ಕೊರೊನಾ ಚಿಕಿತ್ಸೆಯಲ್ಲಿಯೂ ಕ್ಷೇತ್ರ ಜನತೆಗೆಯ ಸೌರಕ್ಷಣೆಗೆ ಮುಂದಾದ ಶಾಸಕ ನಡಹಳ್ಳಿ ಮುದ್ದೇಬಿಹಾಳಕ್ಕೆ ಆಕ್ಸಿಜೆನ್ ಪ್ಲಾಂಟ್ ಮಂಜೂರಾತಿ…!!! ಜೀವ ಉಳಿಸಿಕೊಂಡು ಮುಂದಿನ ಜೀವನ ನಡೆಸೋಣ: ನಡಹಳ್ಳಿ ಜನತೆಯಲ್ಲಿ ಮನವಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI 9902284143

ಕೊರೊನಾ ದೃಢಪಟ್ಟು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಮುದ್ದೇಬಿಹಾಳ ಮತಕ್ಷೇತ್ರದ ಜನತೆ ಕಾಳಜಿಯಿಂದ ಮುದ್ದೇಬಿಹಾಳ ತಾಲೂಕಿಗೆ ಆಕ್ಸಿಜನ್ ಪ್ಲಾಂಟ್ ಮಂಜೂರಾತಿ ಮಾಡಿಸಿದ್ದಾರೆ. ಇದರಿಂದ ಚಿಕಿತ್ಸೆಯೊಳಗಿದ್ದರೂ ಕ್ಷೇತ್ರದ ಜನತೆಯ ಸೌರಕ್ಷಣೆ ಬಗ್ಗೆ ಕಾಳಜಿ ತೋರಿಸಿದ್ದು ಎಲ್ಲ ಮೆಚ್ಚುಗೆ ಪಾತ್ರವಾಗಿದೆ.

ಹೌದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಟ್ಟಿರುವ ಶಾಸಕ ನಡಹಳ್ಳಿ ಅವರು ತಮ್ಮ ಆಪ್ತ ಕಾರ್ಯದರ್ಶಿ ಬಾಬುರಾವ್ ಕುಲಕರ್ಣಿ ಅವರ ಮೂಲಕ ರಾಜ್ಯ ಮುಖ್ಯಮಂತ್ರಿ ಯಡಿಯೂರಪ್ಪನರಿಗೆ ಮುದ್ದೇಬಿಹಾಳ ತಾಲೂಕಿನಲ್ಲಿ ಆಕ್ಸಿಜನ್ ಪ್ಲಾಂಟ್ ಆರಂಭಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮಂಜೂರಾತಿ ನೀಡಿದ್ದಾರೆ. ಇನ್ನೂ ಒಂದು ವಾರದೊಳಗೆ ಆಕ್ಸಿಜನ್ ಪ್ಲಾಂಟ ಕಾರ್ಯಾರಂಬಗೊಳ್ಳಲಿದೆ.

ಕೋವಿಡ್ ಬೇಡ್ ಹೆಚ್ಚಳಕ್ಕೆ ಕ್ರಮ:

ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಯಲ್ಲಿ ಈಗಾಗಲೇ ಕೊರೊನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನಡೆಸಲಾಗಿದ್ದು ಮುದ್ದೇಬಿಹಾಳ ಆಸ್ಪತ್ರೆಯಲ್ಲಿ 50 ಆಕ್ಸಿಜನ್ ಬೇಡ್, 6 ಐಸಿಯು ಮತ್ತು ವೆಂಟಿಲೇಟರ್ ಬೇಡ್ ವ್ಯವಸ್ಥೆ ಮಾಡಲಾಗಿದ್ದು ನಾಲತವಾಡ ಆಸ್ಪತ್ರೆಯಲ್ಲಿ 30 ಆಕ್ಸಿಜನ್ ಬೇಡ್ ವ್ಯವಸ್ಥೆ ಮಾಡಲಾಗಿದೆ. ಇನ್ನೂ ತಾಳಿಕೋಟಿ ತಾಲೂಕಾ ಆಸ್ಪತ್ರೆಯಲ್ಲಿ 30 ಆಕ್ಸಿಜನ್ ಬೇಡ್ ವ್ಯವಸ್ಥೆ ಮಾಡಲಾಗಿದ್ದು ಕೊರೊನಾ ದೃಢಪಟ್ಟ ರೋಗಿಗಳಿಗೆ ಚಿಕಿತ್ಸೆ ನೀಡಲು ಯಾವುದೇ ತೊಂದರೆಗಳಿಲ್ಲ. ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಹೆಚ್ಚಿನ ಬೇಡ್ ವ್ಯವಸ್ಥೆ ಬೇಕಾದರೆ ಅದಕ್ಕೂ ಸರಕಾರದಿಂದ ಯಾವುದೇ ವಿಳಂಭವಾಗುವುದಿಲ್ಲ ಎಂದು ಸಚಿವರು ದೂರವಾಣಿ ಮೂಲಕ ತಿಳಿಸಿದ್ದಾರೆ ಎಂದು ಶಾಸಕ ನಡಹಳ್ಳಿ ಹೇಳಿದ್ದಾರೆ.

ಪತ್ನಿ ಮತ್ತು ಮಗನ ಕಾರ್ಯವನ್ನು ಶ್ಲಾಘಿಸಿದ ಶಾಸಕ ನಡಹಳ್ಳಿ:

ನನಗೆ ಹಾಗೂ ನನ್ನ ತಂದೆಯವರಿಗೆ ಕೊರೊನಾ ದೃಢಪಟ್ಟು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿ ಕೊರೊನಾ ರೋಗಿಗಳ ಕಷ್ಟಗಳೇನು ಎಂಬುವುದು ನನಗೆ ತಿಳಿದಿದೆ. ಶಾಸಕನಾಗಿ ನನಗೇ ಇಷ್ಟು ತೊಂದರೆ ಇದ್ದ ಮೇಲೆ ಸಾಮಾನ್ಯರಾಗಿರುವ ನನ್ನ ಕ್ಷೇತ್ರದ ಜನರಿಗೆ ಎಷ್ಟು ತೊಂದರೆಯಾಗಿರಬಹುದು ಎಂದು ಯೋಚಿಸುತ್ತಿರುವಾಗ ಮುದ್ದೇಬಿಹಾಳ ಕ್ಷೇತ್ರದಲ್ಲಿ ನನ್ನ ಪತ್ನಿ ಅಕ್ಕಮಹಾದೇವಿ ಪಾಟೀಲ ಹಾಗೂ ಮಕ್ಕಳು ಕೊರೊನಾ ರೋಗಿಗಳಿಗೆ ಮೊಳಕೆಕಾಳು, ವಿಟಮಿನ್-ಸಿ ಇರುವ ಹಣ್ಣು ಸೇರಿಸಿ ಆಹಾರ ಕಿಟ್ ತಯ್ಯಾರಿಸಿ ಅವುಗಳನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳ ಮೂಲಕ ಹಂಚುತ್ತಿದ್ದು ತಕ್ಕಮಟ್ಟಿಗೆ ನನಗೆ ಸಮಾದಾನವಾಗಿದೆ ಎಂದು ಹೇಳಿದ ಅವರು ಪತ್ನಿ ಹಾಗೂ ಮಕ್ಕಳ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಆರೋಗ್ಯ ಇಲಾಖೆ ಗುತ್ತಿಗೆ ಸಿಬ್ಬಂದಿಗಳಿಗೆ ವೇತನ ನೀಡಿ:

