ರಾಜ್ಯ ಸುದ್ದಿಗಳು
ದೇವನಹಳ್ಳಿ
ಪ್ರತಿಯೊಬ್ಬರು ಪಕ್ಷ ಬೇಧ ಮರೆತು ಒಗ್ಗೂಡಿ ಅಭಿವೃದ್ಧಿಗೆ ಶ್ರಮಿಸೋಣ. ನಿಮ್ಮ ಜೊತೆಯಲ್ಲಿ ಸದಾ ನಾನೀರುತ್ತೇನೆ ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.ಪಟ್ಟಣದ ಪವರ್ತಪುರ ರಸ್ತೆಯಲ್ಲಿರುವ ಪೈತ್ ಬಾಪ್ಟೀಸ್ಟ್ ಚರ್ಚ್‌ನಲ್ಲಿ ತಾಲೂಕು ಫಾಸ್ಟರ್ಸ್ ಫೆಲೋಶಿಪ್ ಐಕ್ಯತೆಯ ಕೂಟದಲ್ಲಿ ಫಾಸ್ಟರ್ಸ್‌ಗಳಿಗೆ ದಿನಸಿಕಿಟ್ ವಿತರಿಸಿ ಅವರು ಮಾತನಾಡಿದರು. ನಾನು ಶಾಸಕನಾದಾಗಿನಿಂದಲೂ ನಾಲ್ಕು ಬಾರಿ ಚರ್ಚ್‌ಗೆ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ಎಲ್ಲರೂ ಸ್ನೇಹ ಸೌಹರ್ಧ್ಯದಿಂದ ಬೆರೆತು ಬದುಕು ನಡೆಸುವಂತಾಗಬೇಕು. ನಿಮ್ಮೊಂದಿಗೆ ನಾನು ಇರುತ್ತೇನೆ. ನಿಮ್ಮ ಸಮಸ್ಯೆಗಳಿಗೆ ಸ್ಪಂಧಿಸುವ ಕೆಲಸ ಮಾಡುತ್ತೇನೆ. ಯಾವುದೇ ರಾಜಕೀಯಕ್ಕೆ ದಿನಸಿ ಕಿಟ್ ನೀಡುತ್ತಿಲ್ಲ. ನನ್ನ ವೈಯಕ್ತಿಕವಾಗಿ ನೀಡುತ್ತಿರುವುದು. ನಾನು ಶಾಸಕನಾಗಿರಲೀ, ಇಲ್ಲದಿರಲೀ ಈ ಭಾಗದ ಜನರೊಂದಿಗೆ ಸದಾ ಇರುತ್ತೇನೆ. ಸಮಾಜ ಸೇವೆ ದೇವರು ನನಗೆ ಕೊಟ್ಟಿರುವ ಸೌಭಾಗ್ಯವಾಗಿದೆ. ಮುಂದಿನ ದಿನಗಳಲ್ಲಿಯೂ ಸಹ ಇದೇ ರೀತಿ ನಿಮ್ಮ ಸೇವೆ ಮಾಡಲು ಸಿದ್ಧನಿದ್ದೇನೆ. ನನ್ನನ್ನು ಕರೆಸಿ ಅಭಿನಂದಿಸಿರುವುದು ಮತ್ತಷ್ಟು ಜವಾಬ್ದಾರಿ ನನ್ನ ಮೇಲೆ ಇದೆ ಎಂದು ಹೇಳಿದರು.
ಎನ್‌ಸಿಸಿ ರಾಜ್ಯ ಉಪಾಧ್ಯಕ್ಷ ರವೆಡೆಂಟ್ ರಾಜು.ಬಿ.ಪಿ ಮಾತನಾಡಿ, ಶಾಸಕರು ತಾಲೂಕಿನ ಜನರೊಂದಿಗೆ ಬೆರೆತು ಕೆಲಸ ಮಾಡುತ್ತಿದ್ದಾರೆ. ಸರಕಾರದ ಸೌಲಭ್ಯವನ್ನು ನೀಡುವಂತಾಗಬೇಕು. ನಮ್ಮ ಸಮುದಾಯ ಜನರ ಹಿತಕ್ಕಾಗಿ ಸಮಾಧಿಯ ಜಾಗ ಗುರ್ತಿಸಿಕೊಡಬೇಕು. ಸರಕಾರ ನಮ್ಮ ಸಮುದಾಯವನ್ನು ಗುರ್ತಿಸಿ ಹೆಚ್ಚು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಮುಂಬರಲು ಯೋಜನೆ ರೂಪಿಸಬೇಕು. ಅಲ್ಪಸಂಖ್ಯಾತರಿಗೆ ಹೆಚ್ಚಿನ ಒತ್ತು ನೀಡಿ ಅನುದಾನ ನೀಡುವಂತಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಸಕ ಎಲ್.ಎನ್.ನಾರಾಯಣಸ್ವಾಮಿ ಅವರನ್ನು ತಾಲೂಕು ಫಾಸ್ಟರ್ಸ್ ಫೆಲೋಶಿಪ್ ಐಕ್ಯತೆಯ ಕೂಟ ಮತ್ತು ಪೈತ್ ಬಾಪ್ಟೀಸ್ಟ್ ಚರ್ಚ್ ವತಿಯಿಂದ ಅಭಿನಂದಿಸಲಾಯಿತು.
ಈ ವೇಳೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಮುನೇಗೌಡ, ಮುಖಂಡರಾದ ಕಾಳಪ್ಪನವರ ವೆಂಕಟೇಶ್, ಜಿ.ಎ.ರವೀಂದ್ರ, ಕಾಮೇನಹಳ್ಳಿ ರಮೇಶ್, ಗೋಪಾಲ್, ಕಾರಹಳ್ಳಿ ಶ್ರೀನಿವಾಸ್, ಎನ್‌ಸಿಸಿ ರಾಜ್ಯ ಉಪಾಧ್ಯಕ್ಷ ರವೆಡೆಂಟ್ ರಾಜು.ಬಿ.ಪಿ, ಫಾಸ್ಟರ್ಸ್ ಫೆಲೋಶಿಪ್ ತಾಲೂಕು ಅಧ್ಯಕ್ಷ ರವೆಡೆಂಟ್ ನಾಗರಾಜು, ಪ್ರಧಾನ ಕಾರ್ಯದರ್ಶಿ ರಾಮಚಂದ್ರ.ಡಿ, ಖಜಾಂಚಿ ಪ್ರಭಾಕರ್, ಹಿರಿಯ ಸಲಹಾಗಾರ ರವೆಡೆಂಡ್ ಜೆ.ಡಿ.ಹೇನೋಷ್, ನಿರ್ದೇಶಕರು, ತಾಲೂಕು ಭೋದಕರು, ಇದ್ದರು.
Be the first to comment