ತಿಗಳ ಜನಾಂಗ ಶೈಕ್ಷಣಿಕವಾಗಿ ಮುಂದೆ ಬರಬೇಕು ಸಿ.ಜಯರಾಜ್

ವರದಿ ಗುರುಮೂರ್ತಿ ಬೂದಿಗೆರೆ

ಜಿಲ್ಲಾ ಸುದ್ದಿಗಳು 

ದೇವನಹಳ್ಳಿ

ವ್ಯವಸಾಯವನ್ನೆ ನಂಬಿ ಜೀವನ ಸಾಗಿಸುವ ತಿಗಳ ಜನಾಂಗ ತೀವ್ರ ಸಂಕಷ್ಠದಲ್ಲಿದೆ, ವಹ್ನಿಕುಲ ತಿಗಳ ಜನಾಂಗ ಮುಖ್ಯವಾಹಿನಿಗೆ ಬರಬೇಕು, ನಮ್ಮ ಜನಾಂಗದವರು ಒಬ್ಬರ ಕಾಲು ಒಬ್ಬರು ಎಳೆಯುವುದನ್ನು ಬಿಟ್ಟು ಒಗ್ಗಟ್ಟಾಗಿ ಜನಾಂಗದ ಸಂಘಟನೆಗೆ ಸಹಕರಿಸಿದರೆ ನಾವು ಯಾವುದೇ ರೀತಿಯ ಸ್ಥಾನಮಾನಗಳಿಗೆ ವಂಚಿತರಾಗುವುದಿಲ್ಲ ಎಂದು ವಹ್ನಿಕುಲ ಕ್ಷತ್ರಿಯ ತಿಗಳರ ಸಂಘದ ರಾಜ್ಯಾಧ್ಯಕ್ಷ ಸಿ.ಜಯರಾಜ್ ತಿಳಿಸಿದರು.ಅವರು ಪಟ್ಟಣದ ಮೌಕ್ತಿಕಾಂಬ ದೇವಾಲಯದಲ್ಲಿ ತಾಲೂಕು ತಿಗಳರ ಸಂಘ ಆಯೋಜಿಸಿದ್ದ ತಿಗಳ ಜನಾಂಗದ ಜನಪ್ರತಿನಿಧಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ ನಮ್ಮ ಸಮುದಾಯದ ಜನರು ಅನೇಕ ವರ್ಷಗಳಿಂದ ರಾಜ್ಯದ ಜನರ ಶ್ರೇಯೋಭಿವೃದ್ಧಿಗೆ ಕರಗ ಮಹೋತ್ಸವ ನಡೆಸಿಕೊಂಡು ಬರುತ್ತಿದ್ದು, ಆರ್ಥಿಕವಾಗಿ ಬಹಳ ಹಿಂದುಳಿದಿದೆ, ಸಮುದಾಯದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದೆ ಬಂದರೆ ತಿಗಳ ಸಮುದಾಯವನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ, ರಾಜಕೀಯವಾಗಿ ಮೇಲೆ ಬರಲು ಪ್ರವರ್ಗ 2ಎ ಯಿಂದ ಪ್ರವರ್ಗ 1ಕ್ಕೆ ಸೇರಿಸಿದರೆ ಶೇ 4 ರಷ್ಟು ಮೀಸಲಾತಿ ದೊರೆÉತು ಎಲ್ಲಾ ರಂಗದಲ್ಲೂ ಮುಂದೆಬರಬಹುದು ಎಂದರು.