ಈಗಾಗಲೇ ಮುದ್ದೇಬಿಹಾಳ ಮತಕ್ಷೇತ್ರದ ವಿವಿಧ ಆರೋಗ್ಯ ಆಸ್ಪತ್ರೆಗಳಲ್ಲಿ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಗುತ್ತಿಗೆ ಮೂಲಕ ನೇಮಕಗೊಂಡು ಸೇವೆ ಮಾಡುತ್ತಿರುವ ಸಿಬ್ಬಂದಿಗಳಿಗೆ ಆಯಾ ಸಂಬಂಧಿಸಿದ ಏಜೆಂನ್ಸಿ ಮಾಲಿಕರು ಸಮಯಕ್ಕೆ ಸರಿಯಾಗಿ ಸಿಬ್ಬಂದಿಗಳಿಗೆ ವೇನತವನ್ನು ನೀಡುವಂತಾಗಬೇಕು ಸರಿಯಾಗಿ ವೇತನ ನೀಡದ ಏಜೆನ್ಸಿ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಆರೋಗ್ಯ ಸಚಿವರಿ ತಿಳಿಸಿದ್ದು ತಕ್ಷಣವೇ ಸಂಬಂಧಿಸಿದ ಏಜೆನ್ಸಿಗಳಿಗೆ ತಿಳಿಸುವುದಾಗಿ ಸಚಿವರು ಸ್ಪಂಧನೆ ನೀಡಿದ್ದಾರೆ ಎಂದು ಶಾಸಕ ನಡಹಳ್ಳಿ ಅವರು ತಿಳಿಸಿದ್ದಾರೆ.

ಜೀವ ಉಳಿಸಿಕೊಂಡು ಜೀವನ ನಡೆಸೋಣ: ಶಾಸಕ ನಡಹಳ್ಳಿ ಮನವಿ

ಕೊರೊನಾ ದೃಢಪಟ್ಟ ಬಳಿಕ ಮಣಿಪಾಲ ಆಸ್ಪತ್ರೆಯಲ್ಲಿ ನನ್ನ ತಂದೆಯವರಿಗೆ ಬೇಡ್ ಸಿಗುವ ಸಾಧ್ಯತೆಗಳು ಇರಲಿಲ್ಲಾ. ನಾನು ಶಾಸಕನಿದ್ದೇನೆ ಎನ್ನುವಕಾರಣಕ್ಕ ತಂದೆಗೆ ಬೇಡ್ ಲಭ್ಯವಾಗಿ ಚಿಕಿತ್ಸೆ ಪಡೆದುಕೊಂಡು ಮರುಜನ್ಮ ಪಡೆದಂತಾಯಿತು. ಕೊವಿಡ್ ಪ್ರಥಮ ಹಂತದ ಲಸಿಕೆ ಹಾಕಿಸಿಕೊಂಡ ಕಾರಣ ನನಗೆ ಹಾಗೂ ನಮ್ಮ ತಂದೆಗೆ ಕೊರೊನಾ ಎರಡನೇ ಅಲೆಯ ಹೆಚ್ಚಿನ ಪರಿಣಾಮವಾಗಿಲ್ಲ. ಆದ್ದರಿಂದ ಯಾವುದೇ ಊಹಾ ಪೂಹಗಳಿಗೆ ಕಿವಿಗೊಡದೇ ಎಲ್ಲರೂ ಕೊವಿಡ್ ಲಸಿಕೆ ಹಾಕಿಸಿಕೊಳ್ಳಿರಿ. ಸ್ವಲ್ಪ ದಿನಗಳ ಕಾಲ ಹೊರಗಡೆ ಬಾರದೇ ಕುಟುಂಬದೊಂದಿಗೆ ಕಾಲ ಕಳೆಯಿರಿ. ಜೀವ ಉಳಿಸಿಕೊಂಡರೆ ಮರು ದಿನ ಜೀವನ ಸಾಗಿಸಬಹುದು ಎಂಬುವುದನ್ನು ತಿಳಿದುಕೊಳ್ಳಬೇಕಿದೆ ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜ ನಿಗಮ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಜನತೆಗೆ ಮನವಿ ಮಾಡಿದ್ದಾರೆ.

 

Be the first to comment

Leave a Reply

Your email address will not be published.


*