ನಾಳೆಯಿಂದ ಮೇ-31 ರವರೆಗೆ ಗುಡೂರ ಸ್ವಯಂ ಘೋಷಿತ ಬಂದ್:ವಾರದಲ್ಲಿ ಎರಡು ದಿನ ಅಗತ್ಯವಸ್ತುಗಳ ಖರೀದಿಗೆ ಅವಕಾಶ.

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

CHETAN KENDULI

ಕೊರೋನಾ ವೈರಸ್‌ ತಡೆಗೆ ಗ್ರಾಮಾಡಳಿತ ನಿರ್ಧಾರ| ಹಾಲಿನ ಅಂಗಡಿ, ಔಷಧ ಅಂಗಡಿ, ದವಾಖಾನೆಗಳನ್ನು ವಾರದ ಎಲ್ಲಾ ದಿನಗಳು| ಉಳಿದ ಎಲ್ಲ ಅಂಗಡಿ ಮುಂಗಟ್ಟನ್ನು, ವ್ಯಾಪಾರ ವಹಿವಾಟುಗಳಿಗೆ ಮೇ-31 ರ ವರೆಗೆ ವಾರದ ಎರಡು ದಿನಗಳು ಮಾತ್ರ ಅವಕಾಶ|

ಬಾಗಲಕೋಟೆ: (ಗುಡೂರ)

ಕೊರೋನಾ ವೈರಸ್‌ ಹರಡುವುದನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಬಾನುವಾರ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಊರಿನ ಪ್ರಮುಖರು ವಿವಿಧ ಇಲಾಖೆಯ ಸಿಬ್ಬಂದಿಯವರು ಸಭೆ ನ​ಡೆ​ಸಿ ಚರ್ಚಿಸಿ ಮೇ-31 ರ ವರೆಗೆ ಸ್ವಯಂ ಘೋಷಿತವಾಗಿ ಲಾಕ್‌ ಡೌನ್‌ಗೆ ನಿರ್ಧರಿಸಲಾಯಿತು.

ಇಲ್ಲಿನ ಸುತ್ತಮುತ್ತಲಿನ ಗ್ರಾಮಗಳಾದ ಕೆಲೂರ,ವಡಗೇರಿ,ಭೀಮನಗಡ,ದಮ್ಮೂರ, ಮುರಡಿ, ಸೇರಿದಂತೆ ವಿವಿಧ ಕಡೆಗಳಲ್ಲಿನ ಜನರು ಪ್ರತಿನಿತ್ಯ ವ್ಯಾಪಾರ ವಹಿವಾಟಿಗಾಗಿ ಸಾಕಷ್ಟು ಜನ ಬರುತ್ತಿದ್ದು, ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಮತ್ತು ಗುಡೂರ ಗ್ರಾಮದಲ್ಲಿ ಕೊರೋನಾ ಸೊಂಕು ದಿನೆ ದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸ್ವಯಂ ಘೋಷಿಸಿತವಾಗಿ ಲಾಕ್‌ಡೌನ್‌ಗೆ ಮುಂದಾಗಿರುವುದಾಗಿ ಸಭೆಯಲ್ಲಿ ಹಾಜರಿದ್ದ ಮುಖ್ಯಸ್ಥರು ಸ್ಪಷ್ಟಪಡಿಸಿದರು.

ಹಾಲಿನ ಅಂಗಡಿ, ಔಷಧ ಅಂಗಡಿ, ದವಾಖಾನೆಗಳಿಗೆ ವಾರದ ಎಲ್ಲ ದಿನಗಳಲ್ಲಿ ಅವಕಾಶ ಕಲ್ಪಿಸಲಾಗಿದ್ದು,ಉಳಿದಂತೆ ದಿನಸಿ ಖರೀದಿಸಲು, ತರಕಾರಿ ಖರೀದಿಸಲು,ಕಟ್ಟಡ ಸಾಮಗ್ರಿಗಳನ್ನು ಖರೀದಿಸಲು ವಾರದ ಎರಡುದಿನಗಳು ಅಂದರೆ ಸೋಮವಾರ ಮತ್ತು ಗುರುವಾರ ಮಾತ್ರ ಅವಕಾಶ ನೀಡಲಾಗಿದೆ. ಅಂದು ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಂಗಡಿ ಮುಂಗಟ್ಟನ್ನು ವ್ಯಾಪಾರ ವಹಿವಾಟುಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ.ನಂತರ ಊರಿನ ಎಲ್ಲ ಅಂಗಡಿಗಳನ್ನು ಲಾಕ್‌ ಡೌನ್‌ ಮಾಡಲಾಗುವುದು. ಈ ಸಮಯದಲ್ಲಿ ಯಾವುದೇ ತರಹದ ಅಂಗಡಿ ಮುಂಗಟ್ಟುಗಳನ್ನು ತೆರೆಯದಂತೆ ಹಾಗೂ ದಿನಬಳಕೆ ವಸ್ತುಗಳನ್ನು ನಿಗದಿತ ದರಗಳಿಗೆ ಮಾರಾಟ ಮಾಡುವ ಕುರಿತು ಚರ್ಚಿಸಲಾಗಿತ್ತು.

ಸ್ವಯಂ ಘೋಷಿತ ಲಾಕ್‌ಡೌನ್‌ಗೆ ಎಲ್ಲರ ಸಹಕಾರ ಮತ್ತು ಸ್ಪಷ್ಟನೆ ಕೇಳಿದ ನಂತರ ನಿರ್ದಾರ ತೆಗೆದುಕೊಳ್ಳಲಾಯಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಾಂದನಿ ಇಟಗಿ, ಉಪಾಧ್ಯಕ್ಷರಾದ ಹನುಮಂತಪ್ಪ ತೊಟ್ಲಪ್ಪನವರ, ಸದಸ್ಯರು,ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರೇವಡಿ,ಗ್ರಾಮ ಲೆಕ್ಕಾಧಿಕಾರಿ ವಿಜಯ ರೋಣದ, ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಇತರರು ಹಾಜರಿದ್ದರು.

Be the first to comment

Leave a Reply

Your email address will not be published.


*