ಸರಳವಾಗಿ ನಡೆದ ಭಟ್ಕಳದ ಪ್ರಸಿದ್ಧ ಶ್ರೀ ಸೋಡಿಗದ್ದೆ ಮಹಾಸತಿ ದೇವಿ ಅಮ್ಮನವರ ಜಾತ್ರೆ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಭಟ್ಕಳ

ಜಿಲ್ಲೆಯ ಪ್ರಸಿದ್ದ ಸೋಡಿಗದ್ದೆ ಮಹಾಸತಿ ಅಮ್ಮನವರ ದೇವಸ್ಥಾನದ ಹಾಲಹಬ್ಬ ಜಾತ್ರಾ ಮಹೋತ್ಸವ ಸರಕಾರದ ಕೋವಿಡ್ ಮಾರ್ಗಸೂಚಿಯಂತೆ ಸರಳವಾರ ಪ್ರಾರಂಭಗೊಂಡಿತು.ಸತತ 9 ದಿನಗಳ ಕಾಲ ನಡೆಯುವ ಈ ಜಾತ್ರೆಗೆ ಉತ್ತರಕನ್ನಡ ಜಿಲ್ಲೆಯ ಭಕ್ತರಲ್ಲದೇ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಭಕ್ತರು ಆಗಮಿಸಿ ಮಹಸತಿ ದೇವರಿಗೆ ಪೂಜೆ ಸಲ್ಲಿಸುವ ಪರಿಪಾಠವಿದ್ದು ವಿಷೇಶವಾಗಿ ಮಹಾಸತಿ ದೇವರಿಗೆ ಹೂವಿನ ಪೂಜೆ, ಕೆಂಡ ಸೇವೆ, ಗೊಂಬೆ ಸೇವೆ ಸೇರಿದಂತೆ ವಿವಿಧ ರೀತಿಯ ಹರಕೆಗಳನ್ನು ತೀರಿಸುತ್ತಾರೆ. ಕೋವಿಡ್ ಕಾರಣ ತಾಲೂಕು ಆಡಳಿತ ಜನಸಂದಣಿ ಸೇರದಂತೆ ಮಾರ್ಗಸೂಚಿ ಹೊರಡಿಸಿ, ಸಂಪ್ರದಾಯದಂತೆ ಸರಳವಾಗಿ ಜಾತ್ರೆ ಆಚರಿಸಲು ಅನುವು ಮಾಡಿಕೊಟ್ಟಿದೆ.

CHETAN KENDULI

ಇಂದು ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ನೆರವೇರಿಸಿ ಮಹಾಸತಿ ಪ್ರಥಮ ಪೂಜೆ ಸಲ್ಲಿಸಲಾಯಿತು. ಮಾಸ್ಕ ಧರಿಸಿದ ಭಕ್ತರಿಗಷ್ಟೆ ದೇವಸ್ಥಾನದ ಒಳಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.ದೇವಸ್ಥಾನದ ಆವರಣದಲ್ಲಿ ಯಾವುದೆ ಜಾತ್ರಾ ಪೇಟೆಯ ಅಂಗಡಿಗಳಿಗೆ ನಿರ್ಭಂಧ ವಿದಿಸಲಾಗಿತ್ತು. ಬೆಳಿಗ್ಗೆಯಿಂದಲೇ ಸ್ಥಳೀಯ ಸೇರಿದಂತೆ ವಿವಿಧ ಕಡೆಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಕೃತಾರ್ಥರಾದರು. ಜಾತ್ರೇ ಪೇಟೆ ನಿರ್ಭಂದಿಸಿರುವುದರಿಂದ ರವಿವಾರ ಭಕ್ತರ ಸಂಖ್ಯೆ ವಿರಳವಾಗಿತ್ತು.ಶಾಸಕ ಸುನೀಲ್ ನಾಯ್ಕ, ವಿಧಾನ ಪರಿಷತ್ತಿನ ನೂತನ ಸದಸ್ಯರಾದ ಗಣಪತಿ ಉಳ್ವೇಕರ, ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಪಡೆದರು. ಆಡಳಿತ ಮಂಡಳಿಯ ಸದಸ್ಯರು ತಹಶೀಲ್ದಾರ ರವಿಚಂದ್ರ, ಪೊಲೀಸ್ ಸಿಬ್ಬಂದಿಗಳು ಭಕ್ತರಿಗೆ ಸರಳವಾಗಿ ದರ್ಶನಕ್ಕೆ ತೆರಳಲು ಅವಕಾಶ ಮಾಡಿಕೊಟ್ಟರು.

Be the first to comment

Leave a Reply

Your email address will not be published.


*