ಜಿಲ್ಲಾ ಸುದ್ದಿಗಳು
ರಾಯಚೂರು
ಮಾನ್ವಿ: ಒಬ್ಬ ಪಿ ಎಸ್ ಐ ಮನಸ್ಸು ಮಾಡಿದರೆ ನೂರು ಜನ ನಾಯಕರನ್ನು ಸೃಷ್ಟಿ ಮಾಡಬಹುದು ಎಂದು ಪಿ.ರವಿಕುಮಾರ್ ವಕೀಲರು ಹೇಳಿದರು.ಇಂದು ತಾಲೂಕಿನ ಪೋತ್ನಾಳ ಗ್ರಾಮದ ಅಂಬೇಡ್ಕರ್ ಭವನದಲ್ಲಿ ನೂತನವಾಗಿ ಪಿ ಎಸ್ ಐ ಹುದ್ದೆಗೆ ಆಯ್ಕೆಯಾದ ಚರಣ್ ರಾಜ್ ಅಮರಾವತಿ ಹಾಗೂ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದ ಕು.ಜುಲೇಕಾ ರವರ ಸನ್ಮಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಇವರು ಸಾಧನೆ ಮಾಡಿದ ಪ್ರತಿಯೊಬ್ಬ ವ್ಯಕ್ತಿಯ ಹಿಂದೆ ಹೇಳಲಾರದಷ್ಷು ಬಡತನ ಮತ್ತು ಉನ್ನತ ಹುದ್ದೆಯ ಹಸಿವು ಅಡಗಿರುತ್ತದೆ ಇಂತಹ ಅದೆಷ್ಟೋ ಕಷ್ಟಗಳನ್ನು ಮೆಟ್ಟಿ ನಿಂತು ಇಂದು ಇವರು ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಹ ಇವರು ತಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಇನ್ನೂ ದೊಡ್ಡ ಹುದ್ದೆಯನ್ನು ಅಲಂಕರಿಸುವಂತಾಗಲಿ ಎಂದು ಹೇಳಿದರು. ನಂತರ ನೂತನವಾಗಿ ಪಿ ಎಸ್ ಐ ಹುದ್ದೆಗೆ ಆಯ್ಕೆಯಾಗಿರುವ ಚರಣ್ ರಾಜ್ ಹಾಗೂ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದ ಕುಮಾರಿ ಜುಲೇಕಾ ರವರನ್ನು ಸಮುದಾಯದ ವತಿಯಿಂದ ಸನ್ಮಾನ ಮಾಡಿ ಗೌರವಿಸಿದರು.ಈ ಸಂಧರ್ಭದಲ್ಲಿ ವಂದನೀಯಾ ಫಾಧರ್ ಸುನಿಲ್ , ಶೇಖರಪ್ಪ ವಕೀಲರು ಧುಮುತಿ, ಮೈಕಾಲ್ ಪೋತ್ನಾಳ್, ಪಿ.ಯೇಸಪ್ಪ, ಮಹಾದೇವಪ್ಪ ಧುಮುತಿ, ವಿರೇಶ್ ಜೀನೂರು ಕ್ಯಾಂಪ್, ಹನುಮಂತ ಖರಬಾದಿನ್ನಿ, ಅಶೋಕ್ ಡಿಸ್,ಶಿವುರಾಜ, ರಾಮಣ್ಣ, ಚಾರ್ಲಿ ಉದ್ಬಾಳ್, ಶರಿಫ್ ಸಾಬ್ ಪೋತ್ನಾಳ್, ರಾಚಪ್ಪ ಪೋತ್ನಾಳ್, ಮಂಜುನಾಥ ಗ್ಯಾರೇಜ್, ಪರುಶುರಾಮ್ ಬಾಗಲವಾಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Be the first to comment