ಜಿಲ್ಲಾ ಸುದ್ದಿಗಳು
ಭಟ್ಕಳ
ಪುರಸಭೆಯಲ್ಲಿ ಹರಾಜಿಗೆ ಕರೆದಿರುವ 21 ಅಂಗಡಿಗಳನ್ನು ಮುಂದಿನ ಅವಧಿಗೆ ನಮಗೆ ನವೀಕರಿಸುವುದರ ಕುರಿತು 21 ಹಳೆ ಅಂಗಡಿಕಾರರು ಸಹಾಯಕ ಆಯುಕ್ತರಿಗೆ ಗುರುವಾರದಂದು ಮನವಿ ಸಲ್ಲಿಸಿದ್ದಾರೆ.-ಪುರಸಭೆಯಿಂದ ಅಕ್ಟೋಬರ್ 25 ರಂದು ಅಂಗಡಿಕಾರರು ಈಗ ನಡೆಸುತ್ತಿರುವ ಅಂಗಡಿಗಳ ಮರು ಹರಾಜು ಪ್ರಕ್ರಿಯೆ ನಿಗದಿಯಾಗಿದ್ದು, ಈ ಹರಾಜು ಪ್ರಕ್ರಿಯೆಯಿಂದ ನಮಗೆ ತೀರಾ ಅನ್ಯಾಯವಾಗಿದೆ. ಅಂಗಡಿಕಾರರಾದ ನಾವು ಕೆಲ ವರ್ಷಗಳಿಂದ ಜೀವನೋಪಾಯಕ್ಕಾಗಿ ಪುರಸಭೆ ಅಂಗಡಿಗಳನ್ನು ನಂಬಿಕೊಂಡಿರುತ್ತೇವೆ. ದಿನನಿತ್ಯದ ಜೀವನ, ಮಕ್ಕಳ ವಿದ್ಯಾಭ್ಯಾಸ ಹೀಗೆ ಎಲ್ಲವೂ ತಮ್ಮ ಬಾಡಿಗೆ ಅಂಗಡಿಗಳಲ್ಲಿ ಆದ ವ್ಯಾಪಾರದಿಂದಲೇ ನಡೆಯಬೇಕಿದೆ. ನಮಗೆ ಅಂಗಡಿ ವ್ಯಾಪಾರ ಬಿಟ್ಟು ಬೇರೆ ಯಾವುದೇ ವ್ಯಾಪಾರ ಗೊತ್ತಿಲ್ಲ. ಬಹುತೇಕರು ಮಧ್ಯ ವಯಸ್ಕರರಿದ್ದು, ಈ ಅಂಗಡಿಗಳನ್ನು ಹರಾಜು ಮಾಡಿ ಬೇರೆಯವರಿಗೆ ನೀಡಿದರೆ ನಾವು ಯಾವ ಉದ್ಯೋಗ ಮಾಡಬೇಕು ಎನ್ನುವುದು ಪ್ರಶ್ನೆಯಾಗಿದೆ. ಅಲ್ಲದೇ ಅಂಗಡಿಗಳಲ್ಲಿ ಲಕ್ಷಾಂತರ ರೂ. ಸಾಮಗ್ರಿಗಳಿದ್ದು ಬ್ಯಾಂಕ್, ಸಹಕಾರಿ ಸಂಘ, ಕೈ ಸಾಲ ಮಾಡಿ ನಾವು ಇದನ್ನು ಖರೀದಿಸಿದ್ದೇವೆ. ಈಗಾಗಲೇ ಕೊಬ್ಬಿನಿಂದಾಗಿ ವ್ಯಾಪಾರ ವಹಿವಾಟು ಸುಧಾರಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹರಾಜು ಪ್ರಕ್ರಿಯೆ ಮಾಡುತ್ತಿರುವುದು ನಮ್ಮ ಜೀವನದ ಮೇಲೆ ಬರೆ ಎಳೆದಂತಾಗುತ್ತದೆ. ಅಕ್ಟೋಬರ್ 25ರಂದು ನಡೆಸಲು ಉದ್ದೇಶಿಸಿರುವ ಹರಾಜು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಮಾನವೀಯ ಮತ್ತು ನಮ್ಮೆಲ್ಲರ ಜೀವನೋಪಾಯದ ನೆಲೆಯಲ್ಲಿ ಈ ಅಂಗಡಿಗಳನ್ನು ನಮಗೆ ಮುಂದಿನ ಅವಧಿಗೆ ನವೀಕರಣಗೊಳಿಸಬೇಕೆಂದು ಮನವಿ ಉಲ್ಲೇಖಿಸಿದ್ದಾರೆ.
ಈ ಸಂಧರ್ಭದಲ್ಲಿ ಹಳೆ ಅಂಗಡಿಕಾರರಾದ ರಾಮನಾಥ ಬಳೆಗಾರ, ಸಂದೀಪ್ ಶೇಟ್, ಮ್ರತ್ಯುಂಜಯ ಆಚಾರ್ಯ,ದಿನೇಶ ಶೇಟ್, ಮಂಜುನಾಥ ನಾಯ್ಕ, ರಾಜು ದೇವಾಡಿಗ, ನಾರಾಯಣ ಮಹಾಲೆ, ಮುನಾವರ್, ನಜೀರ್ ಅಹಮದ್ ಶೇಕ್, ಕ್ರಷ್ಣಾನಂದ ಸಾಣಿಕಟ್ಟೆ ಇನ್ಮುಳಿದ 21 ಅಂಗಡಿಕಾರರು ಇದ್ದರು.
Be the first to comment