್ಮಿ ಕ್ಯಾಂಪಿನ ಸುಮಾರು 50ಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿ ತಮ್ಮ ಆರೋಗ್ಯ ಪರೀಕ್ಷೆಯನ್ನು ಮಾಡಿಸಿಕೊಂಡರು. ಈ ಕಾರ್ಯಕ್ರಮದಲ್ಲಿ ಫ್ಲೋರೋಸಿಸ್ ಕಾರ್ಯಕ್ರಮದ ಪ್ರಯೋಗಾಲಯ ತಂತ್ರಜ್ಞರಾದ ಗಂಗಾಧರ್ ಹಾಗೂ ಬಳಗಾನೂರು ಉಪಕೇಂದ್ರದ ಆರೋಗ್ಯ ಸಹಾಯಕರಾದ ಶ್ರೀಮತಿ ಲಕ್ಷ್ಮಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.
Be the first to comment