ರೈತರ ಜಮೀನಿನಲ್ಲಿದ್ದ ನೀರು, ಮಣ್ಣು ಪರೀಕ್ಷಾ ಕೇಂದ್ರಕ್ಕೆ ಚಾಲನೆ

ವರದಿ-ಸ್ಪೂರ್ತಿ ಎನ್ ಶೇಟ್

ಜಿಲ್ಲಾ ಸುದ್ದಿ 

CHETAN KENDULI

ಕುಮಟಾ : ಪಟ್ಟಣದ ಮೂರೂರು ರಸ್ತೆಯಲ್ಲಿ ನೂತನವಾಗಿ ಆರಂಭವಾದ ಸರಸ್ವತಿ ಮಣ್ಣು ಹಾಗೂ ನೀರು ಪರೀಕ್ಷಾ ಕೇಂದ್ರವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು . ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ಶಾಪುರ ಮಠದ ಕೃಷಿ ಅಧಿಕಾರಿ, ಕೃಷಿ ಅಧಿಕಾರಿ ಅಕ್ರಂ ಆಲಕಟ್ಟಿ , ಮುಖಂಡರಾದ ಪ್ರಶಾಂತ್ ನಾಯಕ್ ಹೇಮಂತ್ ಗಾoವಕರ್ ವಿಶ್ವನಾಥ್ ನಾಯ್ಕ ಹಾಜರಿದ್ದರು.

ರೈತರು ತಮ್ಮ ತೋಟದ ಅಥವಾ ಗದ್ದೆಯ ಮಣ್ಣನ್ನು ಪರೀಕ್ಷೆ ಮಾಡಿಸುವುದರಿಂದ ಹೆಚ್ಚಿನ ಬೆಳೆಯನ್ನು ಬೆಳೆಯಲು ಹಾಗೂ ಮಣ್ಣಿನ ಫಲವತ್ತತೆಯನ್ನು ತಿಳಿಯಲು ಸಹಾಯಕಾರಿಯಾಗಲಿದೆ .

ತೋಟದ ಅಥವಾ ಗದ್ದೆಯ ಮಣ್ಣನ್ನು ಹಾಗೂ ಬಾವಿ ಅಥವಾ ನೀರಿನ ಪರೀಕ್ಷೆಯನ್ನು ಈ ಕೇಂದ್ರದಲ್ಲಿ ಮಾಡಲಾಗುತ್ತಿದ್ದು. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಕೇಂದ್ರದ ಮೂಲಕ ಅಣ್ಣಪ್ಪ ನಾಯ್ಕ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*