ಜಿಲ್ಲಾ ಸುದ್ದಿಗಳು
ಮಸ್ಕಿ
ಅಭಿನಂದನ್ ಸಂಸ್ಥೆಯ ಸಂಡೆ ಫರ್ ಸೋಷಲ್ ವರ್ಕ್ ಅಭಿಯಾನದಡಿಯಲ್ಲಿ ಪ್ರತಿ ವಾರದಂತೆ ಈ ವಾರವು ಸಹ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದು,
ಈ ವಾರದ ಸೇವಾ ಕಾರ್ಯವನ್ನು ಮಸ್ಕಿಯ ಸರಕಾರಿ ಆಸ್ಪತ್ರೆಯ ಆವರಣವನ್ನು ಸ್ವಚ್ಛಗೊಳಿಸಲಾಯಿತು. ಈ ಕಾರ್ಯದಲ್ಲಿ ಮಸ್ಕಿ ಪುರಸಭೆ ಕಾರ್ಯಾಲಯವು ಜೆಸಿಬಿ ಯನ್ನು ನೀಡಿ ಸಹಕಾರ ನೀಡಿತು. ಈ ಸಂದರ್ಭದಲ್ಲಿ ಮಾತನಾಡಿದ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಬಸವಶ್ರೀ ಅವರು ಈಗಾಗಲೇ ಹಲವಾರು ಸಮಾಜಮುಖಿ ಕಾರ್ಯಗಳ ಮೂಲಕ ರಾಜ್ಯಾದ್ಯಂತ ಹೆಸರನ್ನು ಮಾಡುತ್ತಿರುವ ಅಭಿನಂದನ್ ಸಂಸ್ಥೆಯಿಂದ ಆರಂಭವಾದ ಸಂಡೆ ಫಾರ್ ಸೋಶಿಯಲ್ ವರ್ಕ್ ಎಂಬ ನೂತನ ಅಭಿಯಾನದ ಸೇವಾ ಕಾರ್ಯವನ್ನು ನಮ್ಮ ಸರಕಾರಿ ಆಸ್ಪತ್ರೆಯ ಆವರಣವನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಇಲ್ಲಿ ಕೈಗೊಂಡಿರುವದು ಸಂತಸದ ಸಂಗತಿಯಾಗಿದೆ. ಈ ಅಭಿಯಾನದಲ್ಲಿ ಭಾಗವಹಿಸಿದ ಎಲ್ಲಾ ಸ್ವಯಂ ಸೇವಕರಿಗೆ ಹಾಗೂ ಅಭಿನಂದನ್ ಸಂಸ್ಥೆಗೂ ನಮ್ಮ ಆಸ್ಪತ್ರೆಯ ಸಿಬ್ಬಂದಿ ವರ್ಗದ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಹಾಗೆಯೇ ಇಂದಿನ ಕಾರ್ಯಗಳನ್ನು ಮಾಡುವ ಸ್ಪೂರ್ತಿದಾಯಕ ಮನಸ್ಕರರು ಸಿಗುವುದು ಬಹಳ ವಿರಳವಾಗಿದೆ ಇಂತಹ ಸಂದರ್ಭದಲ್ಲಿ ಸಂಡೆ ಫಾರ್ ಸೋಶಿಯಲ್ ವರ್ಕ್ ಎಂಬ ವಿಶಿಷ್ಟ ಅಭಿಯಾನವು ಯುವಕರನ್ನು ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಪ್ರೇರೆಪಿಸುವ ಕಾರ್ಯ ಮಾಡುತ್ತಿದೆ. ಈ ಅಭಿಯಾನವು ಇನ್ನೂ ಹೆಚ್ಚಿನ ಜನರ ಮೆಚ್ಚುಗೆ ಪಡೆದು ಅವರೂ ಸಹ ಇದರಲ್ಲಿ ಭಾಗವಹಿಸುವಂತೆ ಮಾಡಲಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರತಾಪಗೌಡ ಪಾಟೀಲ್ ಫೌಂಡೇಶನ್‌ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ನೆಹರು ಯುವ ಕೇಂದ್ರ ರಾಯಚೂರಿನ ಸ್ವಯಂ ಸೇವಕರು, ಅಭಿನಂದನ್ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸರಕಾರಿ ಆಸ್ಪತ್ರೆಯ ಆಡಳಿತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Be the first to comment