ಮಾವಿನಕುರ್ವೆ ಗ್ರಾಮಸ್ತರಿಂದ ಕರಿಕಲ್ ಗ್ರಾಮದಲ್ ಕಡಲ ಕಿನಾರೆಯಲ್ಲಿ ಸಿಗಡಿ ಕೃಷಿ ಮೀನುಗಾರಿಕೆ ವಿರೋಧಿಸಿ ಗ್ರಾಮ ಪಂಚಾಯತ್ ಗೆ ಮನವಿ

ವರದಿ-ಜೀವೋತ್ತಮ್ ಪೈ , ಭಟ್ಕಳ್

ಜಿಲ್ಲಾ ಸುದ್ದಿಗಳು 

ಭಟ್ಕಳ

ತಾಲುಕಿನ ಮಾವಿನಕುರ್ವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಿಕಲ್ ಗ್ರಾಮದ ಕಡಲ ಕಿನಾರೆ ಜಾಗದಲ್ಲಿ ಸಿಗಡಿ ಕೃಷಿ ಮೀನುಗಾರಿಕೆ ಮಾಡುವುದನ್ನು ನಿಷೇಧಿಸುವ ಕುರಿತು ಊರಿನ ಗ್ರಾಮಸ್ಥರು ಗುರುವಾರದಂದು ಸಹಾಯಕ ಆಯುಕ್ತೆ ಹಾಗೂ ಗ್ರಾಮ ಪಂಚಾಯತ್ ಪಿಡಿಒಗೆ ಮನವಿ ಸಲ್ಲಿಸಿದ್ದಾರೆ.ಕರಿಕಲ್ ಗ್ರಾಮದ ಸಿಗಡಿ ಕೃಷಿ ಮೀನುಗಾರಿಕೆ ಮಾಡಲು ಕೆಲವು ಜನರು ನಿರ್ಧರಿಸಿದ್ದು ಊರಿನ ಜನರ ಗಮನಕ್ಕೆ ಬಂದಿರುತ್ತದೆ. ಈಗಾಗಲೇ ಕರಿಕಲನಲ್ಲಿ ಹಲವು ಬೇರೆ ಬೇರೆ ಜಾಗದಲ್ಲಿ 100 ಮೀಟರ್ ಆಳದವರೆಗೆ ಅಕ್ರಮ ಮರಳು ಗಣಿಗಾರಿಕೆ ದಂಧೆ ಕೂಡ ನಡೆಸಲಾಗುತ್ತಿದೆ. ಈ ಕಾರ್ಯಕ್ಕೆ ಕರಿಕಲ್ ಗ್ರಾಮದ ಎಲ್ಲ ಸಾರ್ವಜನಿಕರಿಂದ ತುಂಬ ವಿರೋಧ ಕೂಡ ವ್ಯಕ್ತವಾಗಿದೆ. ಅಲ್ಲದೇ ಪ್ರಮುಖವಾಗಿ ಈ ಜಾಗದ ವ್ಯಾಪ್ತಿಯಲ್ಲಿ ಅಂದರೆ ನೂರು ಮೀಟರ್ ಒಳಗೆ 2 ನಾಗ ಜಟ್ಟಿಗೇಶ್ವರ ದೇವಸ್ಥಾನ, ಭವ್ಯವಾದ ಶ್ರೀರಾಮಮಂದಿರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಲವಾರು ಮನೆಗಳು ಜೊತೆಗೆ ಪಾತಿ ದೋಣಿ ಮೀನುಗಾರರ ಸ್ಥಳವಿದೆ. ಈ ವ್ಯಾಪ್ತಿಯಲ್ಲಿ ಬರುವುದರಿಂದ ತೀವ್ರವಾದ ವಿರೋಧ ಕೂಡ ಕರಿಕಲ್ ಗ್ರಾಮದ ಜನರಿಂದ ವ್ಯಕ್ತವಾಗಿದೆ.

