ಪ್ರತಿಯೊಬ್ಬರಿಗೂ ಸರಕಾರದ ಸೌಲಭ್ಯ ಸಿಗಬೇಕು ; ಬಿಕೆಎಸ್ ಪ್ರತಿಷ್ಠಾನದ ವತಿಯಿಂದ ಗ್ರಾಮ ಮಟ್ಟದ ಜಾಗೃತಿ ಸಭೆ

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯ ಸಿಗಬೇಕಾದರೆ ಮೊದಲು ಸಂಘಟನೆಯನ್ನು ಬಲಿಷ್ಠಗೊಳಿಸಬೇಕು ಎಂದು ಬಿಕೆಎಸ್ ಪ್ರತಿಷ್ಠಾನದ ಅಧ್ಯಕ್ಷ ಬಿ.ಕೆ.ಶಿವಪ್ಪ ತಿಳಿಸಿದರು.ದೇವನಹಳ್ಳಿ ತಾಲೂಕಿನ ಕುಂದಾಣ ಗ್ರಾಮದಲ್ಲಿ ಬಿಕೆಎಸ್ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮ ಮಟ್ಟದ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಸರಕಾರದ ಹಂತದಲ್ಲಿ ಯಾವುದೇ ವ್ಯಕ್ತಿ ಸ್ವಾತಂತ್ರ್ಯವಾಗಿ ತಮಗೆ ಸಿಗಬೇಕದಾದ ಹಕ್ಕು ಸಿಗಬೇಕಾದರೆ, ಸಂಘಟನೆಯ ಗುರಿಯನ್ನು ಹೊಂದಿರಬೇಕು. ಸಂಘಟನೆಯಿಂದ ಏನೇ ಸಮಸ್ಯೆ ಇದ್ದರೂ ಬಗೆಹರಿಸಿಕೊಳ್ಳಲು ಸಹಕಾರಿಯಾಗುತ್ತದೆ. ಕೆಲವು ಬಲಾಢ್ಯರು ತಮಗೆ ಇಷ್ಟಬಂದ ಹಾಗೆ ಸರಕಾರಿ ಬೆಲೆಬಾಳುವ ಜಾಗಗಳನ್ನು ಲಪಟಾಯಿಸಿಕೊಂಡು ಸ್ಥಳೀಯರ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ನಮ್ಮ ಪೀಳಿಗೆ ಗುಲಾಮರಾಗಿ ಬದುಕುವುದು ಬೇಡ. ಸ್ಥಳೀಯರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳು ಸಿಗದಂತಾಗುತ್ತಿದ್ದೆ. ಕಾರ್ಮಿಕರ, ರೈತರ, ಮಹಿಳೆಯರ ಪರವಾಗಿ ಸಂಘಟನೆ ನಿಲ್ಲಬೇಕು. ಈಗಾಗಲೇ ಕುಂದಾಣ ಗ್ರಾಪಂಯಲ್ಲಿ ಘಟಕವನ್ನು ರಚಿಸಿದ್ದು, ಇದೀಗ ನೂತನ ಗ್ರಾಮ ಘಟಕವನ್ನು ರಚನೆ ಮಾಡಲಾಗುತ್ತಿದೆ. ಸಂಘಟನೆಯ ಮೂಲಕ ಸರಕಾರದ ಸೌಲಭ್ಯವನ್ನು ಪ್ರತಿ ನೊಂದವರಿಗೆ ತಲುಪಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಆಗಬೇಕೆಂಬ ಉದ್ದೇಶವನ್ನು ಹೊಂದಲಾಗಿದೆ. ನಮ್ಮ ಸಂಘಟನೆಯ ಶಾಲು ಹಸಿರು ಮತ್ತು ಬಿಳಿ ಬಣ್ಣವನ್ನು ಹೊಂದಿದೆ. ಹಸಿರು ಬಣ್ಣ ಸಮೃದ್ಧಿ ಸಂಕೇತವಾದರೆ, ಬಿಳಿ ಶಾಂತಿ ಸಂಕೇತವಾಗಿದೆ ಎಂದು ಹೇಳಿದರು.

