ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಮಾಹಿತಿ ಹಕ್ಕು ಅಧಿನಿಯಮ ಅಡಿಯಲ್ಲಿ ನಿಗಧಿತ ಅವಧಿಯ ಒಳಗಾಗಿ ಮಾಹಿತಿ ನೀಡದ ಕಾರಣ ಇಲ್ಲಿನ ನಿರ್ಗಮಿತ ಬಿಇಓ ಎಸ್.ಇ.ಗಾಂಜಿ ಅವರಿಗೆ ಸತತ ನಾಲ್ಕನೇ ಬಾರಿ ದಂಡ ವಿಧಿಸಿದ ಬೆಳಗಾವಿ ಪೀಠದ ಆಯೋಗ ಅರ್ಜಿದಾರರಿಗೆ 1000 ರೂ ಗಳ ಪರಿಹಾರ ನೀಡಬೇಕೆಂದು ಪ್ರಕರಣ ಸಂಖ್ಯೆ ಕಮಾಅ 8613 ಎಪಿಎಲ್ 2020 ಪ್ರಕರಣದಲ್ಲಿ ಆದೇಶಿಸಿದೆ. ಅಲ್ಲದೇ ವಿಜಯಪುರ ಜಿಲ್ಲೆಯ ಡಿಡಿಪಿಐ ಕಛೇರಿಯ ಮಾಹಿತಿ ಅಧಿಕಾರಿ ಬಿ.ಜಿ ದಾಸರ ಗೂ ಕೂಡ ಸತತ ಎರಡನೇ ಬಾರಿ ಕ.ಮಾ.ಅ 6197 ಎಪಿಎಲ್ 2020 ರಲ್ಲಿ 10000 ರೂ. ಗಳ ದಂಡ ವಿಧಿಸಿದೆ.
ತಾಲೂಕಿನ ಢವಳಗಿ ಗ್ರಾಮದ ಅನುದಾನಿತ ಶ್ರೀ ಬಸವ ಬಾಲ ಭಾರತಿ ಪ್ರಾಥಮಿಕ ಶಾಲೆಗೆ ಸಂಬAಧಿಸಿದ ಕೆಲವು ದಾಖಲೆಗಳನ್ನು ಮಾಹಿತಿ ಹಕ್ಕು ಅಧಿನಿಯಮದ ಅಡಿ ಮಾಹಿತಿ ಕೋರಿ ಸನ್2019 ರಲ್ಲಿ ಅರ್ಜಿ ಸಲ್ಲಿಸಲಾಗಿತ್ತು, ನಿಗಧಿತ ಅವಧಿಯ ಒಳಗೆ ಮಾಹಿತಿ ನೀಡದ ಕಾರಣ ಆಯೋಗಕ್ಕೆ ದೂರು ನೀಡಿದ ಹಿನ್ನೆಲೆ ಪ್ರಕರಣಗಳ ವಿಚಾರಣೆ ನಡೆಸಿದ ಆಯೋಗವು ಕೋರಲಾದ ದಾಖಲೆಗಳನ್ನು ಕೊಡಿಸಿ ದಂಡ ವಿಧಿಸಿದೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಅರ್ಜಿದಾರ ಚೇತನ ಶಿವಶಿಂಪಿ, ಒಂದೇ ಶಾಲೆಗೆ ಸಂಬಂಧಿಸಿದ ದಾಖಲೆಗಳನ್ನು ಬಿಇಓ ಹಾಗೂ ಡಿಡಿಪಿಐ ಕಛೇರಿಗೆ ಮಾಹಿತಿ ಕೋರಿದ್ದೆ. ಇಷ್ಟು ದಿನಗಳ ನಂತರ ದಾಖಲೆ ನೀಡುವ ಬದಲು ಕಾನೂನಿನ ಪ್ರಕಾರ ನಿಗಧಿತ ಅವಧಿಯ ಒಳಗೆ ಮಾಹಿತಿ ನೀಡಿದ್ದರೆ ಶಾಲೆ ಅನುದಾನಗೊಳ್ಳುತ್ತಿರಲಿಲ್ಲ. ಮುದ್ದಾಂ ಆಗಿ ನಮಗೆ ಅನ್ಯಾಯ ಮಾಡುವ ಉದ್ದೇಶದಿಂದಲೇ ಆ ಅವಧಿಯಲ್ಲಿನ ಬಿಇಓ ಎಸ್.ಡಿ.ಗಾಂಜಿ ಅವರು ಮತ್ತೀತರ ಅಧಿಕಾರಿಗಳು ನಮಗೆ ಮಾಹಿತಿ ನೀಡಿಲ್ಲ. ಅಲ್ಲದೇ ಈಗ ನೀಡಿದ ದಾಖಲೆಗಳೂ ಕೂಡ ಖೊಟ್ಟಿ ಯಾಗಿದ್ದು ತನಿಖೆಗಾಗಿ ಹೈಕೋರ್ಟ ಮೊರೆ ಹೋಗುತ್ತೇನೆ. ಒಟ್ಟಾರೆಯಾಗಿ ಮುಚ್ಚಲ್ಪಟ್ಟ ಶಾಲೆಗೆ ನೀಡಿದ ಅನುದಾನವನ್ನು ರದ್ದುಗೊಳಿಸಿ, ವಂಚಕರಿಗೆ ಕಾನೂನು ಶಿಕ್ಷೆ ವಿಧಿಸುವವರೆಗೂ ನನ್ನ ಹೊರಾಟ ನಿಲ್ಲಲ್ಲ ಎಂದಿದ್ದಾರೆ.
Be the first to comment