ಜಿಲ್ಲಾ ಸುದ್ದಿಗಳು
ಹೊನ್ನಾವರ
ತಾಲೂಕಿನ ಐಟಿಐ ಕಾಲೇಜು ವಿದ್ಯಾರ್ಥಿಗಳಿಂದ ಬೇಕಾಬಿಟ್ಟಿ ಪೀಸು ರೂಪದಲ್ಲಿ ಹಣ ವಸೂಲಿ ಆರೋಪ ಇದ್ದು, ರಸೀದಿಯೂ ನೀಡದೆ, ಪರೀಕ್ಷೆಗೂ ಕುಳಿಸದೆ, ಅಂಕಪಟ್ಟಿಯನ್ನೂ ನೀಡದೇ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ತಾಲೂಕು ಘಟಕದ ವತಿಯಿಂದ ತಹಶೀಲ್ದಾರ್ ರಿಗೆ ಮನವಿ ಸಲ್ಲಿಸಿದರು.
ಈ ಬಗ್ಗೆ ವಿದ್ಯಾರ್ಥಿಗಳು ಆಯುಕ್ತರಿಗೆ , ಕೈಗಾರಿಕಾ ತರಬೇತಿ ಇಲಾಖೆಗೆ ದೂರು ನೀಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಆದರೆ ಈ ವಂಚನೆ ಎಸಗಿರುವ ದ್ವಿತೀಯ ದರ್ಜೆ ಸಹಾಯಕ ಹುದ್ದೆಯಲ್ಲಿರುವ ಪ್ರಮೋದ್ ಸಣ್ಣ ಬೊಮ್ಮಾಜಿ ವಿರುದ್ಧ ಸೂಕ್ತವಾದ ಕಾನೂನು ಕ್ರಮ ಕೈಗೊಂಡು, ವಂಚನೆಗೆ ಒಳಗಾದ ಸುಮಾರು 38 ವಿದ್ಯಾರ್ಥಿಗಳಿಗೆ ರಸೀದಿ ನೀಡದೆ ವಸೂಲಿ ಮಾಡಿರುವ ಸಂಪೂರ್ಣ ಹಣವನ್ನು ವಸೂಲು ಮಾಡಿ ನೀಡಬೇಕು. ಹಾಗೂ ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ ಪುನಃ ಪರೀಕ್ಷೆ ಬರೆಯುವಂತೆ , ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು. ಎಂದು ತಹಶೀಲ್ದಾರ್ ರಿಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ ಸಲ್ಲಿಸಿದರು.
Be the first to comment