ರಾಜ್ಯ ಸುದ್ದಿಗಳು
ದೊಡ್ಡಬಳ್ಳಾಪುರ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ದರ್ಗಜೋಗಹಳ್ಳಿ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿಇಂದು ಸತತ 600ನೇ ದಿನದ ಅನ್ನ ದಾಸೋಹಿ ಕಾರ್ಯಕ್ರಮ ನಡೆಯಿತು.
ಈ 600 ನೇ ಅನ್ನ ದಾಸೋಹಿ ಕಾರ್ಯಕ್ರಮದಲ್ಲಿ ವಕೀಲರು ಹಾಗೂ ಚಿರರುಣಿ ಕನ್ನಡಾಂಬೆ ಹೋರಾಟ ಸಮಿತಿಯ ಸಂಸ್ಥಾಪಕರವಿ ಮಾವಿನಕುಂಟೆ 600 ನೇ ಅನ್ನ ದಾಸೋಹಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ದಾಸೋಹಿ ಮುಖ್ಯಸ್ಥ ಎಲ್. ಮಲ್ಲೇಶ್ ಮಾತನಾಡಿ ನಿರ್ಗತಿಕರಿಗೆ ಹಾಗೂ ಕಡೂ ಬಡವರಿಗೆ ನಿರಂತರ ಅನ್ನದಾಸೋಹ ನಡೆಯುತ್ತದೆ ಹಾಗೂ ನೂತನವಾಗಿ ನಿರ್ಮಿಸಲಾಗುವ ಸಮೂದಾಯ ಭವನ ನಿರ್ಮಾಣ ಹಂತದಲ್ಲಿದ್ದು ಈ ಸಮುದಾಯ ಭವನವನ್ನು ಅನಾಥ ಮಕ್ಕಳಿಗೆ ವಿದ್ಯಾಕೇಂದ್ರ ಹಾಗೂ ನಿರಂತರ ಗಂಜಿ ಕೇಂದ್ರವನ್ನಾಗಿ ಮಾಡಲು ಆಸಕ್ತಿ ಇದೆ ಇನ್ನೂ ಇದೇ ಸಂದರ್ಭದಲ್ಲಿ RTI ಕಾರ್ಯಕರ್ತ ಹನುಮಂತರಾಯಪ್ಪ .
ದರ್ಗಜೋಗಳ್ಳಿ ಗ್ರಾಮಪಂಚಾಯ್ತಿ ಅದ್ಯಕ್ಷ ಜೆ.ಎಸ್ ನಾಗಭೂಷಣ್ ,ಗ್ರಾಮಪಂಚಾಯ್ತಿ ಸದಸ್ಯೆ ಶಶಿಕಲಾ, ಯೋಗ ಗುರುಗಳು ಕೃಷ್ಣಪ್ಪ ,ಜಾಗೃತಿ ವೇದಿಕೆಯ ಅದ್ಯಕ್ಷ ನಾಗರಾಜು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Be the first to comment