ಜಿಲ್ಲಾ ಸುದ್ದಿಗಳು
ಮಸ್ಕಿ
ದೇಶದಾದ್ಯಂತ ರೈತರ ಹೋರಾಟವನ್ನು ತೀವ್ರ ವಿರೋಧಿಸುತ್ತಿದ್ದ ಕೇಂದ್ರ. ಅದೇ ಕೇಂದ್ರ ಸರಕಾರ ರೈತರ ಮೇಲಿನ ಕಾಳಜಿಯೋ ಅಥವಾ ಸತತ ಪಕ್ಷದ ಸೋಲಿನ ಭೀತಿ ಕಾಡುತ್ತಿದ್ದಂತೆಯೇ ಮೂರು ಕೃಷಿ ಕಾನೂನು ಕಾಯ್ದೆ ಹಿಂದಕ್ಕೆ ಪಡೆದಿದೆ. ಮೂರು ಕೃಷಿ ಕಾನೂನು ಕಾಯ್ದೆ ಹಿಂಪಡೆದಿರುವ ಸಂಭ್ರಮವನ್ನು ರೈತ ಪರ ಹೋರಾಟಗಾರರಾದ ಕೆ ಆರ್ ಎಸ್ ಸಂಘಟನೆಯವರು ಇಂದು ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿಯ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ವಿಜಯೋತ್ಸವವನ್ನು ಆಚರಿಸಿದರು ನಮ್ಮ ದೇಶದಲ್ಲಿ ರೈತರಿಗೆ ಅನುಕೂಲವಾಗುವಂತಹ ಕಾನೂನುಗಳನ್ನು ಜಾರಿಗೆ ತರಬೇಕೆ ಹೊರತು ರೈತರಿಗೆ ವಿರುದ್ಧವಾದ ಕಾನೂನುಗಳನ್ನು ಯಾವುದೇ ಕಾರಣಕ್ಕೂ ತರಬಾರದು ನಮ್ಮ ದೇಶದ ರೈತರು ಈ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಒಂದು ವರ್ಷದಿಂದಲೂ ಸತತವಾಗಿ ಚಳುವಳಿಯನ್ನು ಮಾಡುತ್ತಾ ಬಂದಿರುತ್ತಾರೆ. ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನು ಕಾಯ್ದೆಗಳನ್ನು ಹಿಂತೆಗೆದುಕೊಂಡಿದ್ದರಿಂದ ರೈತರಿಗೆ ದೊಡ್ಡ ವಿಜಯವನ್ನು ತಂದಂತಾಗಿದೆ.ಇದೇ ಸಂದರ್ಭದಲ್ಲಿಕೆಆರ್ ಎಸ್ ಸಂಘದ ತಾಲೂಕಾಧ್ಯಕ್ಷ ಸಂತೋಷ್ ಹಿರೇ ದಿನ್ನಿ, ತಾಲೂಕಾ ಕಾರ್ಯದರ್ಶಿ ಮಾರುತಿ ಜಿನ್ನಾಪೂರು, ಕೆಆರ್ ಎಸ್ ಸಂಘದ ಸದಸ್ಯರೂ ಸೇರಿದಂತೆ ಇನ್ನತರರು ಭಾಗಿಯಾಗಿದ್ದರು.
Be the first to comment