CHETAN KENDULI

ಈ ಸಿಗಡಿ ಕೃಷಿ ಮೀನುಗಾರಿಕೆ ಮಾಡುವುದರಿಂದ ಸಮುದ್ರ ನೀರನ್ನು ತೆಗೆದುಕೊಂಡು ಉಪಯೋಗಿಸಿದ ನಂತರ ಇದರ ಕೊಳಚೆ ಮತ್ತು ವಿಷಪೂರಿತ ನೀರನ್ನು ಸಹ ಪುನಃ ಸಮುದ್ರಕ್ಕೆ ಬಿಡುವ ಕಾರ್ಯ ನಡೆಯುತ್ತದೆ. ಹೀಗೆ ಸಮುದ್ರದ ವಿಷಪೂರಿತ ನೀರನ್ನು ಬಿಡುವುದರಿಂದ ಬೆಳವಣಿಗೆಯಾಗುವ ಮೀನಿನ ಸಂತತಿ ಅವನತಿ ಹೊಂದುವುದರ ಜೊತೆಗೆ ಕಡಲ ಕಿನಾರೆಯ ಮೀನುಗಾರರಿಗೆ ಅಂದರೆ ಸಾಂಪ್ರದಾಯಿಕ ಮೀನುಗಾರಿಕೆಯಾದ ಪಾತಿ ದೋಣಿ ನಡೆಸುವ ಜನರ ಜೀವನಕ್ಕೆ ಬಹಳ ತೊಂದರೆಯಾಗುತ್ತದೆ. ಹಾಗೂ ಅಲ್ಲೇ ಇದ್ದ ಮನೆಗಳಿಗೆ ಕೆಟ್ಟ ವಾಸನೆ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ಈಗಾಗಲೇ ಇದ್ದು ಇನ್ನಷ್ಟು ತೀವ್ರವಾಗುವ ಸಂಭವ ಕೂಡ ಇರಲಿದೆ‌‌. ಇದರಿಂದ ಯಾವುದೇ ಕಾರಣಕ್ಕೂ ಕರಿಕಲ್ ಗ್ರಾಮದ ಯಾವುದೇ ಭಾಗದಲ್ಲಿ ಸಿಗಡಿ ಮೀನುಗಾರಿಕೆ ಮಾಡುವ ಕೆಲಸ ಯಾರಿಗೂ ಕೊಡಬಾರದು ಊರ ಸಾರ್ವಜನಿಕರ ಅನುಮತಿ ಇಲ್ಲದೇ ನೀಡಬಾರದೆಂದು ಮನವಿ ಉಲ್ಲೇಖಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥ ರಾಮಚಂದ್ರ ಮೋಗೇರ ‘ ಗ್ರಾಮದಲ್ಲಿ‌ ಜನವರಿಯಿಂದ ಮೇ ತನಕ ಕುಡಿಯುವ ನೀರಿನ ಸಮಸ್ಯೆ ಇದೆ. ನೀರು ತುಂಬಾ ಆಳಕ್ಕೆ ಹೋದಾಗ ಉಪ್ಪು ನೀರು ಮಿಶ್ರಿತವಾಗಲಿದೆ. ಇದರಿಂದ ಸಿಗಡಿ ಕ್ರಷಿ ಮೀನುಗಾರಿಕೆಲ್ಲಿ ಸಿಗಡಿಗೆ ಹಾಕುವ ಆಹಾರ ಪದಾರ್ಥಗಳಲ್ಲಿ ಕೆಲವು ಅವು ತಿನ್ನಲಿದ್ದು ಉಳಿದವು ಅಂತರ್ಜಾಲ ಮಟ್ಟದಲ್ಲಿ ಸೇರಿಕೊಳ್ಳಲಿವೆ. ಇನ್ನು ತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡುವುದರಿಂದ ಅಲ್ಲಿನ ಮೀನಿನ ಸಂತತಿ ನಾಶವಾಗಲಿದೆ‌. ಈ ಬಗ್ಗೆ ಶೀಘ್ರವಾಗಿ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.ಈ ಸಂಧರ್ಭದಲ್ಲಿ ರಾಜಶೇಖರ ನಾಯ್ಕ, ಮಂಜುನಾಥ ಮೋಗೇರ, ಶೇಖರ ಮೋಗೇರ, ರಾಮಚಂದ್ರ ಮೋಗೇರ, ಬೈರಾ ಮೋಗೇರ, ಮಾಧವ ಮೋಗೇರ, ವಿನಾಯಕ ಮೋಗೇರ, ನಾಗರಾಜ ಮೋಗೇರ, ತಿರುಮಲ ಮೋಗೇರ ಮುಂತಾದವರು ಇದ್ದರು.

Be the first to comment

Leave a Reply

Your email address will not be published.


*