ಜಿಲ್ಲೆಯ ಶಿಕ್ಷಣ ಸಂಸ್ಥೆಗಳು ಸರಕಾರದ ಮಟ್ಟದಲ್ಲಿ ಅನೇಕ ಸೌಲಭ್ಯಗಳು ಇದ್ದು ಅವನ್ನು ಸದ್ಭಳಕೆ ಮಾಡಿ ಕೊಳ್ಳಬೇಕು ಎಂದು ಮಾಜಿ ಶಾಸಕ ಹಾಗೂ ಒಕ್ಕೂಟದ ಸಭೆಯ ನೇತೃತ್ವವನ್ನು ವಹಿಸಿದ ಹಂಪನಗೌಡ ಬಾದರ್ಲಿ ಹೇಳಿದರು ಸ್ಥಳೀಯ ವೀ ವಿ. ಸಂಘದ ಕಚೇರಿಯಲ್ಲಿ ನಡೆದ ರಾಯಚೂರು ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪೂರ್ವಬಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದು ಸಾಮಾನ್ಯದ ಕೆಲಸವಲ್ಲ.
ಮೊದಲು ನಮ್ಮ ನೂನ್ಯತೆಯನ್ನು ನಾವು ಸರಿಪಡಿಸಿಕೊಳ್ಳಬೇಕು.ಅಂದಾಗ ಸಂಸ್ಥೆ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದರು.1985 ರಲ್ಲಿ ಲಿಂಗಸೂಗೂರನಲ್ಲಿ ಒಂದು ಡಿಗ್ರಿ ಕಾಲೇಜು ಇರಲಿಲ್ಲಾ ಆಗ ವಿ. ಸಿ. ಬಿ. ಸಂಸ್ಥೆಯನ್ನು ಆರಂಭಿಸಿ ಅದನ್ನು ಕಟ್ಟಿ ಬೆಳೆಸಿದೆವು ಎಂದರು. ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ ಸಂಸ್ಥೆಗಳು. ಕಲ್ಯಾಣ ಕರ್ನಾಟಕದ ಅಭಿವೃದ್ದಿ ಮಂಡಳಿಯಲ್ಲಿ ಸಾಕಷ್ಟು ಅನುದಾನವಿದ್ದು ಅದರ ಬಳಕೆಯನ್ನು ಶಿಕ್ಷಣ ಸಂಸ್ಥೆಗಳು ಕೇಳಿ ಬಳಕೆ ಮಾಡಿಕೊಳ್ಳಬೇಕು ಎಂದರು. ಸಂದರ್ಭದಲ್ಲಿ ಲಿಂಗಸಗೂರಿನ ಹಲವಾರು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಭಾಗಿಯಾಗಿ ತಮ್ಮದೇಯಾದ ಸಲಹೆ ನೀಡಿದರು. ಒಕ್ಕೂಟದ ಸದಸ್ಯರಾದ ಬಸವಂತರಾಯ ಕುರಿ.ನಾಗರಾಜ್ ವಕೀಲರು. ಬಸವರಾಜ ಸಿರವಾರ.ಶರಣಪ್ಪ ಮೇಟಿ. ಇತರರು ಇದ್ದರು.
Be the first to comment