ಕಾಂಗ್ರೆಸ್ ಪಕ್ಷಕ್ಕೆ ಅಸ್ಥಿತ್ವದ ಕಣವಾದ ಗ್ರಾಮ ಪಂಚಾಯತಿ ಚುನಾವಣೆ…! ಎತ್ತಿ ಹಿಡಿಯುವುದೇ ಬಿಜೆಪಿಯ ಅನುದಾನದ ಪರ್ವ…! ಆಟಕ್ಕುಂಟು ಲೆಕ್ಕಕ್ಕಿಲ್ಲದ ಜೆಡಿಎಸ್ ಪಕ್ಷಕ್ಕೆ ಸಿಗುವುದು ಸಮಾಧಾನದ ಅಧಿಕಾರ…!!!

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು

CHETAN KENDULI

ಮುದ್ದೇಬಿಹಾಳ ಡಿ.3:

ಡಿ.22 ರಂದು ನಡೆಯಲಿರುವ ಗ್ರಾಮ ಪಂಚಾಯತಿಗಳ ಚುನಾವಣೆಯಲ್ಲಿ ಮೇಲುಗೈ ಸಾಧಿಸಬೇಕು ಎಂದು ಮುದ್ದೇಬಿಹಾಳ ಕ್ಷೇತ್ರದಲ್ಲಿ ಇತಿಹಾಸ ಸೃಷ್ಠಿಸಿರುವ ಬಿಜೆಪಿ ಪಕ್ಷದ ಕಾರ್ಯಕರ್ತರು ಚುರುಕುಗೊಳ್ಳುತ್ತಿದ್ದರೆ ಕ್ಷೇತ್ರವನ್ನು ಭದ್ರಬುನಾದಿಯಾಗಿಸಿದ್ದ ಕಾಂಗ್ರೆಸ್ ಪಕ್ಷವು ಮತ್ತೆ ತನ್ನ ಆಡಳಿತವನ್ನು ಗ್ರಾಮೀಣ ಪ್ರದೇಶದಿಂದ ಮುಂದುವರೆಸುವ ರಣತಂತ್ರ ನಡೆಸಿದೆ.

ಕಳೆದ ಚುನಾವಣೆಯಲ್ಲಿ 25 ಪಂಚಾಯತಿಗಳಲ್ಲಿ ತನ್ನಪರವಾದ ಆಡಳಿತವನ್ನು ಅಧಿಕಾರಕ್ಕೆ ತಂದಿದ್ದ ಕಾಂಗ್ರೆಸ್ ಪಕ್ಷವು ಈ ಬಾರಿ ನಡೆಯಲಿರುವ 20 ಪಂಚಾಯತಿಗಳ ಚುನಾವಣೆಯಲ್ಲಿಯೂ ತನ್ನದೇ ಅಧಿಕಾರ ತರುವ ತವಕದಲ್ಲಿದೆ. ಆದರೆ ಮುದ್ದೇಬಿಹಾಳ ಕ್ಷೇತ್ರಕ್ಕೆ ಹಿಂದೆ ಬಾರದಂತಹ ಅಭಿವೃದ್ಧಿ ಅನುದಾವನ್ನು ತಂದು ಕ್ಷೇತ್ರ ನದಿದಂಡೆಯ ಎಲ್ಲ ಗ್ರಾಮಗಳಿಗೂ ರಸ್ತೆ, ಚರಂಡಿ, ಶಾಲಾ ಕಟ್ಟಡ, ಸಮುದಾಯ ಭವನ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಪ್ರತಿಯೊಂದು ಪಂಚಾಯತಿಯಲ್ಲೂ ತಮ್ಮ ಬೆಂಬಲಿತ ಅಭ್ಯರ್ಥಿಗಳಿಗೆ ಅಧಿಕಾರ ವಹಿಸುವ ಪ್ರಯತ್ನದಲ್ಲಿದ್ದಾರೆ.

ಆಟಕ್ಕುಂಟು ಲೆಕ್ಕಕ್ಕಿಲ್ಲವಾದ ಜೆಡಿಎಸ್:

ಮುದ್ದೇಬಿಹಾಳ ಕ್ಷೇತ್ರದಲ್ಲಿ ವಿಧಾನಸಭಾ ಚನಾವಣೆಯಲ್ಲಿಯೇ ತನ್ನ ಅಸ್ಥಿತ್ವ ಕಳೆದುಕೊಂಡಿರುವ ಜೆಡಿಎಸ್ ಪಕ್ಷವು ಗ್ರಾಮ ಪಂಚಾಯತಿ ಚುನಾವನೆಯಲ್ಲಿ ಯಾವುದೇ ರೀತಿಯ ಸಕಾರಾತ್ಮಕವಾಗಿ ಕಣಕ್ಕೆ ಬಾರದಿರುವುದು ಜೆಡಿಎಸ್ ಪಕ್ಷವು ಆಟಕ್ಕುಂಟು ಲೆಕ್ಕಕ್ಕಿಲ್ಲವಾದಂತಾಗಿದೆ ಎಂದು ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ.

