ಉಳವಿ-ಡಿಗ್ಗಿ ಹೆದ್ದಾರಿಯಲ್ಲಿ ಭೂ ಕುಸಿತ; ಸಂಚಾರ ಬಂದ್ !

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿ 

CHETAN KENDULI

ಜೋಯಿಡಾ: ತಾಲೂಕಿನಲ್ಲಿ ಸುರಿದ ಅಬ್ಬರದ ಮಳೆಗೆ ಕುಂಬಾರವಾಡಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉಳವಿ-ಡಿಗ್ಗಿ ಹೆದ್ದಾರಿಯ ಕಳಸಾಯಿ ಹತ್ತಿರ ರಸ್ತೆ ಕುಸಿತವಾಗಿದ್ದು ಅಂಬೂಳ್ಳಿ ಕ್ರಾಸ್ ನಿಂದ ಕುಂಬಾರವಾಡಾ ಕ್ರಾಸ್ ವರೆಗೆ ಸಂಚಾರ ನಿರ್ಬಂಧಿಸಿದೆ.

ಕಳಸಾಯಿ ಬಳಿ ರಸ್ತೆ ಪಕ್ಕದಲ್ಲಿ ದೊಡ್ಡದಾಗಿ ಭೂ ಕುಸಿತ ಉಂಟಾಗಿದ್ದು, ಈ ಹಿನ್ನಲೆಯಲ್ಲಿ ಅಂಬೂಳ್ಳಿ ಕ್ರಾಸ್ ನಿಂದ ಕುಂಬಾರವಾಡಾ ಕ್ರಾಸ್ ವರೆಗೆ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿದೆ. ಇದರಿಂದಾಗಿ ಕುಂಬಾರವಾಡಾದಿಂದ ಉಳವಿ ಹೊಗುವ ರಸ್ತೆ ಬಂದ್ ಆಗಿದೆ. ಸ್ಥಳಕ್ಕೆ ಕಾರವಾರ ಉಪವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Be the first to comment

Leave a Reply

Your email address will not be published.


*