ಇ-ಖಾತ ಸಮಸ್ಯೆ ಉತ್ತರಕನ್ನಡ ಜಿಲ್ಲೆಗೆ ವಿನಾಯ್ತಿ – ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ 

ವರದಿ-ಕುಮಾರ್ ನಾಯ್ಕ.ಉಪಸಂಪಾದಕರು

ರಾಜ್ಯ ಸುದ್ದಿಗಳು 

ಶಿರಸಿ

ಇ-ಖಾತಾ ಯೋಜನೆ ಜಾರಿಯಿಂದ ಉದ್ಭವಿಸಿರುವ ಸಮಸ್ಯೆ ಪರಿಹರಿಸಲು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಈ ಹಿಂದೆ ನೀಡಿದಂತೆ ಉತ್ತರ ಕನ್ನಡ ಜಿಲ್ಲೆಗೂ ಈ ಕಾಯಿದೆ ಪರಿಧಿಯಿಂದ ವಿನಾಯ್ತಿ ಕೊಡಿಸುವ ಭರವಸೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ನೀಡಿದ್ದಾರೆ.ಇ-ಖಾತಾ ಸಮಸ್ಯೆ ಪರಿಹಾರದ ಬಗ್ಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ವರದಿ ನೀಡಲೆಂದೇ ರಚಿತವಾದ ಸಚಿವ ಸಂಪುಟ ಅನುಮೋದಿತ ಉಪ ಸಮಿತಿಯ ಸದಸ್ಯರಾಗಿರುವ ಸಚಿವ ಹೆಬ್ಬಾರ ಅವರ ಈ ಭರವಸೆ ನೊಂದಿರುವ ಜನತೆಗೆ ಹೊಸ ಆಶಾಕಿರಣವಾಗಿದೆ.

CHETAN KENDULI

ಇ-ಖಾತಾ ಸಮಸ್ಯೆ ಪರಿಹಾರ ಹೋರಾಟ ಸಮಿತಿಯ ನಿಯೋಗ ಸಮಿತಿ ಅಧ್ಯಕ್ಷರಾದ ಗೋಪಾಲಕೃಷ್ಣ ಅನವಟ್ಟಿ ನೇತೃತ್ವದಲ್ಲಿ 2021 ಅಕ್ಟೋಬರ್ 18 ರಂದು ಸಚಿವರನ್ನು ಶಿರಸಿಯ ಕೆ.ಡಿ.ಸಿ.ಸಿ. ಸಭಾಂಗಣದಲ್ಲಿ ಭೇಟಿಯಾಗಿ ಚರ್ಚಿಸಿದಾಗ ಮೇಲಿನ ಭರವಸೆ ನೀಡಿದ್ದಾರೆ.

ಇ-ಖಾತಾ ಯೋಜನೆ ಜಾರಿಯಾದ ನಂತರ ವಿಶೇಷವಾಗಿ ರಾಜ್ಯದ ಬಾಂಬೆ ಕರ್ನಾಟಕ ಪ್ರದೇಶದ ಜಿಲ್ಲೆಗಳು ಸಮಸ್ಯೆ ಅನುಭವಿಸುತ್ತಿವೆ. ಮೊದಲಿನಿಂದಲೂ ಈ ಭಾಗದ ಜಿಲ್ಲೆಗಳಲ್ಲಿ ಎಲ್ಲ ತರಹದ ಭೂ ದಾಖಲೆಗಳ ನಿರ್ವಹಣೆ ಕಂದಾಯ ಇಲಾಖೆಯಿಂದಲೇ ನಡೆಯುತ್ತಿತ್ತು. ಕರಾವಳಿ, ಮಲೆನಾಡು, ಗುಡ್ಡಗಾಡು, ಹೆಚ್ಚಿನ ಅರಣ್ಯ ಪ್ರದೇಶ ಹೊಂದಿರುವ ಉತ್ತರ ಕನ್ನಡದಂಥ ಜಿಲ್ಲೆಗಳಲ್ಲಿ ರೂಢಿಯಲ್ಲಿದ್ದ ಕಾಯಿದೆ ನೀತಿಗಳು ಬೇರೆ. ಆಯಾಯ ಕಾಲದ ಕಾನೂನು ಅನುಸರಿಸಿ ಸಂಬಂಧಿತ ಸ್ಥಳೀಯ ಆಡಳಿತ ಅನುಮೋದನೆಯೊಂದಿಗೆ ಸಣ್ಣ, ಸಣ್ಣ ಪ್ರದೇಶಗಳಲ್ಲಿ ವಸತಿ, ವಸತಿನಿವೇಶನ ಸೃಜಿಸಲಾಗಿದೆ.

Be the first to comment

Leave a Reply

Your email address will not be published.


*