ಜಿಲ್ಲಾ ಸುದ್ದಿಗಳು
ಭಟ್ಕಳ
ತಾಲೂಕಿನ ಮಾವಿನಕುರ್ವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಿಕಲ ಗ್ರಾಮಸ್ತರಿಂದ ತಹಸೀಲ್ದಾರ್ರಿಗೆ ಮನವಿ,ಮನವಿಯಲ್ಲಿ ಮಾವಿನಕುರ್ವೆ ಕರಿಕಲ್ ಗ್ರಾಮದಲ್ಲಿ ಶಿಗಡಿ ಕೃಷಿ ಮೀನುಗಾರಿಕೆ ಮಾಡಲು ಕೆಲವು ಜನರು ನಿರ್ಧರಿಸಿದ್ದು, ಇದು ಓರಿನ ಜನರ ಗಮನಕ್ಕೆ ಬಂದಿರುತ್ತದೆ. ಈಗಾಗಲೇ ಕರಿಕಲನ ಹಲವಾರು ಬೇರೆ ಬೇರೆ ಜಾಗದಲ್ಲಿ 50 ಮೀಟರ್ ಆಳದವರೆಗೆ ಅಕ್ರಮ ಮರಳುಗಾರಿಕೆ ದಂಧೆಯನ್ನು ಕೂಡ ನಡೆಸಲಾಗಿದೆ. ಈ ಒಂದು ಗ್ರಾಮಕ್ಕೆ ಕರಿಕಲ್ ಗ್ರಾಮದ ಎಲ್ಲಾ ಸಾರ್ವಜನಿಕರಿಂದ ವಿರೋಧ ಕೂಡಾ ವ್ಯಕ್ತವಾಗಿದೆ. ಅಲ್ಲದೆ ಪ್ರಮುಖವಾಗಿ ಈ ಜಾಗದಲ್ಲಿ ಅಂದರೆ 100 ಮೀಟರ್ ಒಳಗಡೆ 2 ನಾಗಜಟಗೇಶ್ವರ ದೇವಸ್ಥಾನ ಹಾಗೂ ಭವ್ಯವಾದ ಶ್ರೀರಾಮ ಮಂದಿರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಹಲವಾರು ಮನೆಗಳು ಜೊತೆಗೆ ಪಾತಿದೋಣಿ ಮೀನುಗಾರರ ಸ್ಥಳವು ಇದೇ ವ್ಯಾಪ್ತಿಯಲ್ಲಿ ಬರುವುದರಿಂದ ತೀವ್ರವಾದ ವಿರೋಧ ಕರಿಕಲ್ ಗ್ರಾಮಸ್ಥರಿಂದ ವ್ಯಕ್ತವಾಗಿದೆ. ಈ ಒಂದು ಶಿಗಡಿ ಕೃಷಿ ಮೀನುಗಾರಿಕೆ ಮಾಡುವುದರಿಂದ ಇವರು ಸಮುದ್ರದ ನೀರನ್ನು ಉಪಯೋಗಿಸಿದ ನಂತರ ಇದರ ಕೊಳಚೆ ಮತ್ತು ವಿಷಪೂರಿತ ನೀರನ್ನು ಸಹ ಸಮುದ್ರಕ್ಕೆ ಬಿಡುವ ಕಾರ್ಯ ನಡೆಸಲಾಗುತ್ತದೆ. ಹೀಗೆ ಸಮುದ್ರಕ್ಕೆ ವಿಷಪೂರಿತ ನೀರನ್ನು ಬಿಡುವುದರಿಂದ ಬೆಳವಣೆಗೆ ಆಗುವ ಮೀನಿನ ಸಂತತಿ ಅವನತಿ ಹೊಂದುವುದರ ಜೊತೆಗೆ ಕಡಲಕಿನಾರೆ ಮೀನುಗಾರರಿಗ ಭಟ್ಕಳ : ತಾಲೂಕಿನ ಮಾವಿನಕುರ್ವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಿಕಲ್ ಗ್ರಾಮದ ಕಡಲಕಿನಾರೆಯ ಜಾಗದಲ್ಲಿ ಶಿಗಡಿ ಕೃಷಿ ಮೀನುಗಾರಿಕೆ ಮಾಡುವುದನ್ನು ನಿಷೇಧಿಸುವ ಕುರಿತು ಸಹಾಯಕ ಆಯುಕ್ತರನ್ನೊಳಗೊಂಡಂತೆ, ತಹಸೀಲ್ದಾರ್ರು, ತಾಲೂಕಿನ ವಿವಿಧ ಇಲಾಕಾ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಮನವಿಯಲ್ಲಿ ಮಾವಿನಕುರ್ವೆ ಕರಿಕಲ್ ಗ್ರಾಮದಲ್ಲಿ ಶಿಗಡಿ ಕೃಷಿ ಮೀನುಗಾರಿಕೆ ಮಾಡಲು ಕೆಲವು ಜನರು ನಿರ್ಧರಿಸಿದ್ದು, ಇದು ಓರಿನ ಜನರ ಗಮನಕ್ಕೆ ಬಂದಿರುತ್ತದೆ. ಈಗಾಗಲೇ ಕರಿಕಲನ ಹಲವಾರು ಬೇರೆ ಬೇರೆ ಜಾಗದಲ್ಲಿ 50 ಮೀಟರ್ ಆಳದವರೆಗೆ ಅಕ್ರಮ ಮರಳುಗಾರಿಕೆ ದಂಧೆಯನ್ನು ಕೂಡ ನಡೆಸಲಾಗಿದೆ. ಈ ಒಂದು ಗ್ರಾಮಕ್ಕೆ ಕರಿಕಲ್ ಗ್ರಾಮದ ಎಲ್ಲಾ ಸಾರ್ವಜನಿಕರಿಂದ ವಿರೋಧ ಕೂಡಾ ವ್ಯಕ್ತವಾಗಿದೆ. ಅಲ್ಲದೆ ಪ್ರಮುಖವಾಗಿ ಈ ಜಾಗದಲ್ಲಿ ಅಂದರೆ 100 ಮೀಟರ್ ಒಳಗಡೆ 2 ನಾಗಜಟಗೇಶ್ವರ ದೇವಸ್ಥಾನ ಹಾಗೂ ಭವ್ಯವಾದ ಶ್ರೀರಾಮ ಮಂದಿರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಹಲವಾರು ಮನೆಗಳು ಜೊತೆಗೆ ಪಾತಿದೋಣಿ ಮೀನುಗಾರರ ಸ್ಥಳವು ಇದೇ ವ್ಯಾಪ್ತಿಯಲ್ಲಿ ಬರುವುದರಿಂದ ತೀವ್ರವಾದ ವಿರೋಧ ಕರಿಕಲ್ ಗ್ರಾಮಸ್ಥರಿಂದ ವ್ಯಕ್ತವಾಗಿದೆ. ಈ ಒಂದು ಶಿಗಡಿ ಕೃಷಿ ಮೀನುಗಾರಿಕೆ ಮಾಡುವುದರಿಂದ ಇವರು ಸಮುದ್ರದ ನೀರನ್ನು ಉಪಯೋಗಿಸಿದ ನಂತರ ಇದರ ಕೊಳಚೆ ಮತ್ತು ವಿಷಪೂರಿತ ನೀರನ್ನು ಸಹ ಸಮುದ್ರಕ್ಕೆ ಬಿಡುವ ಕಾರ್ಯ ನಡೆಸಲಾಗುತ್ತದೆ. ಹೀಗೆ ಸಮುದ್ರಕ್ಕೆ ವಿಷಪೂರಿತ ನೀರನ್ನು ಬಿಡುವುದರಿಂದ ಬೆಳವಣೆಗೆ ಆಗುವ ಮೀನಿನ ಸಂತತಿ ಅವನತಿ ಹೊಂದುವುದರ ಜೊತೆಗೆ ಕಡಲಕಿನಾರೆ ಮೀನುಗಾರರಿಗೆ ಅಂದರೆ ಸಾಂಪ್ರದಾಯಿಕ ಮೀನುಗಾರಿಕೆ ಪಾತಿದೋಣಿ ನಡೆಸುವ ಜನರ ಜೀವನಕ್ಕೆ ಬಹಳ ತೊಂದರೆ ಆಗುತ್ತದೆ. ಹಾಗಯೇ ಅಲ್ಲಿಯೇ ಇದ್ದ ಕೆಲವು ಮನೆಗಳಿಗೆ ಕೆಟ್ಟ ವಾಸನೆಯ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ಈಗಾಗಲೇ ಇದ್ದು, ಇದು ಇನ್ನಷ್ಷು ತೀವ್ರವಾಗುವ ಸಂಭವ ಕೂಡಾ ಎದುರಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಕರಿಕಲನ ಯಾವುದೇ ಒಂದು ಭಾಗದಲ್ಲಿ ಈ ಒಂದು ಸಗಡಿ ಕೃಷಿ ಮೀನುಗಾರಿಕೆ ಮಾಡುವ ಕೆಲಸಕ್ಕೆ ತಾವುಗಳು ಯಾರಿಗೂ ಕೂಡಾ ಊರ ಸಾರ್ವಜನಿಕರ ಅನುಮತಿ ಇಲ್ಲದೆ ಅನುವುಮಾಡಿ ಕೊಡಬಾರದು ಎಂದು ಮನವಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಾವಿನಕುರ್ವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅನೇಕ ಸಾರ್ವಜನಿಕರು ಉಪಸ್ಥಿತರಿದ್ದರು.ಈಗಾಗಲೇ ಇದ್ದು, ಇದು ಇನ್ನಷ್ಷು ತೀವ್ರವಾಗುವ ಸಂಭವ ಕೂಡಾ ಎದುರಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಕರಿಕಲನ ಯಾವುದೇ ಒಂದು ಭಾಗದಲ್ಲಿ ಈ ಒಂದು ಸಗಡಿ ಕೃಷಿ ಮೀನುಗಾರಿಕೆ ಮಾಡುವ ಕೆಲಸಕ್ಕೆ ತಾವುಗಳು ಯಾರಿಗೂ ಕೂಡಾ ಊರ ಸಾರ್ವಜನಿಕರ ಅನುಮತಿ ಇಲ್ಲದೆ ಅನುವುಮಾಡಿ ಕೊಡಬಾರದು ಎಂದು ಮನವಿಯನ್ನು ನೀಡಿದರು.ಈ ಸಂದರ್ಭದಲ್ಲಿ ಮಾವಿನಕುರ್ವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅನೇಕ ಸಾರ್ವಜನಿಕರು ಉಪಸ್ಥಿತರಿದ್ದರು.
Be the first to comment