CHETAN KENDULI

ರಾಜ್ಯ ತಿಗಳ ಮಾಹಾಸಭಾ ಅಧ್ಯಕ್ಷ ಹೆಚ್.ಸುಬ್ಬಣ್ಣ ಮಾತನಾಡಿ ಇದುವರೆಗೂ ನಮ್ಮ ಜನಾಂಗದ ಯಾವೊಬ್ಬರು ಎಂ.ಎಲ್.ಎ, ಎಂ.ಪಿ, ಐಎಎಸ್, ಐಪಿಎಸ್ ಅಧಿಕಾರಿಗಳಿಲ್ಲದ ಜನಾಂಗವಾಗಿದೆ, ನಾವು ಶೈಕ್ಷಣಿಕವಾಗಿ ಆರ್ಥಿಕವಾಗಿ ಮುಂದುವರಿದಾಗ ಸಮಾಜದಲ್ಲಿ ತಲೆ ಎತ್ತಿ ನಿಲ್ಲಬಹುದು, ಎಲ್ಲ್ಲಾ ಪಕ್ಷದಲ್ಲೂ ನಮ್ಮ ಜನಾಂಗ ದುಡಿಯುತ್ತಿದ್ದು, ಅವರನ್ನು ಗುರುತಿಸಿ ಸೂಕ್ತ ಸ್ಥಾನಮಾನ ನೀಡುವ ಕೆಲಸ ಯಾವ ಪಕ್ಷವೂ ಮಾಡಿಲ್ಲ, ರಾಜ್ಯದಲ್ಲಿ 147 ಕರಗ ಮಹೋತ್ಸವ ನಡೆಸಿ ಗುರುತಿಸಿಕೊಂಡಿರುವ ಪ್ರಾದಾನ್ಯತೆ ತಿಗಳ ಜನಾಂಗಕ್ಕೆ ಸಲ್ಲುತ್ತದೆ, ಮಹಿಳೆಯರು ಮುಖ್ಯವಾಹಿನಿಗೆ ಬರಬೇಕು, ಒಳಜಗಳ ಮರೆತು ಸಮುದಾಯದ ಅಭಿವೃದ್ಧಿಗೆ ಗಮನ ಹರಿಸಬೇಕು ಎಂದರು
ದೇವನಹಳ್ಳ್ಳಿ ತಾಲೂಕು ತಿಗಳರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಮಾತನಾಡಿ ಕ್ಷತ್ರಿಯ ಸಮುದಾಯದಿಂದಲೇ ಮಹಾಭಾರತ ಸೃಷ್ಠಿಯಾಗಿದ್ದು ಅಂತಹ ಸಮುದಾಯದವರು ತುಂಬಾ ತಳಮಟ್ಟಕ್ಕೆ ತಲುಪಿದ್ದಾರೆ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದಿದ್ದು ನಮ್ಮ ಜನಾಂಗಕ್ಕೆ ಪ್ರ್ರವರ್ಗ 2ಎ ಯಿಂದ ಪ್ರವರ್ಗ 1ಕ್ಕೆ ಸೇರ್ಪಡೆ ಮಾಡಿದರೆÀ ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದೆ ಬರಲು ಸಾದ್ಯ, ಇದುವರೆಗೂ ಆಯ್ಕೆಯಾಗಿ ಬಂದಂತಹ ಎಲ್ಲಾ ಸರಕಾರಗಳು ನಮ್ಮ ಜನಾಂಗವನ್ನು ಕಡೆಗಣನೆ ಮಾಡುತ್ತಿದ್ದಾರೆ, ನಾವು ಒಗ್ಗಟ್ಟಾಗಿ ನಿಂತರೆ ಪಕ್ಷಗಳು ತಾವಾಗಿಯೇ ಹುಡುಕಿಕೊಂಡುಬರುತ್ತವೆ ಎಂದರು.

ದೇವನಹಳ್ಳಿ ತಾಲ್ಲೂಕಿನ ನೂತನವಾಗಿ ಆಯ್ಕೆಯಾದ ಪುರಸಭಾ ಸದಸ್ಯ, ಗ್ರಾಮ ಪಂಚಾಯತಿ ಸದಸ್ಯರು, ಜನಾಂಗದ ಮುಖಂಡರಿಗೆ ಅಭಿನಂದನಾ ಕಾರ್ಯಕ್ರಮವನ್ನು ಸಹ ಹಮ್ಮಿಕೊಂಡಿದ್ದರು.ರಾಜ್ಯ ತಿಗಳ ಮಾಹಾಸಭಾ ಖಜಾಂಚಿ ಎಸ್.ಲೋಕೇಶ್, ಮೌಕ್ತಿಕಾಂಬ ದೇವಾಲಯದ ಅದ್ಯಕ್ಷರಾದ ಎಸ್.ಆರ್.ವಿಜಯಕುಮಾರ್, ಗೋಪಾಲಪ್ಪ, ಕರಗದ ಪೂಜಾರಿ ರವಿಕುಮಾರ್, ಪ್ರ.ಕಾರ್ಯದರ್ಶಿ ಬೈಚಾಪುರದ ಬಿ.ಎಂ. ನಾರಾಯಣಸ್ವಾಮಿ, ಜಿ.ಮುನಿರಾಜು, ವೆಂಕಟೇಶ್,ಮಂಜುನಾಥ್, ವಿಜಯಪುರದ ಪತ್ರಕರ್ತ ಮುನಿವೀರಣ್ಣ, ಎಂ.ಶಿವರಾಮ್, ಕೆ.ಎನ್.ಗ್ರೂಪ್‍ನ ಸಿ.ಓ. ರಾಜ್‍ಕೃಷ್ಣಮೂರ್ತಿ, ಗಜೇಂದ್ರ, ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*