ಜಿಲ್ಲಾ ಸುದ್ದಿಗಳು
ಮಸ್ಕಿ
ಶುದ್ದ ಕುಡಿಯುವ ನೀರಿನ ಘಟಕ ಕಳಪೆ ಕಾಮಗಾರಿಯಿಂದ ಕೂಡಿದ್ದು, ತನಿಖೆ ಕೈಗೊಂಡು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಇಲ್ಲಿನ ಗಾಂಧಿನಗರದ 20 ನೇ ವಾರ್ಡಿನ ನಿವಾಸಿಗಳು ಬೆಳಿಗ್ಗೆ ಕೆಲ ಕಾಲ ಪ್ರತಿಭಟನೆ ನಡೆಸಿ ಅಧಿಕಾರಿ, ಗುತ್ತಿಗೆದಾರರ ವಿರುದ್ಧ ಅಕ್ರೋಶ ಹೊರ ಹಾಕಿದರು ಬಳಿಕ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಮಾಹಾದೇವಿ ಶ್ರೀನಿವಾಸ್ ಅವರು ಮಸ್ಕಿಯ ಗಾಂಧೀ ನಗರದ 20ನೇ ವಾರ್ಡನ ಕುಡಿಯುವ ನೀರಿನ ಆರ್.ಓ ಪ್ಲಾಂಟ್ ನಿರ್ಮಾಣ 19-20ನೇ ಸಾಲಿನಲ್ಲಿನ ಅಂದಾಜು 20 ಲಕ್ಷ ರೂ.ಗಳ ಯೋಜನೆ ಕಾಮಗಾರಿಯೂ ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದ್ದು, ಕಾಮಗಾರಿ ಮುಗಿದು 3 ವರ್ಷಗಳು ಕಳೆದರೂ ಪ್ಲಾಂಟ್ ಆರಂಭಿಸುವ (ಉದ್ಘಾಟನೆ) ಬಗ್ಗೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸಂಪೂರ್ಣ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಪ್ಲಾಂಟ್ ಪ್ರಾರಂಭಿಸದೇ ಇರುವುದರಿಂದ ವಾರ್ಡಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಕಲುಷಿತ ನೀರನ್ನು ಕುಡಿದು ವಾರ್ಡಿನ ನಿವಾಸಿಗಳು ಅನಾರೋಗ್ಯದಿಂದ ಆಸ್ಪತ್ರೆಗೆ ಅಳೆದಾಡುವಂತಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಮಾಹಾದೇವಿ ಶ್ರೀನಿವಾಸ್ ಅವರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಾತನಾಡಿದ 20ನೇ ವಾರ್ಡಿನ ನೂತನ ಪುರಸಭೆ ಸದಸ್ಯರಾದ ಅಸ್ಮಾ ರವರು ಆರ್ ಓ ಪ್ಲಾಂಟ್ ಆರಂಭಿಸಲು ಅಧಿಕಾರಿಗಳು, ಮತ್ತು ಗುತ್ತಿಗೆದಾರರು ಕಾಲಹರಣ ಮಾಡುತ್ತಿರುವುದರ ಜತೆಗೆ ಕಾಮಗಾರಿಯನ್ನು ಕಳಪೆ ಗುಣಮಟ್ಟದಿಂದ ನಿರ್ವಹಣೆ ಮಾಡಿದ್ದು, ಮೇಲಾಧಿಕಾರಿಗಳು ಆರ್. ಓ ಪ್ಲಾಂಟ್ ಕಾಮಗಾರಿಯ ಗುಣಮಟ್ಟವನ್ನು ತನಿಖೆ ನಡೆಸಿ, ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರ ಪರವಾನಿಗೆಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಮತ್ತು ಗಾಂಧಿನಗರ 20ನೇ ವಾರ್ಡಿನ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರನ್ನು ಕುಡಿಯಲು ಒದಗಿಸುವಂತೆ ಪುರಸಭೆ ಅಧಿಕಾರಿಗೆ ಹಾಗೂ ಆರ್ ಡಬ್ಲೂ, ಎಸ್ ಎಸ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಅವರಿಗೆ ತಾಕೀತು ಮಾಡಿದರು. ನಂತರ ಮಾತನಾಡುತ್ತಾ ಇಲಾಖೆಯ ಅಧಿಕಾರಿಗಳು ಶುದ್ಧಕುಡಿಯುವ ನೀರಿನ ಆರ್ ಓ ಪ್ಲಾಂಟ್‌ನ್ನು ಆರಂಭಿಸದೇ ಮೂರು ವರ್ಷಗಳಿಂದ ಪಾಳು ಬಿದ್ದಿರುವದರಿಂದ ವಾರ್ಡಿನ ನಿವಾಸಿಗಳಿಗೆ ತೊಂದರೆಯಾಗಿದೆ ಅಧಿಕಾರಿಗಳು ಕೂಡಲೇ ಪುನರಾರಂಭಿಸಲು ಕ್ರಮ ಕೈಗೊಳ್ಳದೇಕೆಂದು ಕರವೇ ನಾರಾಯಣ ಗೌಡ ಬಣದ ತಾಲೂಕ ಅಧ್ಯಕ್ಷ ದುರುಗರಾಜ್ ವಟಗಲ್ ಆಗ್ರಹಿಸಿದರು.
ನಂತರ ನಿವಾಸಿಗಳು ಸೇರಿದಂತೆ ಪ್ರಗತಿಪರರು ಸೇರಿಕೊಂಡು ಶುದ್ದ ಕುಡಿಯುವ ನೀರಿನ ಘಟಕ ಆರಂಭಿಸಬೇಕೆಂದು ಒತ್ತಾಯಿಸಿ. ಲಿಂಗಸ್ಗೂರಿನ ಆರ್ ಡಬ್ಲೂ, ಎಸ್ ಎಸ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ತ್ರಿವೇಣಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ನೂತನ ಪುರಸಭೆ ಸದಸ್ಯರಾದ ಅಸ್ಮ ನೂರ್ ಮಹಮ್ಮದ್ , ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಮಹಾದೇವಿ ಶ್ರೀನಿವಾಸ್, ಕರವೇ ಅಧ್ಯಕ್ಷ ದುರುಗರಾಜ್ ವಟಗಲ್. ಕರವೇ ತಾಲೂಕ ಉಪಾಧ್ಯಕ್ಷ ನೂರ್ ಮಹಮ್ಮದ್ ಸೇರಿದಂತೆ 20 ನೇ ವಾರ್ಡಿನ ನಿವಾಸಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Be the first to comment