ರಾಜ್ಯ ಸುದ್ದಿಗಳು
ಬೆಂಗಳೂರು
ಕೇಂದ್ರ ಸರ್ಕಾರ ರೈತವಿರೋಧಿ ಮೂರು ಮಸೂದೆಗಳನ್ನು ವಾಪಸ್ ಪಡೆದ ಹಿನ್ನೆಲೆಯಲ್ಲಿ ಇಂದು ಚಿಕ್ಕಮಗಳೂರುನಲ್ಲಿ ರೈತ ಮುಖಂಡರು ಹಾಗೂ ಇತರೆ ಸಂಘ ಸಂಸ್ಥೆಗಳ ಮುಖಂಡರು ಪ್ರಗತಿಪರ ಚಿಂತನೆಯುಳ್ಳ ಹೋರಾಟಗಾರರು ಸೇರಿ ವಿಜಯೋತ್ಸವನ್ನು ಆಚರಿಸಿ ಸಂಭ್ರಮಿಸಿದರು.
ಇನ್ನೂ ಈ ಹೋರಾಟದ ಯಶಸ್ವಿಗೆ ಕಾರಣರಾದ ರೈತ ಮುಖಂಡರಿಗೆ ಅಭಿನಂದನೆಗಳನ್ನು ಸಲ್ಲಿಸಿದರು ಹಾಗೂ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಹೋರಾಟಗಾರರಿಗೆ ಈ ಸಂದರ್ಭದಲ್ಲಿ ಗೌರವ ಸಲ್ಲಿಸಿ ಸಿಹಿ ಹಂಚಿ ಸಡಗರ ಸಂಭ್ರಮದಿಂದ ಕುಣಿದ ಕುಪ್ಪಳಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡರ ಬಣ ಚಿಕ್ಕಮಗಳೂರು ಜಿಲ್ಲೆಯ ಅದ್ಯಕ್ಷರಾದ ತೇಗೂರು ಜಗದೀಶ್ ಇವರು ರೈತ ವಿರೋಧಿ ಹೋರಾಟದಲ್ಲಿ ಮರಣ ಹೊಂದಿದ 700 ಜನ ರೈತರು ಯೋಧರಿಗೆ ಸಮ ಹಾಗಾಗಿ ಮರಣ ಹೊಂದಿದ ರೈತರ ಕುಟುಂಬಕ್ಕೆ ಕೇಂದ್ರ ಸರ್ಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
Be the first to comment