ಪ್ರಸ್ತುತ ವಿಷಯ ಹಂಚಿಕೊಂಡ ಆಲೂರಿನ ದೈವಮಂಡಳಿ ಅಭಿನಂದನಾರ್ಹರು..!!

ವರದಿ ಕಾಶಿನಾಥ ಬಿರಾದಾರ ನಾಲತವಾಡ

ಜಿಲ್ಲಾ ಸುದ್ದಿಗಳು

ವಿಜಯಪುರ

ಆಲೂರಿನ ಪ್ರತಿಷ್ಠಿತ ಮನೆತನದ ಸಂಜಾತರಾದ ಸನ್ಮಾನ್ಯಶ್ರೀ ಈರಪ್ಪಗೌಡ್ರ. ಮ.ಹಿರೇಗೌಡ್ರ ಸುಶೀಲರು, ಸಂಸ್ಕಾರವಂತರು, ಸೌಜನ್ಯಪೂರ್ಣರು..!! ಅವರ ಕಾಯಕ ಧರ್ಮ ಮತ್ತುನಿಷ್ಠೆ ಅನನ್ಯ..!! ಕ್ಷಣಮಾತ್ರವೂ ಕಾಯಕದಿಂದ ವಿಮುಖರಾಗದೇ ಸದಾ ಕ್ರಿಯಾಶೀಲರಾಗಿರುತ್ತಾರೆ..!! ಶ್ರಾವಣ ಮಾಸದ ಪುರಾಣ ಸಂದರ್ಭದಲ್ಲಂತೂ ತಿಂಗಳಪರ್ಯಂತ ಶ್ರದ್ಧೆಯಿಂದ ಭಕ್ತಿಸೇವೆಗೆ ಅಣಿಯಾಗುವ ಈರಪ್ಪಗೌಡ್ರು ದೈವಭಕ್ತರು..!! ಆಲೂರಿನ ಗತಕಾಲದ ಇತಿಹಾಸವನ್ನ ಅರಳುಹುರಿದಂತೆ ಮಾತನಾಡುತ್ತಾರೆ.ಅಂದಿನ ಪೂಜ್ಯಹಿರಿಯರನ್ನ, ಎಂದೂ ಮರೆಯದ ಅಂದಿನ ಶಿಕ್ಷಕರನ್ನ, ಅಂದಿನ ಹವ್ಯಾಸಿ ರಂಗಭೂಮಿ ಕಲಾವಿದರನ್ನ, ಅಂದಿನ ಶ್ರೀಮಂತ ಸಂಸ್ಕೃತಿಯನ್ನ ನೆನಪಿಸಿಕೊಳ್ಳುತ್ತಾರೆ..!! ಆಲೂರಿನ ನಾಟಕ ಪರಂಪರೆಯ ಇತಿಹಾಸದಲ್ಲಿ ರಕ್ತರಾತ್ರಿ ಪೌರಾಣಿಕ ನಾಟಕ ಅಭೂತಪೂರ್ವ ಪ್ರದರ್ಶನಕಂಡಿತ್ತು..!! ಅದರಲ್ಲಿ ಈರಪ್ಪಗೌಡ್ರ ಕೃಷ್ಣ ಪರಮಾತ್ಮನ ಪಾತ್ರ ಅಮೋಘವಾಗಿತ್ತು..!! ಆಲೂರ ಗತಕಾಲವನ್ನ ಪ್ರಸ್ತುತ ಸಾಮಾಜಿಕ ಬದುಕನ್ನ ಪ್ರೀತಿಸುವ ಈರಪ್ಪಗೌಡ್ರು ಆಲೂರ ಆರಾದ್ಯದೈವ ವರಮಾರುತೇಶನ ಮಂಗಲಕಾರ್ಯಾಲಯಕ್ಕೆ 50000/- ರೂ,ಗಳನ್ನ ಭಕ್ತಿಕಾಣಿಕೆಯಾಗಿ ಸಲ್ಲಿಸಿದ್ದಾರೆ..!! ಮಾರುತೇಶನ ಕೃಪೆಯಿಂದ ಶ್ರೀಯುತರು ಸದಾಕಾಲ ಆರೋಗ್ಯದಿಂದ ಸಕಲಸೌಭಾಗ್ಯದೊಂದಿಗೆ ನೂರ್ಕಾಲ ಚನ್ನಾಗಿ ಬಾಳಲೆಂದು ಸಮಸ್ತ ಆಲೂರ ನಾಗರಿಕರು ಹಾರೈಸುತ್ತಾರೆ..!!

CHETAN KENDULI

Be the first to comment

Leave a Reply

Your email address will not be published.


*