CHETAN KENDULI

ಒಗ್ಗಟ್ಟೇ ಸಂಘಟನೆಯ ಶಕ್ತಿ: ಸಂಘಟನೆ ಬಲಿಷ್ಠವಾಗಬೇಕಾದರೆ ಸಂಘದ ಪ್ರತಿ ಸದಸ್ಯರು ಜಾತಿ-ಧರ್ಮ ಬೇಧಭಾವ ಬಿಟ್ಟು ಒಗ್ಗಟ್ಟಾಗಿ ಶ್ರಮಿಸಿದರೆ ಸಂಘಟನೆ ಶಕ್ತಿಯಾಗಿ ನಿಲ್ಲುತ್ತದೆ. ಸರಕಾರದ ಗೋಮಾಳ ಜಾಗಗಳನ್ನು ಉಳಿಸುವ ಕೆಲಸವನ್ನು ಸಂಘಟನೆ ಮಾಡಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ತರಬೇತಿ ಪಡೆದು ಸರಕಾರದ ಹಂತದಲ್ಲಿ ಏನೆಲ್ಲಾ ಸೌಲಭ್ಯಗಳಿವೆ ಎಂಬುವುದರ ಮಾಹಿತಿ ಪಡೆದುಕೊಂಡು ನೊಂದವರ ಪಾಲಿಗೆ ಬೆಳಕಾಗಬೇಕು. ಗ್ರಾಮ, ಹೋಬಳಿ, ತಾಲೂಕು, ಜಿಲ್ಲೆಯಲ್ಲಿ ಸಂಘಟನೆ ಮಾಡಲಾಗುತ್ತಿದೆ. ಹುಟ್ಟಿದ ಮೇಲೆ ಪ್ರತಿಯೊಬ್ಬರೂ ಒಂದಲ್ಲಾ ಒಂದು ದಿನ ಸಾಯಲೇಬೇಕು. ಸಾವಿನಲ್ಲಿಯೂ ಹೆಸರು ಚಿರಾಯುವಾಗಬೇಕಾದರೆ ಸಮಾಜಕ್ಕೆ ನಾವು ಕೊಡುವ ಕೊಡುಗೆಯಿಂದ ಮಾತ್ರ ಸಾಧ್ಯ ಎನ್ನುವುದನ್ನು ಅರಿಯಬೇಕಿದೆ. ಯುವಕರು ಸಂಘಟಿತರಾಗಿ ದಿನದ ಬಿಡುವ ಸಮಯದಲ್ಲಿ ಸಮಾಜ ಸೇವೆಗೆ ತಮ್ಮನ್ನು ಮುಡುಪಾಗಿಡಿ ಎಂದು ಸಲಹೆ ಮಾಡಿದರು.

ನೂತನ ಪದಾಧಿಕಾರಿಗಳಿಗೆ ಅಭಿನಂದನೆ: ಕುಂದಾಣ ಗ್ರಾಮ ಘಟಕದ ನೂತನ ಅಧ್ಯಕ್ಷರಾಗಿ ವಿಜಯಕುಮಾರ್, ಉಪಾಧ್ಯಕ್ಷರಾಗಿ ಚಾಂದ್‌ಪಾಶ, ಕಾರ್ಯದರ್ಶಿಯಾಗಿ ಶಿವಕುಮಾರ್, ಸಂಘಟನಾ ಕಾಯ್ದರ್ಶಿಯಾಗಿ ಮುರಳಿ ಅವರನ್ನು ನೇಮಕ ಮಾಡಲಾಯಿತು.
ಈ ವೇಳೆಯಲ್ಲಿ ಕೆಂಪೇಗೌಡ ಕನ್ನಡ ಸೇನೆ ರಾಜ್ಯಾಧ್ಯಕ್ಷ ಯೋಗೇಶ್ ಗೌಡ, ಮುಖಂಡರಾದ ಜಾಲಿಗೆ ವೆಂಕಟೇಶ್, ಬೈರದೇನಹಳ್ಳಿ ರವಿಕೆಂಪೇಗೌಡ್ರು, ಕುಂದಾಣದ ಗೋವಿಂದಸ್ವಾಮಿ, ಅಂಬರೀಷ್, ಪ್ರಕಾಶ್ ಇದ್ದರು.

Be the first to comment

Leave a Reply

Your email address will not be published.


*