ಜಿಲ್ಲಾ ಸುದ್ದಿಗಳು
ಕುಮಟಾ
ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪುರಸಭೆ ಇತ್ತೀಚೆಗಷ್ಟೇ ಎಲ್ಲರೂ ಆಶ್ಚರ್ಯ ಪಡುವ ರೀತಿಯಲ್ಲಿ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿ ಯನ್ನು ಪಡೆದುಕೊಂಡಿತು. ಅದು ಹೇಗೆ ಪಡೆದುಕೊಂಡಿತು ಎನ್ನುವುದೇ ಇಡೀ ಜಿಲ್ಲೆಯಲ್ಲಿ ಜನರಿಗೆ ಕಾಡುತ್ತಿರುವ ಬಹು ದೊಡ್ಡ ಪ್ರಶ್ನೆಯಾಗಿದೆ. ಯಾಕೆಂದರೆ ಕುಮಟಾ ಪುರಸಭೆ ಸ್ಛಚ್ಛತೆ ವಿಷಯದಲ್ಲಿ ಜಿಲ್ಲೆಯಲ್ಲೇ ಕೆಳಮಟ್ಟದಲ್ಲಿದೆ. ಕುಮಟಾ ಪುರಸಭೆ ಕಟ್ಟಡದ ಕೆಳಭಾಗದಲ್ಲೇ ರಾಶಿ ರಾಶಿ ಕಸ ತಿಂಗಳುಗಟ್ಟಲೇ ಬಿದ್ದರೂ ಸ್ಪಚ್ಛ ಮಾಡದೇ ಹಾಗೇ ಬಿಟ್ಟಿದ್ದಾರೆ.
ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಪುರಸಭೆ ಕಟ್ಟಡದ ಕೆಳಭಾಗ ಕುಡುಕರ ಅಡ್ಡವಾಗಿದ್ದು ರಾಶಿ ರಾಶಿ ಬಿಯರ್ ಬಾಟಲ್ ಸೇರಿದಂತೆ ಕಸದ ರಾಶಿಯೇ ಇಲ್ಲಿರುತ್ತದೆ. ತಮ್ಮ ಕಚೇರಿಯ ಕಟ್ಟಡಭಾಗವನ್ನೇ ಸ್ವಚ್ಛ ಮಾಡಿಕೊಳ್ಳಲಾಗದ ಪುರಸಭೆಗೆ ಅದು ಹೇಗೆ ಪ್ರಶಸ್ತಿ ದೊರೆಯಿತು ಎಂಬುದೇ ಯಕ್ಷಪ್ರಶ್ನೆಯಾಗಿದೆ
Be the first to comment