ಕಾಲ್ನಡಿಗೆಯಲ್ಲೇ ಅಪ್ಪು ಸಮಾಧಿಕಡೆಗೆ ಹೊರಟ ಅಭಿಮಾನಿಯನ್ನು ಮಸ್ಕಿ KRS ಪಕ್ಷದ ಸಂಘಟನೆಯ ಕಾರ್ಯಕರ್ತರಿಂದ ಪ್ರೀತಿಯ ಸ್ವಾಗತ

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ

ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಐನೂರು ಗ್ರಾಮದ ರವಿ ಕುಮಾರ್ ಪಾದಯಾತ್ರೆ ಮೂಲಕ ಪುನೀತ್ ಸಮಾಧಿಗೆ ಹೊರಟಿದ್ದು ಮಸ್ಕಿ ಹೆದ್ದಾರಿ ರಲ್ಲಿ ಪುನೀತ್ ಅಭಿಮಾನಿ ರವಿಕುಮಾರ್ ವರಿಗೆ ಅದ್ದೂರಿ ಸ್ವಾಗತ ಮಾಡಿಕೊಳ್ಳುವುದರ ಮೂಲಕ ಸ್ವಾಗತ ಕೋರಿದರು ಹಾಗೂ ಕೆ ಆರ್ ಎಸ್ ಪಕ್ಷದಿಂದ ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಅಭಿಮಾನಿಗೆ ಸನ್ಮಾನ ಮಾಡಲಾಯಿತು. 

CHETAN KENDULI

ಈ ಸಂದರ್ಭದಲ್ಲಿ ಮಾತನಾಡಿದ ಕೆ ಆರ್ ಎಸ್ ಪಕ್ಷದ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ನಿರುಪಾದಿ ಗೋಮರ್ಸಿ,ಜಿಲ್ಲಾ ಕಾರ್ಯದರ್ಶಿ ಎಸ್ ನಜೀರ್ ಮಸ್ಕಿ , KRS ಪಕ್ಷ ದ ಜಿಲ್ಲಾ ಅಧ್ಯಕ್ಷರಾದ ವೆಂಕಟೇಶ್ ಮೇಕೋಲ್ಧೋಡಿ , ಮತ್ತು ಪಕ್ಷದ ಕಾರ್ಯಕರ್ತರು ರವಿಕುಮಾರ್ ರವರನ್ನು ಮಸ್ಕಿ ಗೆ ಬರ ಮಾಡಿಕೊಂಡು ಆರೋಗ್ಯ ವಿಚಾರಿಸಿ ಐಕೂರು ಗ್ರಾಮದಿಂದ ಬೆಂಗಳೂರಿಗೆ 500 ಕಿಲೋಮೀಟರ್ ರವಿಕುಮಾರ್ ಪಾದಯಾತ್ರೆ ನಡೆಸುತ್ತಿದ್ದಾರೆ. ರವಿಕುಮಾರ್ ಅವರಿಗೆ ಕೆ ಆರ್ ಎಸ್ ಪಕ್ಷ ಕಾರ್ಯಕರ್ತರು ಹಾಗೂ ಅಪ್ಪು ಅಭಿಮಾನಿ, ಡಾ.ರಾಜ್ ಹಾಗೂ ಶಿವರಾಜಕುಮಾರ್​ ಸಂಘಟನೆಗಳು ಅದ್ದೂರಿ ಸ್ವಾಗತ ಕೋರಿದ್ದರು.

ಈ ಮೂಲಕ ರವಿಕುಮಾರ್ ಅವರು ಅಪ್ಪು ಮೇಲಿರುವ ಅಭಿಮಾನಕ್ಕೆ ಮಾಡುತ್ತಿರುವ ಪಾದಯಾತ್ರೆಗೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ. ಮಸ್ಕಿ ರಾಷ್ಟ್ರೀಯ ಹೆದ್ದಾರಿ ಮೂಲಕ ಬೆಂಗಳೂರಿಗೆ ರವಿಕುಮಾರ್ ಪಾದಯಾತ್ರೆ ಮುಂದುವರಿಸಿ, ನಟ ಪುನೀತ್ ರಾಜ್‌ಕುಮಾರ್ ಅವರ ಸಮಾಧಿ ಇರುವ ಸ್ಥಳಕ್ಕೆ ಹೋಗಿ ಗೌರವ ಸಲ್ಲಿಸಲು ಅಂಗವಿಕಲ ಅಭಿಮಾನಿಯೊಬ್ಬರು ಪಾದಯಾತ್ರೆ ಕೈಗೊಂಡು ಕೈಯಲ್ಲಿ ಅಪ್ಪು ಭಾವಚಿತ್ರ ಹಿಡಿದುಕೊಂಡು ಸ್ವತಃ ಖರ್ಚಿನಲ್ಲಿ ಕಾಲ್ನಡಿಗೆ ಮೂಲಕ ತನ್ನ ನೆಚ್ಚಿನ ನಟನ ಸಮಾಧಿ ದರ್ಶನಕ್ಕೆ ತೆರಳುತ್ತಿದ್ದಾರೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿ ರವಿಕುಮಾರ್ ಮಾತನಾಡಿ ‘ಪುನೀತ್ ರಾಜ್‌ಕುಮಾರ್ ನನ್ನ ನೆಚ್ಚಿನ ನಟ. ಜನರಿಗೆ ಅವರು ಮಾಡಿದ ಸಹಾಯ ಎಂದಿಗೂ ಮರೆಯುವಂತಿಲ್ಲ. ಅವರ ಆದರ್ಶಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇನೆ. ತಂದೆಯ ಅನಾರೋಗ್ಯದ ಕಾರಣ, ಪುನೀತ್ ಅವರ ಅಂತಿಮ ದರ್ಶನಕ್ಕೆ ಹೋಗಲು ಆಗಲಿಲ್ಲ. ಇಂದು ಪಾದಯಾತ್ರೆಯ ಮೂಲಕ ಅಪ್ಪು ಸಮಾಧಿಯ ದರ್ಶನ ಮಾಡಲು ಹೋಗುತ್ತಿದ್ದೇನೆ’ ಎಂದು ರವಿಕುಮಾರ್ ಹೇಳಿದರು.ಈ ಸಂದರ್ಭದಲ್ಲಿ ಕೆ ಆರ್ ಎಸ್ ಪಕ್ಷ ಕಾರ್ಯಕರ್ತರು, ಅಪ್ಪು ಅಭಿಮಾನಿಗಳು, ಸಾರ್ವಜನಿಕರು ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Be the first to comment

Leave a Reply

Your email address will not be published.


*