ರಾಜ್ಯ ಸುದ್ದಿಗಳು
ಮುದ್ದೇಬಿಹಾಳ ಡಿ.3:
ಸಂತ ಕನಕದಾಸರು ಕೇವಲ ಒಂದು ಜಾತಿಗೆ ಸೀಮಿತರಾಗಿಸಬೇಡಿ. ಸಮಾನತೆಯ ಸಂದೇಶ ಸಾರಿದ ಮಾನವಿಯ ಮೌಲ್ಯ ಎತ್ತಿಹಿಡಿದು ಕೀರ್ತಿವಂತರಾದ್ದಾರೆ. ಅವರ ತತ್ವ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಪಟ್ಟಣದ ಮಾರುತಿನಗರ ಬಡಾವಣೆಯ ಯಲ್ಲಾಲಿಂಗ ಮಠದ ಸಿದ್ದಲಿಂಗ ಮಹಾರಾಜರು ಹೇಳಿದರು
ಪಟ್ಟಣದ ಮಿನಿವಿಧಾನಸೌಧದ ತಹಶೀಲ್ದಾರ ಕಚೇರಿಯಲ್ಲಿ ಗುರುವಾರ ತಾಲೂಕಾ ಆಡಳಿತವತಿಯಿಂದ ನಡೆದ ಸಂತ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಹಾಲುಮತ ಸಮುದಾಯ ಅಧಿಕ ಸಂಖ್ಯೆಯಲ್ಲಿದ್ದರು ಒಗ್ಗಟ್ಟಿನ ಕೊರೆತೆ ಇರುವದರಿಂದ ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿಯಲು ಕಾರಣವಾಗಿದೆ. ಈ ನಿಟ್ಟಿನಲ್ಲಿ ಹಾಲುಮತ ಸಮಾಜದ ಮುಖಂಡರು ಸಮಾಜದ ಹಾಗೂ ಯುವ ಪೀಳಿಗೆಯಗಗಳ ಹಿತದೃಷ್ಠಿಯಿಂದ ತಮ್ಮೋಳಗಿನ ಆಂತರಿಕ ಬಿನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಾದರೆ ಮುಂಬರುವ ದಿನಗಳಲ್ಲಿ ಹಾಲುಮತರದವರೇ ಶಾಸಕರಾಗುವುದು ನಿಶ್ಚೀತ ಎಂದು ಭವಿಷ್ಯವಾಣಿ ನುಡಿದರು.
ಇಲ್ಲಿಯವರೆಗೆ ಹಾಲುಮತದ ಸ್ವಾಮಿಗಳು ಸ್ಥಳಿಯ ಶಾಸಕರಿಗಾಗಲಿ ಅಥವಾ ಬೇರೆ ರಾಜಕಾರಿಗಳಿಗಾಗಲಿ ಕೈಯೋಡ್ಡುವ ಕಾರ್ಯ ಮಾಡಿಲ್ಲ. ಅದರ ಅವಶ್ಯಕತೆ ಈ ಹಾಲುಮತದ ಸಂಸ್ಕೃತಿಗೆ ಗೊತ್ತಿಲ್ಲ, ಹಾಗಾಗಿ ಸಮಾದ ಬಾಂಧವರು ತಮ್ಮೋದಿಗೆ ಇತರೇ ಎಲ್ಲ ಸಮೂದಾಯದವರನ್ನು ಒಗ್ಗೂಡಿಸಿಕೊಂಡು ಮೇಲೆ ಬರಲು ಪ್ರಯತ್ನಿಸಬೇಕು ಜತೆಗೆ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಈ ಬಾರಿ ಹಾಲುಮತದವರೇ ಶಾಸಕರಾಗುವ ಗುರಿಯೊಂದಿಗೆ ಸಮಾಜ ಕಟ್ಟು ಕಾರ್ಯದಲ್ಲಿ ತೊಡಗಬೇಕು ಎಂದು ಯಲ್ಲಾಲಿಂಗ ಮಠದ ಸಿದ್ದಲಿಂಗ ಮಹಾರಾಜರು ಕರೆ ನೀಡಿದರು.
ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರು ಮಾತನಾಡಿ ಸಂತ ಕನಕದಾಸರು ವಿಶ್ವಕ್ಕೆ ಶಾಂತಿ ಧರ್ಮದ ಸಂದೇಶ ಸಾರುವ ಮೂಲಕ ಜಾತಿ ಪದ್ದತಿ ಹಾಗೂ ಮೂಢನಂಬಿಕೆಗಳ ವಿರುದ್ಧ ಹೋರಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಸಮಾಜದಲ್ಲಿ ಅಡಗಿರುವ ಮೂಡನಂಬಿಕೆ, ಜಾತಿ, ಧರ್ಮ ವ್ಯವಸ್ಥೆಯನ್ನು ಬೇರು ಸಮೇತ ಕಿತ್ತು ಹಾಕಿದಾಗಲೆ ಸಂತ ಕನಕದಾಸರಿಗೆ ಸಲ್ಲಿಸುವ ಗೌರವವಾಗಿದೆ. ಉತ್ತಮ ಸಮಾಜ ನಿರ್ಮಾಣವಾಗಲು ಕನಕದಾಸರ ತತ್ವಗಳು ಮಾರ್ಗದರ್ಶಕವಾಗಿವೆ ಎಂದು ಹೇಳಿದರು.
ಈ ಸಮಯದಲ್ಲಿ ಪುರಸಭೆ ಮುಖ್ಯಾಧಿಕಾರಿ ಜಿ ಎಚ್ ಕಾಸೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎ ಇಇ ಜೆ ಪಿ ಶೇಟ್ಟಿ, ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ತಾಲೂಕಾ ಕುರುಬರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ, ಮುಖಂಡರಾದ ಬಿ.ಎಸ್.ಮೇಟಿ, ಮಲಕೇಂದ್ರಗೌಡ ಪಾಟೀಲ, ಸಂಗಪ್ಪ ಮೇಲಿನಮನಿ, ಸಂತೋಷ ನಾಯ್ಕೋಡಿ, ರವಿ,ಜಗಲಿ, ಪರಶುರಾಮ ನಾಗರಬೆಟ್ಟ, ರೆವಣೇಪ್ಪ ನಡಗೇರಿ, ನಂದೇಪ್ಪ ಗುರಿಕಾರ, ರೇವಣೆಪ್ಪ ಮೇಲಿನಮನಿ, ನಾಗಪ್ಪ ರೂಡಗಿ ಪುರಸಭೆ ಸದಸ್ಯರಾದ ಭಾರತಿ ಪಾಟೀಲ, ಸಹನಾ ಬಡಿಗೇರ, ಸಂಗಮ್ಮ ದೇವರಹಳ್ಳಿ, ಪ್ರೀತಿ ದೇಗಿನಾಳ, ಬಸವರಾಜ ಮುರಾಳ, ರಮೇಶ ಮಾಡಬಾಳ ಮತ್ತಿತರರು ಇದ್ದರು ಇದ್ದರು. ಗೋಪಾಲ ಹೂಗಾರ ನಿರೂಪಿಸಿ ಕೊನೆಗೆ ವಂದಿಸಿದರು.
Be the first to comment