ಜಿಲ್ಲಾ ಸುದ್ದಿಗಳು
ಮಸ್ಕಿ
ಬಳಗಾನೂರು ಪಟ್ಟಣದ ವಾರ್ಡ್ ನಂ 1 ರಲ್ಲಿ ಎಸ್. ಬಿ.ಐ ಬ್ಯಾಂಕ್ ಪಕ್ಕದಲ್ಲಿ ವಾರ್ಡ್ ನ 18 ವರ್ಷ ದಿಂದ 44 ವರ್ಷದ ಹಾಗೂ 45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಕೋವಿಡ್ 19 ಲಸಿಕೆ ಹಾಕಲಾಯಿತು. ವ್ಯಾಕ್ಸಿನ್ ಹಾಕುವ ಸಂದರ್ಭ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರ ಬಳಗಾನೂರ ಆಸ್ಪತ್ರೆಯ ಒಬ್ಬ ವೈದ್ಯರು ಹಾಗೂ ನರ್ಸ್ ಗಳು ಸೇರಿದಂತೆ ಯಾವುದೇ ಸಿಬ್ಬಂದಿ ವರ್ಗ ಇರಲಿಲ್ಲ.ಕೇವಲ ಆಶಾ ಕಾರ್ಯಕರ್ತೆಯರು ವೈದ್ಯಾಧಿಕಾರಿ ಗಳಂತೆ ವರ್ತಿಸುತ್ತಿದ್ದುದ್ದಲ್ಲದೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಒಂದು ರೀತಿಯಲ್ಲಿ ಹೇಳುವುದಾದರೆ ಬಳಗಾನೂರು ಪಟ್ಟಣದಲ್ಲಿ ಆಶಾ ಕಾರ್ಯಕರ್ತೆಯರೇ ವೈದ್ಯರು ಮತ್ತು ದಾದಿಯರು.ಲಸಿಕೆ ಹಾಕುವ ಕೇಂದ್ರದಲ್ಲಿ ಕೋವಿಡ್ 19 ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬಂದಂತಹ ಸಾರ್ವಜನಿಕರಿಗೆ ಯಾವುದೇ ರೀತಿಯ ಆಸನಗಳ ವ್ಯವಸ್ಥೆಯನ್ನು ಮಾಡದೆ ಇರುವುದರಿಂದ ಸಾರ್ವಜನಿಕರು ಸಾಮಾಜಿಕ ಅಂತರವಿಲ್ಲದೆ, ಯಾವುದೇ ರೀತಿಯ ಮಾಸ್ಕ್ ಇಲ್ಲದೆ, ಎಲ್ಲೆಂದರಲ್ಲಿ ಕುಳಿತುಕೊಂಡಿದ್ದರು ಎಂದು ಮೌನೇಶ್ ಬಿ ಬಳಗಾನೂರು ಆರೋಪಿಸಿದ್ದಾರೆ.
ಆಶಾ ಕಾರ್ಯಕರ್ತೆಯರ ನೇತೃತ್ವದಲ್ಲಿ ಕೋವಿಡ್ -19 ಲಸಿಕೆ ಹಾಕುವುದರಿಂದ ಸಾರ್ವಜನಿಕರಿಗೆ ಯಾವುದಾದರೂ ತೊಂದರೆಯಾದರೆ. ಅದಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಬಳಗಾನೂರು ವೈದ್ಯರ ನಿರ್ಲಕ್ಷೆಯೋ ಅಥವಾ ನರ್ಸ್ ಗಳ ನಿರ್ಲಕ್ಷೆಯೋ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟ ಆರೋಗ್ಯ ಅಧಿಕಾರಿಗಳಲ್ಲಿ ವಿನಂತಿಸಿಕೊಳ್ಳುತ್ತೇನೆ.*ಮೌನೇಶ್ ಬಿ ಬಳಗಾನೂರು*
Be the first to comment