ರಾಜ್ಯ ಸುದ್ದಿಗಳು
ಬೆಂಗಳೂರು
ಕರ್ನಾಟಕ ರಾಜ್ಯದ ಎಲ್ಲ ವರ್ಗದ ಕಾರ್ಮಿಕರಿಗಾಗಿಯೇ ಕರುನಾಡ ವಿಜಯ ಸೇನೆಯ ವತಿಯಿಂದ ಮೇ1ರಂದು ಬೃಹತ್ ಮಟ್ಟದ ಕಾರ್ಮಿಕ ಸಮಾವೇಶವನ್ನು ಬೆಂಗಳೂರಿನ ಗಾಯತ್ರಿ ವಿಹಾರದಲ್ಲಿ ಹಮ್ಮಿಕೊಳ್ಳಲಾಗಿದೆ ಕಾರ್ಮಿಕ ದಿನಾಚರಣೆಯ ಅಂಗವಾಗಿ ಕರುನಾಡ ವಿಜಯ ಸೇನೆಯ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷರಾದ ನೆ. ಲ. ರಾಮಪ್ರಸಾದ್ ರವರ ನೇತೃತ್ವದಲ್ಲಿ ಎಲ್ಲಾ ವರ್ಗದ ಕಾರ್ಮಿಕರಿಗಾಗಿ ವಿಶೇಷ ರೀತಿಯ ಕಾರ್ಮಿಕ ಸಮಾವೇಶವನ್ನು ಆಯೋಜಿಸಿದ್ದು
ಈ ಕಾರ್ಯಕ್ರಮ ಕುರಿತಂತೆ ಇಂದು ಬೆಂಗಳೂರಿನ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷರಾದ ನೆಲ ರಾಮ್ ಪ್ರಸಾದ್ ಮಾತನಾಡಿ ಕರುನಾಡ ವಿಜಯ ಸೇನೆ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಆರು ತಿಂಗಳು ಕಳೆದಿವೆ ಈ ಅವಧಿಯಲ್ಲಿ ಕರುನಾಡ ವಿಜಯ ಸೇನೆ ವತಿಯಿಂದ ರಾಜ್ಯಾದ್ಯಂತ ಹಲವು ಭಾಗಗಳಲ್ಲಿ ವಿಶೇಷ ರೀತಿಯ ಕಾರ್ಯಕ್ರಮಗಳನ್ನು, ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.ಕಾರ್ಮಿಕರಿಗಾಗಿ ಮೀಸಲಿರುವ ಕಾರ್ಮಿಕ ದಿನಾಚರಣೆಯನ್ನು ಕರುನಾಡ ವಿಜಯ ಸೇನೆ ತಂಡ ವಿಶೇಷ ರೀತಿಯಲ್ಲಿ ಆಚರಿಸಲು ನಿರ್ಧರಿಸಿದೆ ರಾಜ್ಯದ ಎಲ್ಲಾ ವರ್ಗದ ಕಾರ್ಮಿಕರು ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರು ಕಾರ್ಯಕ್ರಮದ ಮುಖ್ಯ ರೂವಾರಿಗಳು ಕಾರ್ಮಿಕರಾಗಿದ್ದು.
ಕಾರ್ಯಕ್ರಮದಲ್ಲಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಜೊನಲ್ ಮಟ್ಟಕ್ಕೆ 5 ಉಚಿತ ಅಂಬುಲೆನ್ಸ್ ಸೇವೆಗಳನ್ನು ಒದಗಿಸಲು ಕರುನಾಡ ವಿಜಯ ಸೇನೆ ಮುಂದಾಗಿದ್ದು ಬೃಹತ್ ಸಮಾವೇಶದಲ್ಲಿ ಪೌರಕಾರ್ಮಿಕ ವರ್ಗಕ್ಕೆ ಸನ್ಮಾನಿಸಲು ಕರುನಾಡ ವಿಜಯ ಸೇನೆ ತೀರ್ಮಾನಿಸಿದೆ ಉಚಿತವಾಗಿ ಪ್ರತಿ ಕಾರ್ಮಿಕರಿಗೆ ಅವಶ್ಯಕವಾಗಿರುವ ಲೇಬರ್ ಕಾರ್ಡ್ ನೊಂದಣಿಯನ್ನು ಸಹ ಈ ಸಮಾವೇಶದಲ್ಲಿ ಆಯೋಜಿಸಿದ್ದು ಅಗತ್ಯವಿರುವ ಕಾರ್ಮಿಕರು ಉಚಿತವಾಗಿ ಲೇಬರ್ ಕಾರ್ಡ್ ನೋಂದಣಿ ಮಾಡಿಸಬಹುದಾಗಿದೆ ಮೇ 1ರಂದು ಬೆಳಗ್ಗೆ 10 ಗಂಟೆಗೆ ಬಸವಣ್ಣನವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಗುವುದು ತದನಂತರ ಕರುನಾಡ ವಿಜಯ ಸೇನೆಯ ಎಲ್ಲಾ ಹಂತದ ಪದಾಧಿಕಾರಿಗಳು ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದೇವೆ ಎಂದು ತಿಳಿಸಿದರು
Be the first to comment