ರಾಜ್ಯ ಸುದ್ದಿ
ಕುಮಟಾ: ವಿಪರೀತ ಗಾಳಿ ಮಳೆಗೆ ತಾಲೂಕಿನ ಅಳಕೋಡ ಗ್ರಾ.ಪಂ ವ್ಯಾಪ್ತಿಯ ಸಾಂತೂರು ಗ್ರಾಮಕ್ಕೆ ವಿದ್ಯುತ್ ಕಲ್ಪಿಸುವ ಒಟ್ಟೂ 8 ಕಂಬಗಳು ಮುರಿದಿದ್ದು, ಗ್ರಾಮಸ್ಥರು ಕತ್ತಲೆಯಲ್ಲಿಯೇ ವಾಸಿಸುವಂತಾಗಿತ್ತು. ವಿಷಯ ತಿಳಿದ ತಕ್ಷಣ ಶಾಸಕ ದಿನಕರ ಶೆಟ್ಟಿಯವರು ವಿಶೇಷ ಕಾಳಜಿವಹಿಸಿ, ಹೆಸ್ಕಾಂ ಇಲಾಖೆಯ ಮೂಲಕ ತ್ವರಿತವಾಗಿ ವಿದ್ಯುತ್ ಕಲ್ಪಿಸಿ, ಗ್ರಾಮಕ್ಕೆ ಬೆಳಕು ಹರಿಸಿದ್ದಾರೆ.
ಗಾಳಿ ಮಳೆಗೆ ಅರಣ್ಯ ಪ್ರದೇಶವಾದ ಸಾಂತೂರು ಗ್ರಾಮದಲ್ಲಿ ಒಟ್ಟೂ 8 ವಿದ್ಯುತ್ ಕಂಬಗಳು ದರೆಗುರುಳಿ, ಗ್ರಾಮಸ್ಥರು ಕತ್ತಲೆಯಲ್ಲಿಯೇ ವಾಸಿಸುವಂತಾಗಿತ್ತು. ಇದನ್ನು ತಿಳಿದ ಶಾಸಕ ದಿನಕರ ಶೆಟ್ಟಿ ಹಾಗೂ ಜಿ.ಪಂ ಸದಸ್ಯ ಗಜಾನನ ಪೈ ಅವರು ವಿಶೇಷ ಮುತುವರ್ಜಿವಹಿಸಿ, ಹೆಸ್ಕಾಂ ಇಲಾಖೆಗೆ ಶೀಘ್ರವೇ ದುರಸ್ತಿಗೊಳಿಸುವಂತೆ ಸೂಚಿಸಿದ್ದರು. ಸುರಿಯುತ್ತಿರುವ ಮಳೆಯಲ್ಲಿಯೂ ಸಹ ಕಾರ್ಯಪ್ರವೃತ್ತರಾದ ಹೆಸ್ಕಾಂ ಇಲಾಖೆಯ ಸಿಬ್ಬಂದಿಗಳು ತಕ್ಷಣವೇ 8 ಕಂಬಗಳನ್ನು ಅಳವಡಿಸಿ, ಗ್ರಾಮಕ್ಕೆ ವಿದ್ಯುತ್ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.ಗ್ರಾ.ಪಂ ಉಪಾಧ್ಯಕ್ಷ ಶ್ರೀಧರ ಪೈ, ಸದಸ್ಯರಾದ ಮಹೇಶ ದೇಶಭಂಡಾರಿ ಹಾಗೂ ಶ್ರೀಧರ ಗೌಡ ಹೆಸ್ಕಾಂ ಇಲಾಖೆಯ ಸಿಬ್ಬಂದಿಗಳ ಜೊತೆಗಿದ್ದು, ತಾವೂ ಸಹ ವಿದ್ಯುತ್ ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸಿರುವುದು ಗ್ರಾಮಸ್ಥರ ಮೆಚ್ಚುಗೆಗೆ ಕಾರಣವಾಗಿದೆ
Be the first to comment