ಮತಗಟ್ಟೆಗಳು:

ಬಿದರಕುಂದಿ ಪಂಚಾಯತಿಯ ೫ ಕ್ಷೇತ್ರಗಳಿಗೆ ೮ ಮತಗಟ್ಟೆಗಳು, ಕುಂಟೋಜಿ ಪಂಚಾಯತಿಯ ೭ ಕ್ಷೇತ್ರಗಳಿಗೆ ೯ ಮತಗಟ್ಟೆಗಳು, ಅಡವಿ ಸೋಮನಾಳ ಪಂಚಾಯತಿಯ ೬ ಕ್ಷೇತ್ರಗಳಿಗೆ ೮ ಮತಗಟ್ಟೆಗಳು, ಮಡಿಕೇಶ್ವರ ಗ್ರಾಮ ಪಂಚಾಯತಯ ೭ ಕ್ಷೇತ್ರಗಳಿಗೆ ಒಟ್ಟೂ ೧೦ ಮತಗಟ್ಟೆಗಳು, ಢವಳಗಿ ಪಂಚಾಯತಿಯ ೬ ಕ್ಷೇತ್ರಗಳಿಗೆ ೮ ಮತಗಟ್ಟೆಗಳು, ರೂಢಗಿ ಪಂಚಾಯತಿಯ ೫ ಕ್ಷೇತ್ರಗಳಿಗೆ ೯ ಮತಗಟ್ಟೆಗಳು, ಬಸರಕೋಡ ಪಂಚಾಯತಿಯ ೫ ಕ್ಷೇತ್ರಗಳಿಗೆ ೭ ಮತಗಟ್ಟೆಗಳು, ಕವಡಿಮಟ್ಟಿ ಪಂಚಾಯತಿಯ ೬ ಕ್ಷೇತ್ರಗಳಿಗೆ ೮ ಮತಗಟ್ಟೆಗಳು, ನಾಗರಬೆಟ್ಟ ಪಂಚಾಯತಿಯ ೫ ಕ್ಷೇತ್ರಗಳಿಗೆ ೬ ಮತಗಟ್ಟೆಗಳು, ರಕ್ಕಸಗಿ ಪಂಚಾಯತಿಯ ೬ ಕ್ಷೇತ್ರಗಳಿಗೆ ೭ ಮತಗಟ್ಟೆಗಳು, ಕೋಳೂರ ಪಂಚಾಯತಿಯ ೮ ಕ್ಷೇತ್ರಗಳಿಗೆ ೧೧ ಮತಗಟ್ಟೆಗಳು, ಆಲೂರ ಪಂಚಾಯತಿಯ ೮ ಕ್ಷೇತ್ರಗಳಿಗೆ ೧೦ ಮತಗಟ್ಟೆಗಳು, ತಂಗಡಗಿ ಪಂಚಾಯತಿಯ ೬ ಕ್ಷೇತ್ರಗಳಿಗೆ ೯ ಮತಗಟ್ಟಗಳು, ಬಿಜ್ಜೂರ ಪಂಚಾಯತಿಯ ೫ ಕ್ಷೇತ್ರಗಳಿಗೆ ೮ ಮತಗಟ್ಟೆಗಳು, ನಾಗಬೇನಾಳ ಪಂಚಾಯತಿಯ ೪ ಕ್ಷೇತ್ರಗಳಿಗೆ ೬ ಮತಗಟ್ಟೆಗಳು, ಹಿರೇಮುರಾಳ ಪಂಚಾಯತಿಯ ೮ ಕ್ಷೇತ್ರಗಳಿಗೆ ೧೦ ಮತಗಟ್ಟೆಗಳು, ಯರಝರಿ ಪಂಚಾಯತಿಯ ೭ ಕ್ಷೇತ್ರಗಳಿಗೆ ೯ ಮತಗಟ್ಟೆಗಳು, ಹುಲ್ಲೂರ ಪಂಚಾಯತಿಯ ೮ ಕ್ಷೇತ್ರಗಳಿಗೆ ೯ ಮತಗಟ್ಟೆಗಳು, ಕಾಳಗಿ ಪಂಚಾಯತಿಯ ೫ ಕ್ಷೇತ್ರಗಳಿಗೆ ೬ ಮತಗಟ್ಟೆ ಸೇರಿ ಒಟ್ಟೂ ೧೬೪ ಮತಗಟ್ಟೆಗಳನ್ನು ಮಾಡಲಾಗಿದೆ ಎಂದು ಪ್ರಭಾರಿ ತಹಸೀಲ್ದಾರ ಅನೀಲಕುಮಾರ ಢವಳಗಿ ತಿಳಿಸಿದ್ದಾರೆ.

“ಮತದಾರರಲ್ಲಿ ಈಗಾಗಲೇ ಜಾಗೃತಿ ಮೂಡಿಬಂದಿದೆ. ಅಭಿವೃದ್ಧಿ ಎಂದರೇನು ಎನ್ನುವುದು ತಿಳಿದಿದೆ. ಯಾರಿಗೆ ಅಧಿಕಾರ ನೀಡಿದರೆ ಯಾವ ಅಭಿವೃದ್ಧಿಯಾಗುವುದು ಎನ್ನುವುದೂ ಗೊತ್ತಾಗಿದೆ. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಯಾವುದೇ ಪಕ್ಷವಿಲ್ಲ. ಆದರೆ ಯಾವ ವ್ಯಕ್ತಿಯಿಂದ ಅಭಿವೃದ್ಧಿಯಾಗುವುದು ಎನ್ನುವುದು ಅರಿತುಕೊಂಡು ಮತದಾರರು ಮತಹಾಕುತ್ತಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೆ ಹೆಚ್ಚಿನ ಸಂಖ್ಯೆಯಲ್ಲಿ ಗೆಲವು ಸಾಧಿಸಲಿದ್ದಾರೆ.”

-ಎ.ಎಸ್.ಪಾಟೀಲ ನಡಹಳ್ಳಿ,

ಶಾಸಕರು ಹಾಗೂ ಕರ್ನಾಟಕ ರಾಜ್ಯ ಆಹಾರ ಮತ್ತು ಸರಬರಾಜು ನಿಗಮ ಅಧ್ಯಕ್ಷರು.

Be the first to comment

Leave a Reply

Your email address will not be published.


*