ಜಿಲ್ಲಾ ಸುದ್ದಿಗಳು
ಮಸ್ಕಿ
ಪಟ್ಟಣದ ಭ್ರಮಾರಾಂಬ ಮಲ್ಲಿಕಾರ್ಜುನ ದೇವಸ್ಥಾನದ ಅವರಣದಲ್ಲಿ ನಡೆಸಲಾದ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ದಿನಾಂಕ :-17-18 ಅಕ್ಟೋಬರ್ 2021 ರಂದು ಸಮಯ ಬೆಳಗ್ಗೆ 10:30 ರಿಂದ 03:00 ವರೆಗೆ ಡಾ// ಮಲ್ಲಿಕಾರ್ಜುನ ಅನ್ನಪೂರ್ಣ ನರ್ಸಿಂಗ್ ಹೋಮ್ ಮಸ್ಕಿಯಲ್ಲಿ
ಕ್ಯಾನ್ಸರ್ ರೋಗಕ್ಕೆ ಸಂಭಂದಿಸಿದ ರೋಗಗಳಾದ ಸ್ತ್ರೀಯರಿಗೆ ಸ್ತನದಲ್ಲಿ ಗಂಟು, ಸ್ರಾವವಿದ್ದರೆ ಹಾಗೂ ಗರ್ಭಕೋಶದಲ್ಲಿ ಗಂಟು, ಅನಿಯಮಿತವಾಗಿ ರಕ್ತಸ್ರಾವ, ಥೈರಾಯ್ಡ್ ನ ಗಂಟುಗಳಿದ್ದರೆ, ತೂಕ ಕಡಿಮೆಯಾಗುವುದು ಮತ್ತು ಹಸಿವೆಯಾಗದಿರುವುದು, ಬಾಯಲ್ಲಿ ಹಾಗೂ ದೇಹದ ಇತರೆ ಭಾಗದಲ್ಲಿ ವಾಸಿಯಾಗದ ಹುಣ್ಣು, ಗಂಟು ಆಹಾರ ನುಂಗಲು ಕಷ್ಟ ಹಾಗೂ ಬಾಯ್ತೆರೆಯಲು ಕಷ್ಟವಾಗುವುದು ಈ ರೀತಿಯ ಕಾಯಿಲೆಗಳು ಇದ್ದಲ್ಲಿ ದಯಮಾಡಿ ಈ ಶಿಬಿರದ ವೈದ್ಯರಿಂದ ಉಚಿತ ಕ್ಯಾನ್ಸರ್ ಸಲಹೆ ಪಡೆದುಕೊಳ್ಳಿ. ಹಾಗೆಯೇ ನೀವು ಯಾವುದೇ ಕಾರಣಕ್ಕೂ ಮುಚ್ಚು ಮರೆ ಮಾಡದೆ ಮುಕ್ತವಾಗಿ ನಿಮ್ಮ ಕಾಯಿಲೆಯ ಬಗ್ಗೆ ಮಾಹಿತಿ ನೀಡಿ ಚಿಕಿತ್ಸೆ ಪಡೆದುಕೊಳ್ಳಿ ಶಿಬಿರದ ಸದುಪಯೋಗ ಪಡಿಸಿಕೊಳ್ಳಿ ಎಂದು ಲಯನ್ಸ್ ಕ್ಲಬ್ ಮುಖ್ಯ ಅಧ್ಯಕ್ಷರು ಸಿದ್ದಲಿಂಗಯ್ಯ ಸೊಪ್ಪಿಮಠ ಕಾರ್ಯಕ್ರಮದಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಮುಖ್ಯ ಅಧ್ಯಕ್ಷರು ಸಿದ್ದಲಿಂಗಯ್ಯ ಸೊಪ್ಪಿಮಠ ಮತ್ತು ಸದಸ್ಯರು, ಶಿವಾನಿ ಗ್ರಾಮೀಣ ಮಹಿಳಾ ಅಭಿವೃದ್ಧಿ ಸ್ವಯಂ ಸೇವಾ ಸಂಘ ಮಸ್ಕಿ ಅಧ್ಯಕ್ಷರು ಶ್ರೀಮತಿ ಪುಷ್ಪಾ ಬಿಜ್ಜಾಳು ಮತ್ತು ಸದಸ್ಯರು, ಹೆಚ್. ಸಿ. ಜಿ ಕ್ಯಾನ್ಸರ್ ಹಾಸ್ಪಿಟಲ್ ಕಲಬುರ್ಗಿ ಸಿಬ್ಬಂದಿ ವರ್ಗ, ಡಾ//ಶಿವಶರಣಪ್ಪ ಇತ್ಲಿ ಫೌಂಡೇಶನ್ ಅಧ್ಯಕ್ಷರಾದ ಡಾ//ಶಿವಶರಣಪ್ಪ ಇತ್ಲಿ ಮತ್ತು ಸದಸ್ಯರು ಸೇರಿದಂತೆ ಸಾರ್ವಜನಿಕರಿದ್ದರು.
Be the first to comment