ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತೀರ್ಥಭಾವಿ ಗ್ರಾಮದ ನೂತನ ಘಟಕ ಸ್ಥಾಪನೆ..!!!

ವರದಿ: ಗ್ಯಾನಪ್ಪ ದೊಡ್ಡಮನಿ, ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ:

CHETAN KENDULI

ತೀರ್ಥಭಾವಿ ನೂತನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕವು ಮಸ್ಕಿ ತಾಲೂಕ ಅಧ್ಯಕ್ಷರು ತಾಯಪ್ಪ ಅವರ ನೇತೃತ್ವದಲ್ಲಿ ಜರುಗಿತು ಈ ಕಾರ್ಯಕ್ರಮಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ, ಮಸ್ಕಿ ತಾಲೂಕ ಗೌರವಾಧ್ಯಕ್ಷರು ತಿಮ್ಮಣ್ಣ ಸಾಹುಕಾರ, ಹನುಮಪ್ಪ ತಾಲೂಕ ಉಪಾಧ್ಯಕ್ಷರು ಹಿರೇ ಕಡಬೂರು ಸೇರಿದಂತೆ ಹಲವಾರು ರೈತ ಮುಖಂಡರು ಈ ನೂತನ ಗ್ರಾಮ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೆರಗು ತಂದರು.

ತೀರ್ಥಭಾವಿ ನೂತನ ಗ್ರಾಮ ಘಟಕದ ಪದಾಧಿಕಾರಿಗಳಾಗಿ ಗ್ರಾಮ ಘಟಕದ ಅಧ್ಯಕ್ಷರಾಗಿ ಬಸವಣ್ಣ ಪೊಲೀಸ್ ಪಾಟೀಲ್, ಗ್ರಾಮ ಘಟಕ ಉಪಾಧ್ಯಕ್ಷರಾಗಿ,ಸಣ್ಣ ಹನುಮಂತ ಉಪ್ಪಲದೊಡ್ಡಿ ಕರ್ನಾಟಕ ರಾಜ್ಯ ರೈತ ಸಂಘಕ್ಕೆ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.

ರೈತ ಸಂಘಟನೆ ನಾಮಫಲಕವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕಾಧ್ಯಕ್ಷ ತಾಯಪ್ಪ ಅವರು ರಾಜ್ಯದಲ್ಲಿ ರೈತರ ಜ್ವಲಂತ ಸಮಸ್ಯೆಗಳನ್ನು ಹೋರಾಟದ ಮೂಲಕ ಬಗೆಹರಿಸಬೇಕಾದ ಅನಿವಾರ್ಯತೆ ಆದ್ದರಿಂದ ರೈತರು ಸಂಘಟಿತರಾಗಿ ಪ್ರತಿ ಗ್ರಾಮಗಳಲ್ಲಿ ಗ್ರಾಮ ಘಟಕಗಳನ್ನು ಮಾಡಿ ರೈತರ ಜನರ ಸಮಸ್ಯೆಗಳಿಗೆ ಪರಿಹಾರ ತೆಗೆದುಕೊಳ್ಳಬೇಕಾಗಿದೆ. ಆಳುವ ಸರ್ಕಾರಗಳು ಯೋಜನೆಗಳನ್ನು ರೈತ ವಿರೋಧಿ ಕಾನೂನುಗಳನ್ನು ಈ ಫ್ಯಾಸಿಸ್ಟ್ ಸರ್ಕಾರಗಳು ಮಾಡುತ್ತಿವೆ ಭೂ ಸುಧಾರಣೆ ಕಾಯ್ದೆ ಸೇರಿದಂತೆ ಮೂರು ರೈತ ವಿರೋಧಿ ಮರಣ ಶಾಸನಗಳನ್ನು ಜಾರಿಗೆ ತಂದಿದ್ದ ಕೇಂದ್ರ ಸರ್ಕಾರ ದೆಹಲಿ ರೈತರ ಸುದೀರ್ಘ ಹೋರಾಟದ ಬಳಿಕ ಇದುವರೆಗು ರೈತ ವಿರೋಧಿ ಮೂರು ಮರಣ ಶಾಸನಗಳನ್ನು ವಾಪಸ್ ಪಡೆದುಕೊಳ್ಳಲು ಸರ್ಕಾರ ಮೀನಾಮೇಷ ನಡೆಸುತ್ತಿದೆ ಆದ್ದರಿಂದ ರೈತರು ಸ್ವಯಂಪ್ರೇರಿತವಾಗಿ ಸಂಘಟಿತರಾಗಿ ರಾಜ್ಯ ಮತ್ತು ದೇಶದಲ್ಲಿ ರೈತರ ಆತ್ಮಹತ್ಯೆ ತಡೆಯಲು ಹಾಗೂ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನಿವಾರ್ಯವಾಗಿ ಸಂಘಟಿತರಾಗಬೇಕಾಗಿದೆ ಎಂದು ರೈತರನ್ನು ಉದ್ದೇಶಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ತೀರ್ಥಭಾವಿ ಗ್ರಾಮ ಘಟಕದ ಪದಾಧಿಕಾರಿಗಳು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Be the first to comment

Leave a Reply

Your email address will not be published.


*