ರಾಜ್ಯ ಸುದ್ದಿ
ಬೆಂಗಳೂರು: ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಟೋಟ ಸಂಭವಿಸಿದೆ. ಘಟನೆಯಲ್ಲಿ 6 ಜನ ಕೆಲಸಗಾರರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಿಲ್ದಾಣದ ಎರಡನೇ ಟರ್ಮಿನಲ್ ನಿರ್ಮಾಣ ಕಾಮಗಾರಿ ಕೆಲಸ ಕೆಲ ದಿನಗಳಿಂದ ನಡೆಯುತ್ತಿದೆ. ಹಾಗಾಗಿ ಕೆಳ ಸೇತುವೆಯಲ್ಲಿ ರಾಸಾಯನಿಕ ಡಬ್ಬಿಗಳನ್ನು, ಸಲಕರಣೆಗಳನ್ನು ಇಡಲಾಗಿತ್ತು. ನಿನ್ನೆ (ಭಾನುವಾರ) ರಾಸಾಯನಿಕ ಡಬ್ಬಿಗಳ ಸ್ಟೋಟಗೊಂಡ ಪರಿಣಾಮ ಘಟನೆ ಸಂಭವಿಸಿದೆ. ಕೆಲಸ ಮಾಡುತ್ತಿದ್ದ 6 ಮಂದಿ ಕಾರ್ಮಿಕರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
ಗಾಯಾಳುಗಳು ಅವಿನಾಶ್, ಸಿರಾಜ್, ಪ್ರಶಾಂತ್, ಗೌತಮ್, ಅಜಯ್ಕುಮಾರ್ ಮತ್ತು ನಾಗೇಶ್ರಾವ್ ಎಂದು ತಿಳಿದು ಬಂದಿದೆ. ಸ್ಪೋಟವಾದ ಸಂದರ್ಭದಲ್ಲಿ ಕಾರ್ಮಿಕರ ಕೂಗು ಕೇಳಿ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಬಂದು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಹೊತ್ತಿಉರಿಯುತ್ತಿದ್ದ ಬೆಂಕಿಯನ್ನು ಆರಿಸಿದ್ದಾರೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆ ದಾಖಲು ಮಾಡಲಾಗಿದೆ. ಸಿರಾಜ್ ಮತ್ತು ಅವಿನಾಶ್ಗೆ ಶೇ.40ರಷ್ಟು ಸುಟ್ಟಗಾಯಗಳಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ.
ಬೆಂಗಳೂರಿನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಥಾಣಕ್ಕೆ ಆಗಮಿಸುವ ವಾಹನಗಳು ಕಿರಿದಾದ ರಸ್ತೆಯಲ್ಲಿಯೇ ಸಂಚರಿಸುತ್ತಿದ್ದ ಕಾರಣ ಏರ್ಪೋಟ್ ಆವರಣದಲ್ಲಿ 5 ಪಥಗಳ ರಸ್ತೆ ಅಗಲೀಕರಣ ಕಾಮಗಾರಿ ಭರದಿಂದ ನಡೆಯುತ್ತಿದೆ. ಈ ವೇಳೆ ರಸ್ತೆಗೆ ಬಿಳಿ ಪಟ್ಟಿಗಳನ್ನು ಹಚ್ಚಲು ಕಾರ್ಮಿಕರು ನಿನ್ನೆ ಕೆಲಸಕ್ಕೆ ಬಂದಿದ್ದರು. ಬಳಿಯ ಬೇಕಾದ ಬಣ್ಣವನ್ನು ರಾಸಾಯನಿಕಗಳ ಜತೆಗೆ ಮಿಶ್ರಣ ಮಾಡಿ ಸಿಲೆಂಡ್ ಬಳಸಿ ಕಾಯಿಸುತ್ತಿದ್ದರು, ಈ ವೇಳೆ ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಟೋಟಗೊಂಡಿದೆ.
Be the first to comment